-->
1000938341
ಸೋದರಿಯರಿಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ 10ಮಂದಿ ಕಾಮೂಕರು: ಬಿಜೆಪಿ ನಾಯಕನ ಪುತ್ರ ಪ್ರಮುಖ ರೂವಾರಿ

ಸೋದರಿಯರಿಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ 10ಮಂದಿ ಕಾಮೂಕರು: ಬಿಜೆಪಿ ನಾಯಕನ ಪುತ್ರ ಪ್ರಮುಖ ರೂವಾರಿ


ರಾಯ್​ಪುರ: ಸಂಬಂಧಿಕರ ಮನೆಯಲ್ಲಿ ರಕ್ಷಾಬಂಧನವನ್ನು ಮುಗಿಸಿ ವಾಪಸ್​ ಬರುತ್ತಿದ್ದ ಸೋದರಿಯರಿಬ್ಬರ ಮೇಲೆ 10 ಮಂದಿ ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಛತ್ತೀಸ್​ಗಢದ ರಾಯ್​ಪುರದಲ್ಲಿ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 10 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಇದರಲ್ಲಿ ಛತ್ತಿಸಗಢ ರಾಜ್ಯ ಬಿಜೆಪಿ ಘಟಕದ ಪ್ರಭಾವಿ ನಾಯಕರೊಬ್ಬನ ಪುತ್ರ ಪ್ರಕರಣದ ಪ್ರಮುಖ ರೂವಾರಿ ಎಂದು ಹೇಳಲಾಗಿದೆ. ಆರೋಪಿಗಳು ಸಂತ್ರಸ್ತೆಯರ ಜೊತೆಗಿದ್ದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೃತ್ಯ ಎಸಗಿದ್ದಾರೆ ಎಂದು ವರದಿಯಾಗಿದೆ.

ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್​ ಅಧಿಕಾರಿ ಮಾಹಿತಿ ನೀಡಿ, ರಾಯ್​ಪುರದ ನಿವಾಸಿಗಳಾದ ಸೋದರಿಯರಿಬ್ಬರು ರಕ್ಷಾಬಂಧನದ ದಿನ ತಮ್ಮ ಸಂಬಂಧಿಕರ ಮನೆಗೆ ತೆರಳಿ ವಾಪಸ್​ ಆಗುತ್ತಿದ್ದರು. ಈ ವೇಳೆ ನಗರದ ಹೊರವಲಯದಲ್ಲಿ ಮೂವರು ಆರೋಪಿಗಳು ಇವರಿಬ್ಬರನ್ನು ಅಡ್ಡಗಟ್ಟಿದ್ದಾರೆ. ಬಳಿಕ ಅವರ ಬಳಿಯಿದ್ದ ಮೊಬೈಲ್​, ಹಣ ಹಾಗೂ ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆ.

ಇದಾದ ಕೆಲಕ್ಷಣಗಳಲ್ಲಿ ಮತ್ತೆ ಏಳು ಮಂದಿ ಆರೋಪಿಗಳು ಸ್ಥಳಕ್ಕೆ ಬಂದಿದ್ದಾರೆ. ಅವರೆಲ್ಲಾ ಸೇರಿ ಸಹೋದರಿಯರಿಬ್ಬರನ್ನು ಎಳೆದು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಅವರ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಸಂತ್ರಸ್ತೆಯರ ಜೊತೆಗಿದ್ದ ವ್ಯಕ್ತಿಯ ಮೇಲೆ ಆರೋಪಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.

ಪ್ರಕರಣ ಸಂಬಂಧ ಆರೋಪಿಗಳನ್ನು ಬಂಧಿಸಲಾಗಿದ್ದು, ಈ ಪೈಕಿ ರಾಜ್ಯ ಬಿಜೆಪಿ ಘಟಕದ ಪ್ರಭಾವಿ ನಾಯಕನ ಪುತ್ರ ಪೂನಮ್​ ಠಾಕೂರ್​ ಪ್ರಮುಖ ಆರೋಪಿ ಎಂದು ತಿಳಿದು ಬಂದಿದೆ. ಈತನ ಮೇಲೆ ಈಗಾಗಲೇ ಸಾಕಷ್ಟು ಅಪರಾಧ ಪ್ರಕರಗಳ ವಿಚಾರಣೆ ನಡೆಯುತ್ತಿದ್ದು, ಇತ್ತೀಚಿಗಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿ ಹೊರ ಬಂದಿದ್ದ ಎಂದು ತನಿಖಾಧಿಕಾರಿ ಮಾಹಿತಿ ನೀಡಿದ್ದಾರೆ.

Ads on article

Advertise in articles 1

advertising articles 2

Advertise under the article