-->
1000938341
ಈ ಒಂದು ಎಲೆ ನಿಮ್ಮ ಕೂದಲಿನ ಎಲ್ಲಾ ಸಮಸ್ಯೆಗಳಿಗೆ ರಾಮಬಾಣದಂತೆ ಪರಿಹಾರ ನೀಡುತ್ತದೆ...!

ಈ ಒಂದು ಎಲೆ ನಿಮ್ಮ ಕೂದಲಿನ ಎಲ್ಲಾ ಸಮಸ್ಯೆಗಳಿಗೆ ರಾಮಬಾಣದಂತೆ ಪರಿಹಾರ ನೀಡುತ್ತದೆ...!


ಬ್ರಾಹ್ಮಿ ಇದೊಂದು ಗಿಡಮೂಲಿಕೆಯಾಗಿದ್ದು, ಆಯುರ್ವೇದಲ್ಲಿ ಇದನ್ನು ಅದ್ಭುತ ಸಸ್ಯವೆಂದು ಪರಿಗಣಿಸಲಾಗಿದೆ. ಏಕೆಂದರೆ ಈ ಸಸ್ಯದ ಎಲ್ಲಾ ಭಾಗಗಳು ಎಂದರೇ ಇದರ ಎಲೆಗಳು, ಹೂವುಗಳು ಮತ್ತು ಬೇರುಗಳು ಸಹ ಔಷಧೀಯ ಗುಣಗಳನ್ನು ಹೊಂದಿವೆ. 

ತಲೆಹೊಟ್ಟಿನಿಂದ ಮುಕ್ತಿ ನೀಡುತ್ತದೆ: ಬ್ರಾಹ್ಮಿಯ ಬಳಕೆ ತಲೆ ಹೊಟ್ಟಿನ ನಿವಾರಣೆಗೆ ಸಹಕಾರಿಯಾಗುತ್ತದೆ. ಇದು ನೆತ್ತಿಯನ್ನು ಪೋಷಿಸುವುದಲ್ಲದೇ ಆರೋಗ್ಯಕರವಾಗಿರುವಂತೆ ನೋಡಿಕೊಳ್ಳುತ್ತದೆ. 


ಕೂದಲು ಉದುರುವಿಕೆ ತಡೆಯುತ್ತದೆ: ಬ್ರಾಹ್ಮಿ ಎಣ್ಣೆ ಒಂಗಿದ ನೆತ್ತಿಗೆ ತೇವಾಂಶವನ್ನು ಒದಗಿಸಿ ಕೂದಲು ಉದುರುವುದನ್ನು ಕಡಿಮೆಮಾಡುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್‌ ಗುಣಗಳು ನೆತ್ತಿಯನ್ನು ಸೋಂಕುಗಳಿಂದ ರಕ್ಷಿಸುತ್ತದೆ. 

ಸೀಳು ಕೂದಲಿನ ಸಮಸ್ಯೆಗೆ ರಾಮಬಾಣ: ಬ್ರಾಹ್ಮಿ ಪುಡಿಯನ್ನು ಕೂದಲಿಗೆ ನಿಯಮಿತವಾಗಿ ಬಳಸಿದರೇ ಅದು ಕೂದಲಿನ ಒಡೆದ ತುದಿಗಳನ್ನು ಸರಿಪಡಿಸುತ್ತದೆ. ಅಲ್ಲದೇ ಕೂದಲು ಉದ್ದವಾಗಿ ಬೆಳೆಯುವಂತೆ ನೋಡಿಕೊಳ್ಳುತ್ತದೆ. 


ಒತ್ತಡವನ್ನು ನಿಯಂತ್ರಿಸಬಹುದು: ಬ್ರಾಹ್ಮಿ ಎಣ್ಣೆಯನ್ನು ತಲೆಗೆ ಹಚ್ಚಿ ಮಸಾಜ್ ಮಾಡುವುದರಿಂದ ಒತ್ತಡದಿಂದ ಉತ್ತಮ ಪರಿಹಾರ ಸಿಗುತ್ತದೆ. 

Ads on article

Advertise in articles 1

advertising articles 2

Advertise under the article