ಚೀನಾ: ಜೂಜಾಟ ಆಡುತ್ತಿದ್ದ ವೃದ್ಧನೋರ್ವನು ತನ್ನ ಸ್ವಂತ ಮೊಮ್ಮಗಳನ್ನು ಅಪಹರಿಸಿ ತನ್ನ ಮಗಳ ಬಳಿಯೇ 60 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿರುವ ಚೀನಾದ ಶಾಂಘೈನಲ್ಲಿ ನಡೆದಿದೆ.
ಚೀನಾದ ಶಾಂಘೈ ನಿವಾಸಿ ಯುವಾನ್(65) ಅಪಹರಣ ಮಾಡಿದ ವೃದ್ಧ
ವೃದ್ಧ ಯುವಾನ್ ತನ್ನ ನಾಲ್ಕು ವರ್ಷದ ಮೊಮ್ಮಗಳನ್ನು ಶಾಲೆಯಿಂದ ಅಪಹರಿಸಿದ್ದಾನೆ. ಬಳಿಕ ಅಪಹರಣಕಾರನಂತೆ ವರ್ತಿಸುತ್ತಾ ತಮ್ಮ ಸ್ವಂತ ಪುತ್ರಿಯ ಬಳಿಯೇ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. “ನೀವು ನನಗೆ ಇನ್ನು ಮೂರು ದಿನಗಳಲ್ಲಿ 60 ಲಕ್ಷ ರೂ. ನೀಡದಿದ್ದಲ್ಲಿ ನಿಮ್ಮ ಪುತ್ರಿಯನ್ನು ಮತ್ತೆ ನೋಡುವುದಿಲ್ಲ.” ಎಂದು ಬೆದರಿಕೆ ಹಾಕಿದ್ದಾರೆ. ಬಳಿಕ ಪೊಲೀಸರು ವೃದ್ಧನನ್ನು ಪತ್ತೆ ಮಾಡಿ ಜೈಲಿಗಟ್ಟಿದ್ದಾರೆ.
ಯುವಾನ್ ಜೂಜಾಡಿ ಲಕ್ಷಾಂತರ ರೂ. ಹಣ ಕಳೆದುಕೊಂಡಿದ್ದ. ಸಾಲದ ಸುಳಿಯಲ್ಲಿ ಸಿಲುಕಿದ್ದ ಆತ ಸಾಲದಿಂದ ಪಾರಾಗಲು ಮೊಮ್ಮಗಳನ್ನು ಅಪಹರಿಸಿದ್ದಾನೆ. ನಾನು ಈ ಸ್ಥಿತಿಗೆ ಬರಲು ಪುತ್ರಿಯೇ ಕಾರಣ. ಆಕೆಗೆ ನಾನು ಚೆನ್ನಾಗಿ ಬದುಕುವುದು ಇಷ್ಟವಿಲ್ಲ, ನನ್ನ ಸಾವನ್ನೇ ಬಯಸುತ್ತಿದ್ದಾಳೆ ಎಂದು ವೃದ್ಧ ಪೊಲೀಸರ ಬಳಿ ಹೇಳಿಕೊಂಡಿದ್ದಾರೆಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.