Mangalore - ಗಂಡನ ಗೆಳೆಯನಿಂದಲೇ ಅಸಭ್ಯ ವರ್ತನೆ- ಪ್ರಶ್ನಿಸಿದ ಮಹಿಳೆಯ ಬಟ್ಟೆ ಹರಿದ, ಗಂಡನಿಗೆ ಹಲ್ಲೆ ಮಾಡಿದ !


ಮಂಗಳೂರು:  ಉದ್ಯೋಗಕ್ಕೆ ಹೋಗುವ ವೇಳೆ ಮಹಿಳೆಗೆ ಗಂಡನ ಗೆಳೆಯನ ಅಸಭ್ಯವಾಗಿ ವರ್ತಿಸಿದ್ದು, ಈ ಬಗ್ಗೆ ಪತಿಯೊಂದಿಗೆ ಪ್ರಶ್ನಿಸಲು ಹೋದಾಗ‌ ತಲವಾರು ತೋರಿಸಿ ಹಲ್ಲೆ ‌ನಡೆಸಿದ ಘಟನೆ ನಡೆದಿದೆ.



 ಕಡಬ ನಿವಾಸಿಯಾದ 23 ವರ್ಷದ ಮಹಿಳೆ ಈ ಬಗ್ಗೆ ದೂರು ನೀಡಿದ್ದಾರೆ.  ಪ್ರತೀದಿನ ಈ ಮಹಿಳೆ  ನೆಲ್ಯಾಡಿಯಿಂದ ಮಂಗಳೂರಿಗೆ ಕೆಲಸಕ್ಕೆ ಹೋಗಿ ಬರುತ್ತಿದ್ದರು. ಕಳೆದ ಕೆಲದಿನಗಳಿಂದ ಕೆಲಸ ಮುಗಿಸಿ ವಾಪಾಸು ಮನೆಗೆ ಬರುವಾಗ ನೆಲ್ಯಾಡಿಯಲ್ಲಿರುವ ವೇಳೆ ಮಹಿಳೆಯ ಗಂಡನ ಸ್ನೇಹಿತನಾದ  ಲಕ್ಷ್ಮೀನಾರಾಯಣ ಎಂಬಾತನು  ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದು, ಅಸಭ್ಯವಾಗಿ ಮಾತನಾಡುತ್ತಿದ್ದನು.
 
ಈ ಬಗ್ಗೆ  ಮಹಿಳೆ ತನ್ನ ಪತಿಯ ಬಳಿ ತಿಳಿಸಿದ್ದು, ಆರೋಪಿಯ ವರ್ತನೆಯ ಬಗ್ಗೆ ವಿಚಾರಿಸುವ ಸಲುವಾಗಿ ಮಹಿಳೆ ಹಾಗೂ ಅವರ ಗಂಡ ಕಾರಿನಲ್ಲಿ ಚಾಲಕರಾಗಿ ಸುರೇಶ್ ಎಂಬವರನ್ನು ಕೂಡಿಕೊಂಡು ಆರೋಪಿಯ ಮನೆಗೆ ತೆರಳಿ ವಿಚಾರಣೆ ಮಾಡಿದ್ದಾರೆ. ಆಗ ಆರೋಪಿ ಲಕ್ಷ್ಮೀ ನಾರಾಯಣ ಇವರಿಗೆ ತಲವಾರನ್ನು ತೋರಿಸಿ ಕೊಲ್ಲುವುದಾಗಿ ಜೀವಬೆದರಿಕೆಯೊಡ್ಡಿದ್ದಾನೆ. ಮಹಿಳೆಯ ವಸ್ತ್ರವನ್ನು ಹರಿದು ಅವರಿಗೆ ಮತ್ತು ಅವರ ಗಂಡನಿಗೆ ದೊಣ್ಣೆಯಿಂದ ಮತ್ತು ಕೈಯಿಂದ ಹಲ್ಲೆ ನಡೆಸಿದ್ದಾನೆ .

ಈ ಬಗ್ಗೆ ಮಹಿಳೆ ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.