-->
1000938341
ಮಂಗಳೂರು: ಬೈಕ್ ಡಿವೈಡರ್ ಗೆ ಬಡಿದು ಭೀಕರ ಅಪಘಾತ - ಇಂಜಿನಿಯರಿಂಗ್ ವಿದ್ಯಾರ್ಥಿ ಬಲಿ

ಮಂಗಳೂರು: ಬೈಕ್ ಡಿವೈಡರ್ ಗೆ ಬಡಿದು ಭೀಕರ ಅಪಘಾತ - ಇಂಜಿನಿಯರಿಂಗ್ ವಿದ್ಯಾರ್ಥಿ ಬಲಿ


ಮಂಗಳೂರು: ಅತಿವೇಗದಿಂದ ಬಂದ ಬೈಕೊಂದು ಸ್ಕಿಡ್ ಆಗಿ ಹಾರಿಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡ ಇಂಜಿನಿಯರಿಂಗ್ ವಿದ್ಯಾರ್ಥಿಯೋರ್ವನು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಮಂಗಳೂರು ಹೊರವಲಯದ ಅಡ್ಯಾರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. 

ಕೇರಳ ಮೂಲದ, ವಲಚ್ಚಿಲ್ ಶ್ರೀನಿವಾಸ್ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿ ಮಹಮ್ಮದ್ ನಶತ್(21) ಮೃತಪಟ್ಟ ವಿದ್ಯಾರ್ಥಿ.

ಮಧ್ಯಾಹ್ನ 11.40ರ ವೇಳೆಗೆ ನಶತ್ ಪಡೀಲ್ ನಿಂದ ವಲಚ್ಚಿಲ್ ಕಡೆಗೆ ಅತಿವೇಗದಲ್ಲಿ ಬೈಕ್ ಚಲಾಯಿಸಿಕೊಂಡು ಬರುತ್ತಿದ್ದರು. ಈ ವೇಳೆ ಬೈಕ್ ಸ್ಕಿಡ್ ಆಗಿ ಡಿವೈಡರ್ ಬಡಿದು ಅಪಘಾತ ಸಂಭವಿಸಿದೆ. ಪರಿಣಾಮ ನಶತ್ ಬೈಕ್ ನಿಂದ ಹಾರಲ್ಪಟ್ಡು ವಿದ್ಯುತ್ ಕಂಬಕ್ಕೆ ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಪಘಾತದ ರಭಸಕ್ಕೆ ನಶತ್ ತಲೆ ಛಿದ್ರಗೊಂಡಿದೆ. ಅಲ್ಲದೆ ಬೈಕ್ ಕೂಡಾ ಹಾರಿ ಪರ್ಲಾಂಗ್ ದೂರ ಬಿದ್ದಿದೆ. ಅಪಘಾತದ ಭೀಕರ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ತಕ್ಷಣ ಸ್ಥಳಕ್ಕೆ ಮಂಗಳೂರು ದಕ್ಷಿಣ ಸಂಚಾರ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹವನ್ನು ವೆನ್ಲಾಕ್ ಆಸ್ಪತ್ರೆಗೆ ರವಾನಿಸಿದ್ದಾರೆ‌.

Ads on article

Advertise in articles 1

advertising articles 2

Advertise under the article