ಗುಪ್ತಾಂಗ ತೋರಿಸಿ ಮಹಿಳೆಯೊಂದಿಗೆ ಉಬರ್ ಚಾಲಕ ಅನುಚಿತ ವರ್ತನೆ
Thursday, June 22, 2023
ಬೆಂಗಳೂರು: ಮಹಿಳಾ ಪ್ರಯಾಣಿಕೆಯೊಂದಿಗೆ ಉಬರ್ ಚಾಲಕನೋರ್ವನು ಅಸಭ್ಯವಾಗಿ ವರ್ತಿಸಿ ತನ್ನ ಗುಪ್ತಾಂಗವನ್ನು ತೋರಿಸಿ ವಿಕೃತಿ ಮೆರೆದಿರುವ ಘಟನೆ ನಗರದ ಬಿಟಿಎಂ ಲೇಔಟ್ 2ನೇ ಹಂತದಲ್ಲಿ ನಡೆದಿದೆ.
ಬಿಟಿಎಂ 2ನೇ ಹಂತದಿಂದ ಜೆಪಿನಗರ ಮೆಟ್ರೋ ಸ್ಟೇಷನ್‌ವರೆಗೆ ಯುವತಿಯೋರ್ವರುವಕ್ಯಾಬ್ ಬುಕ್ ಮಾಡಿದ್ದರು. ತನ್ನೊಂದಿಗೆ ಉಬರ್ ಚಾಲಕ ಅನುಚಿತವಾಗಿ ವರ್ತಿಸಿದ್ದನ್ನು ಆಕೆ ಲಿಂಕ್ಸ್‌ಇನ್‌ನಲ್ಲಿ ಪೋಸ್ಟ್ ಹಾಕಿ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದರು.
ಬುಧವಾರ ತಡರಾತ್ರಿ ಈ ಯುವತಿ ಬಿಟಿಎಂ 2ನೇ ಹಂತದಿಂದ ಜೆಪಿನಗರ ಮೆಟ್ರೋ ಸ್ಟೇಷನ್‌ವರೆಗೆ ಉಬರ್ ಕ್ಯಾಬ್ ಬುಕ್ ಮಾಡಿದ್ದಾರೆ. ಆಕೆ ಕ್ಯಾಬ್ ಏರಿದ ಬಳಿಕ ಸ್ವಲ್ಪ ಮಂಯದೆ ಹೋಗಿ ಚಾಲಕ ರೂಟ್ ಬದಲಿಸಿದ್ದಾನೆ. ಈ ವೇಳೆ ಯುವತಿ ಆತನಿಗೆ ಸರಿಯಾದ ಮಾರ್ಗದಲ್ಲಿ ಹೋಗುವಂತೆ ತಿಳಿಸಿದ್ದಾರೆ.
ಸರಿಯಾದ ರೂಟ್ ಅನುಸರಿಸಿದ ಬಳಿಕ ಚಾಲಕನ ನಡೆಯ ಬಗ್ಗೆ ಯುವತಿ ಅನುಮಾನಗೊಂಡಿದ್ದಾಳೆ. ಆದ್ದರಿಂದ ಆಜೆ ಅರ್ಧ ದಾರಿಯಲ್ಲೆ ಇಳಿದಿದ್ದಾರೆ. ಉಬರ್ ಚಾಲಕನಿಗೆ ಹಣ ಪಾವತಿ ಮಾಡುತ್ತಿದ್ದ ವೇಳೆ ಚಾಲಕ ಯುವತಿಗೆ ತನ್ನ ಗುಪ್ತಾಂಗವನ್ನು ತೋರಿಸಿ ಅಸಭ್ಯವಾಗಿ ವರ್ತಿಸಿದ್ದಾನೆ. ಇದರಿಂದ ಗಾಬರಿಗೊಂಡ ಯುವತಿ ಸ್ಥಳದಿಂದ ಓಡಿ ಹೋಗಿದ್ದಾರೆ. ಕೆಲ ಹೊತ್ತಿನ ಬಳಿಕ ನಡೆದ ಘಟನೆ ಕುರಿತು ಮಹಿಳೆ ಲಿಂಕ್‌ಇನ್ ಉಬರ್ ಕಂಪನಿಯವರಿಗೆ ದೂರು ಕೊಟ್ಟಿದ್ದಾರೆ. ಯುವತಿ ದೂರಿಗೆ ಪ್ರತಿಕ್ರಿಯಿಸಿರುವ ಸಂಸ್ಥೆ ಆತನ ವಿರುದ್ಧ ಕ್ರಮ ಜರುಗಿಸಿರುವುದಾಗಿ ತಿಳಿಸಿದೆ.