-->
1000938341
kadaba:- ಕಡಬದಲ್ಲಿ ಅದ್ದೂರಿಯ ಸ್ವಾತಂತ್ರ್ಯ ದಿನಾಚರಣೆ ಆಚರಣೆ

kadaba:- ಕಡಬದಲ್ಲಿ ಅದ್ದೂರಿಯ ಸ್ವಾತಂತ್ರ್ಯ ದಿನಾಚರಣೆ ಆಚರಣೆ

ಕಡಬ

ಕಡಬ ತಾಲೂಕು ರಾಷ್ಟ್ರೀಯ ಹಬ್ಬಗಳನ್ನು ಆಚರಣಾ ಸಮಿತಿ ನೇತೃತ್ವದಲ್ಲಿ 76 ಸ್ವಾತಂತ್ರ್ಯ ದಿನಾಚರಣೆ (2023) ನ್ನು ಕಡಬ ತಾಲೂಕಿನಲ್ಲಿ ವಿಜ್ರಂಭನೆಯಿಂದ ಆಚರಿಸಲಾಯಿತು.

ರಾಷ್ಟ್ರ ಧ್ವಜಾರೋಹಣ ಹಾಗೂ ಸಭಾ ಸಮಾರಂಭದ ಅಧ್ಯಕ್ಷತೆಯನ್ನು ಸನ್ಮಾನ್ಯ ಬಿ.ಆರ್ ಲೋಕೇಶ್ ಗ್ರೇಡ್2 ತಹಶಿಲ್ದಾರ್ ಪುತ್ತೂರು ಇವರು ನೆರವೇರಿಸಿದರು. ಸುಳ್ಯ ವಿಧಾಸಭಾ ಕ್ಷೇತ್ರದ ಶಾಸಕಿ ಸನ್ಮಾನ್ಯ ಕು.ಭಾಗೀರಥಿ ಮುರುಳ್ಯ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ಕೋರಿದರು. ಭಾರತೀಯ ಸೇನೆಯ ನಿವೃತ್ತ ಯೋಧ ರಘುನಾಥ್ ಹೆಬ್ಬಾರ್ ಅವರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮುಖ್ಯ ಭಾಷಣಗಾರರಾಗಿ  ಶ್ರೀ ಓಬಳೇಶ್ವರ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಪುತ್ತೂರು ಇವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಕಡಬ ಪೇಟೆಯಲ್ಲಿ ಅದ್ದೂರಿಯಾದ ಮೆರವಣಿಗೆ ನಡೆಯಿತು.ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ರಾಷ್ಟ್ರ ಧ್ವಜವಂದನಾ ಕಾರ್ಯಕ್ರಮ ನಡೆಯಿತು. ಜನಪ್ರತಿನಿಧಿಗಳು,ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳು, ಶಾಲಾ ಕಾಲೇಜು ಮುಖ್ಯಸ್ಥರುಗಳು ವಿದ್ಯಾರ್ಥಿಗಳು, ವಿವಿಧ ಇಲಾಖಾ ಅಧಿಕಾರಿಗಳು, ಸಿಬ್ಬಂದಿಗಳು,ಸಾರ್ವಜನಿಕರು ಕಾರ್ಯಕ್ರಮಕ್ಕೆ ಸಾಥ್ ನೀಡಿದರು. ಸಭಾ ಕಾರ್ಯಕ್ರಮದಲ್ಲಿ ಶಿಕ್ಷಣ, ಸಾಹಿತ್ಯ, ಕಲೆ,ಕ್ರೀಡಾ ಸಾಮಾಜಿಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮಗಳ ನಡೆಯಿತು.

ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಚೆನ್ನಪ್ಪ ಗೌಡ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಶ್ರೀ ಪಕೀರ ಮೂಲ್ಯ,ಯುವ ಸಬಲೀಕರಣ ಅಧ್ಯಕ್ಷ ಶಿವಪ್ರಸಾದ್ ಮೈಲೇರಿ,ಪ್ರಾಂಶುಪಾಲರುಗಳಾದ ಜನಾರ್ದನ ಗೌಡ, ಡಾ.ವೇದಾವತಿ, ಉಪಸ್ಥಿತರಿದ್ದರು.
ಕಡಬ ತಾಲೂಕು ಉಪತಹಶಿಲ್ದಾರ್ ಗೋಪಾಲ್ ಅವರು ಸ್ವಾಗತಿಸಿ,  ಶಿಕ್ಷಕ ದೇವಿಪ್ರಸಾದ್‌ರವರು ವಂದಿಸಿದರು.

Ads on article

Advertise in articles 1

advertising articles 2

Advertise under the article