ಟಿವಿ ಆಂಕರ್‌ಗಳಿಗೂ ಬಂತು ಕುತ್ತು..!- ದೇಶದಲ್ಲೇ ಮೊದಲ ಆರ್ಟಿಫೀಷಿಯಲ್ ಆಂಕರ್

ಟಿವಿ ಆಂಕರ್‌ಗಳಿಗೂ ಬಂತು ಕುತ್ತು..!- ದೇಶದಲ್ಲೇ ಮೊದಲ ಆರ್ಟಿಫೀಷಿಯಲ್ ಆಂಕರ್





ದೇಶದಲ್ಲೇ ಮೊದಲ ಬಾರಿಗೆ ಕೃತಕ ಬುದ್ದಿಮತ್ತೆ ಆಧರಿಸಿದ (ಆರ್ಟಿಫೀಷಿಯಲ್ ಇಂಟೆಲಿಜೆನ್ಸ್) ಬಳಿಸಿದ ಟಿವಿ ಆಂಕರ್‌ಗಳ ಸೇವೆ ಆರಂಭವಾಗಿದೆ.



ಒರಿಸ್ಸಾದ OTV ಎಂಬ ಖಾಸಗಿ ಸುದ್ದಿ ಸಂಸ್ಥೆ ತನ್ನ ಕೃತಕ ಆಂಕರ್‌ನ್ನು ಜನರಿಗೆ ಪರಿಚಯಿಸಿದೆ.

ಇಂಗ್ಲಿಷ್ ಮತ್ತು ಒಡಿಯಾ ಭಾಷೆಯಲ್ಲಿ ಮಾತನಾಡುವ ಈ ಐಎ ಆಂಕರ್ ಸುಲಲಿತವಾಗಿ ಮಾತನಾಡಿ ಜನಮನ ಗೆದ್ದಿದ್ದಾರೆ.



ಒರಿಸ್ಸಾದ OTV ಸುದ್ದಿ ಸಂಸ್ಥೆ ತನ್ನ ನೂತನ ಆಂಕರ್‌ಗೆ ಲಿಸಾ ಎಂದು ನಾಮಕರಣ ಮಾಡಿದ್ದಾರೆ. ಹ್ಯಾಂಡ್‌ಲೂಮ್‌ ಸಾರಿ ಮತ್ತು ಆಕರ್ಷಕ ಮೆರೂನ್ ಕಲರ್‌ನ ರವಿಕೆ ಧರಿಸಿ ಆಕರ್ಷಕವಾಗಿ ಕಾಣಿಸಿಕೊಂಡ ಆಂಕರ್ ಬಗ್ಗೆ ಸುದ್ದಿ ಸಂಸ್ಥೆ ವಿಶೇಷ ಶ್ಲಾಘನೆ ವ್ಯಕ್ತಪಡಿಸಿದೆ.



ಕೃತಕ ಆಂಕರ್‌ಗಳ ಬಳಕೆಯಲ್ಲಿ ಇದೊಂದು ಮೈಲುಗಲ್ಲು ಎಂದು ಬಣ್ಣಿಸಿರುವ OTV ಆಡಳಿತ ನಿರ್ದೇಶಕ ಜಗ್ಗಿ ಮಂಗತ್ ಪಾಂಡ, ಹಲವು ಆರಂಭಗಳಿಗೆ ಇದು ಪ್ರೇರಕ ಶಕ್ತಿಯಾಗಲಿದೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.



ಈ ಬೆಳವಣಿಗೆ, ದೇಶದ ವಿವಿಧೆಡೆ ಇರುವ ಸುದ್ದಿ ಸಂಸ್ಥೆಯ ಆಂಕರ್‌ಗಳ ಹುದ್ದೆಗೆ ಕುತ್ತು ತರುವ ಸಾಧ್ಯತೆ ಇದೆ.