-->
ಮಂಗಳೂರು: ಜ್ಯುವೆಲ್ಲರಿ ಸಿಬ್ಬಂದಿ ಹತ್ಯೆ ಪ್ರಕರಣ - ಕಪ್ಪು ಬಣ್ಣದ ಡ್ರೆಸ್, ಕಪ್ಪು ಬ್ಯಾಕ್ ಬ್ಯಾಗ್ ಹಂತಕನ ಪತ್ತೆಗೆ ಕಾರಣ

ಮಂಗಳೂರು: ಜ್ಯುವೆಲ್ಲರಿ ಸಿಬ್ಬಂದಿ ಹತ್ಯೆ ಪ್ರಕರಣ - ಕಪ್ಪು ಬಣ್ಣದ ಡ್ರೆಸ್, ಕಪ್ಪು ಬ್ಯಾಕ್ ಬ್ಯಾಗ್ ಹಂತಕನ ಪತ್ತೆಗೆ ಕಾರಣ


ಮಂಗಳೂರು: ನಗರದಲ್ಲಿ ಫೆ.3ರಂದು ನಡೆದ ಮಂಗಳೂರು ಜ್ಯುವೆಲ್ಲರಿ ಸಿಬ್ಬಂದಿ ಹತ್ಯೆಗೈದು ಪರಾರಿಯಾಗಿರುವ ಹಂತಕನ ಪತ್ತೆಗೆ ಆತ ಧರಿಸಿರುವ ಕಪ್ಪು ಬಣ್ಣದ ಧಿರಿಸು ಹಾಗೂ ಕಪ್ಪು ಬಣ್ಣದ ಬ್ಯಾಕ್ ಬ್ಯಾಗ್ ಪೊಲೀಸರಿಗೆ ಸಹಕಾರಿಯಾಗಿದೆ. ಇದೇ ಕ್ಲೂ ಆಧಾರದಲ್ಲಿ ಪೊಲೀಸರು ಆರೋಪಿಯನ್ನು ತಮ್ಮ ಖೆಡ್ಡಾಕ್ಕೆ ಕೆಡವಿದ್ದಾರೆ‌. ಇದೀಗ ಹಂತಕ ಶಿಫಾಝ್ ನನ್ನು ಪೊಲೀಸರು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

ಆರೋಪಿ ಶಿಫಾಝ್ ಗೆ ಓರ್ವನೇ ಸಿಬ್ಬಂದಿ ಇರುವ ಚಿನ್ನದ ಮಳಿಗೆಯೇ ಟಾರ್ಗೆಟ್. ಗ್ರಾಹಕರಾರು ಇಲ್ಲದೆ ಸಿಬ್ಬಂದಿಯೋರ್ವರೇ ಇರುವ ವೇಳೆ ಗ್ರಾಹಕನ ಸೋಗಿನಂತೆ ಆಗಮಿಸುವ ಈತ ಚಿನ್ನಾಭರಣ ದರೋಡೆ ನಡೆಸುತ್ತಿದ್ದ. ಇದೇ ತಂತ್ರವನ್ನು ಬಳಸಿಕೊಂಡು ಮಂಗಳೂರು ಜ್ಯುವೆಲ್ಲರಿಗೆ ಬಂದು ಸಿಬ್ಬಂದಿ ರಾಘವೇಂದ್ರ ಆಚಾರ್ಯರನ್ನು ಹತ್ಯೆಗೈದು ದರೋಡೆಗೆತ್ನಿಸಿದ್ದಾನೆ. ಆದರೆ ಅಷ್ಟರಲ್ಲಾಗಲೇ ಜ್ಯುವೆಲ್ಲರಿ ಮಾಲಕ ಆಗಮಿಸಿರುವ ಹಿನ್ನಲೆಯಲ್ಲಿ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಆರ್. ಜೈನ್  ಹೇಳಿದ್ದಾರೆ.


ಅಲ್ಲಿಂದ ಎಸ್ಕೇಪ್ ಆದ ಶಿಫಾಝ್ ಸ್ವಲ್ಪ ದೂರ ನಡೆದುಕೊಂಡು ಹೋಗಿ ಬಳಿಕ ರಿಕ್ಷಾ ಮೂಲಕ ಹೋಗಿರುವುದು ತಿಳಿದು ಬಂದಿದೆ. ಈತನ ಪತ್ತೆ ಕಾರ್ಯ ಪೊಲೀಸರಿಗೆ ಭಾರೀ ಸವಾಲಾಗಿತ್ತು‌. ಆ ಬಳಿಕ ಸಿಸಿ ಕ್ಯಾಮರಾದಲ್ಲಿ ದಾಖಲಾಗಿರುವ ಆತನ ಫೋಟೊವನ್ನು ಬಿಡುಗಡೆ ಮಾಡಲಾಗಿತ್ತು. ಈ ಫೋಟೋದ ಆಧಾರದಲ್ಲಿ ಆತನನ್ನು ಕಾಸರಗೋಡು ಹಾಗೂ ಮಂಗಳೂರು ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಕೇರಳದಲ್ಲಿ ಬಂಧಿಸಿದ್ದಾರೆ.

ಆರೋಪಿ ಶಿಫಾಝ್ ಈ ಹಿಂದೆಯೂ ಇದೇ ರೀತಿ ದರೋಡೆ ಕೃತ್ಯ ಎಸಗಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಆದರೆ ಈ ಬಗ್ಗೆ ಯಾವ ಪ್ರಕರಣವೂ ದೃಢಗೊಂಡಿಲ್ಲ. ಈತ ಕಪ್ಪು ಬಣ್ಣದ ಬಟ್ಟೆ ಹಾಗೂ ಬ್ಯಾಕ್  ಬ್ಯಾಗ್ ಅನ್ನೇ ಧರಿಸುತ್ತಿದ್ದು, ಈ ಆಧಾರದ ಮೇಲೆಯೇ ಪೊಲೀಸರು ಈತನನ್ನು ಪತ್ತೆ ಹಚ್ಚಿದ್ದಾರೆ. ಅಲ್ಲದೆ ಕೃತ್ಯ ಎಸಗಲು ಹೋಗುವ ವೇಳೆ 3-4 ಅಂಗಿಗಳನ್ನು ಧರಿಸಿ ಹೋಗುತ್ತಾನೆ. ರಕ್ತದ ಕಲೆಗಳಾದಲ್ಲಿ ಆ ಅಂಗಿಯನ್ನು ಎಸೆದು ಹೋಗುತ್ತಿದ್ದ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.

ಆರೋಪಿಯ ಪತ್ತೆ ಮಾಡಿರುವ ಕಾಸರಗೋಡು ಪೊಲೀಸರು ಹಾಗೂ ಮಂಗಳೂರು ಪೊಲೀಸರ ತಂಡಕ್ಕೆ ಪೊಲೀಸ್ ಕಮಿಷನರ್ ಅಭಿನಂದನೆ ಸನ್ಮಾನ ಮಾಡಿದರು. ಅಲ್ಲದೆ ದಾಖಲೆ ಪತ್ರ ಹಾಗೂ 25 ಸಾವಿರ ರೂ. ಬಹುಮಾನ ನೀಡಿದರು.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article