ಮದುವೆ ಸೀರೆ, ಒಡವೆ ಮೇಲೆಯೇ ಸ್ಕೆತಾಸ್ಕೋಪ್ ಧರಿಸಿ ಲ್ಯಾಬ್ ಪರೀಕ್ಷೆ ಬರೆದ ವಿದ್ಯಾರ್ಥಿನಿ...!


ಕೇರಳ: ವಿದ್ಯಾರ್ಥಿನಿಯೊಬ್ಬಳು ಮದುವೆ ವಸ್ತ್ರದ ಮೇಲ್ಗಡೆ ಬಿಳಿ ಕೋಟು, ಸ್ಟೆತಸ್ಕೋಪ್‌ ಧರಿಸಿ ಲ್ಯಾಬ್ ಪರೀಕ್ಷೆ ಬರೆದಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಕೇರಳದ ಶ್ರೀಲಕ್ಷ್ಮೀ ಅನಿಲ್‌ ಎಂಬವರು ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದರು. ಆದರೆ ಆಕೆಯ ಮದುವೆ ದಿನವೇ ಪರೀಕ್ಷೆಯಿತ್ತು. ಆದರೆ ಎರಡನ್ನೂ ಬಿಡಲಾಗದೇ ಯುವತಿ, ಮದುವೆ ಮುಗಿಸಿ, ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ತೆರಳಿದ್ದಾಳೆ. ವಧುವಾಗಿ ಮದುವೆಗೆ ತಯಾರಾಗಿದ್ದ ಸೀರೆ, ಒಡವೆಗಳ ಮೇಲೆಯೇ ಬಿಳಿಕೋಟ್‌ ಧರಿಸಿ, ಲ್ಯಾಬ್‌ ಪರೀಕ್ಷೆಗೆ ಹಾಜರಾಗಿದ್ದಾಳೆ. ಇದಕ್ಕೆ ಆಕೆಯನ್ನು ಸಹಪಾಠಿಗಳು ಪ್ರೋತ್ಸಾಹಿಸಿದ್ದಾರೆ.

ಮದುವೆ ಹಾಗೂ ಶಿಕ್ಷಣ ಜೀವನದ ಮಹತ್ತರ ಘಟ್ಟಗಳಾಗಿದ್ದು, ಎರಡನ್ನೂ ಯಶಸ್ವಿಯಾಗಿ, ಜಾಣ್ಮೆಯಿಂದ ನಿಭಾಯಿಸುವ ಶ್ರೀಲಕ್ಷ್ಮೀ ಅನಿಲ್ ಪ್ರಯತ್ನಕ್ಕೆ ನೆಟ್ಟಿಗರು ಶಹಬ್ಬಾಸ್‌ ಎಂದಿದ್ದಾರೆ.