-->
1000938341
ಗಿಫ್ಟ್ ವಿಚಾರಕ್ಕೆ ಮನಸ್ತಾಪ : ಲಿವಿಂಗ್ ರಿಲೇಷನ್ ಶಿಪ್ ನಲ್ಲಿದ್ದ ಸಂಗಾತಿಯನ್ನೇ ಹತ್ಯೆಗೈದ ಭೂಪ

ಗಿಫ್ಟ್ ವಿಚಾರಕ್ಕೆ ಮನಸ್ತಾಪ : ಲಿವಿಂಗ್ ರಿಲೇಷನ್ ಶಿಪ್ ನಲ್ಲಿದ್ದ ಸಂಗಾತಿಯನ್ನೇ ಹತ್ಯೆಗೈದ ಭೂಪಬೆಂಗಳೂರು: ಕೇವಲ ಗಿಫ್ಟ್ ವಿಚಾರಕ್ಕೆ ಲಿವಿಂಗ್‌ ರಿಲೇಷನ್ ಶಿಪ್ ನಲ್ಲಿದ್ದ ವ್ಯಕ್ತಿಯೇ ಮಹಿಳೆಯೋರ್ವರನ್ನು ಹತ್ಯೆಗೈದಿರುವ ಘಟನೆ ನಡೆದಿದೆ. ಇದೀಗ ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸುವಲ್ಲಿ ಅಶೋಕನಗರ ಪೊಲೀಸ್ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ. 

ಮಂಡ್ಯ ಮೂಲದ ಕೌಸರ್ ಮುಬೀನಾ ಅವರನ್ನು ಹತ್ಯೆಗೈದಿರುವ ಆರೋಪದಡಿ ಲಿವಿಂಗ್ ರಿಲೇಷನ್‌ಲ್ಲಿದ್ದ ನದೀಂ ಪಾಷನನ್ನು ಪೊಲೀಸರು ಬಂಧಿಸಿದ್ದಾರೆ.

ಕೌಸರ್ ಮುಬೀನಾ ಹಾಗೂ ನದೀಂಪಾಷ ಇಬ್ಬರಿಗೂ ಈ ಹಿಂದೆ ಮದುವೆಯಾಗಿದ್ದು, ಇಬ್ಬರೂ ದಾಂಪತ್ಯದಿಂದ ದೂರವಾಗಿದ್ದರು. ದೂರದ ಸಂಬಂಧಿಕಳಾಗಿದ್ದ ಕೌಸರ್‌ ನಾಲ್ಕು ವರ್ಷಗಳ ಹಿಂದೆ ನದೀಂಗೆ ಪರಿಚಯವಾಗಿದ್ದರು. ಆದರೆ ಕಳೆದೊಂದು ವರ್ಷದಿಂದ ನದೀಂ ಆಕೆಯೊಂದಿಗೆ ಸಹ ಜೀವನ ನಡೆಸುತ್ತಿದ್ದ. ಇಬ್ಬರೂ ಅಶೋಕನಗರದ ನಂಜಪ್ಪ ಸರ್ಕಲ್‌ನಲ್ಲಿ ಮನೆ ಮಾಡಿಕೊಂಡು ಒಟ್ಟಿಗೆ ವಾಸವಾಗಿದ್ದರು.

ಕೆಲ ದಿನಗಳ ಹಿಂದೆ ಕೌಸರ್ ಬರ್ತ್ ಡೇ ಇದ್ದಿದ್ದರಿಂದ ಒಟ್ಟಿಗೆ ಹೊರಗೆ ಹೋಗಿ ಊಟ ಮಾಡುವ ಪ್ಲಾನ್ ಮಾಡಿಕೊಂಡಿದ್ದರು. ಮೆಕ್ಯಾನಿಕ್ ಕೆಲಸ ಮುಗಿಸಿಕೊಂಡು ಮನೆಗೆ ಬರುವಾಗ ಕೌಸರ್‌ಗೆ ಬರ್ತ್ ಡೇ ಸಲುವಾಗಿ ಗಿಫ್ಟ್ ಕೊಟ್ಟು ವಿಶ್ ಮಾಡಿದ್ದ. ಬೆಳ್ಳಿ ಚೈನ್ ಗಿಫ್ಟ್ ಪಡೆದ ಕೌಸರ್, ಚಿನ್ನದ ಸರ ಕೊಡಬೇಕಿತ್ತು ಎಂದಿದ್ದಾಳೆ.

ಇದೇ ವಿಚಾರಕ್ಕಾಗಿ ಇಬ್ಬರ ನಡುವೆ ವೈಮನಸ್ಸು ಮೂಡಿ ಗಲಾಟೆಗೆ ಕಾರಣವಾಗಿತ್ತು. ಕಳೆದ ಸೋಮವಾರ ಮನೆಗೆ ಬಂದಿದ್ದಾಗ ಇಬ್ಬರ ನಡುವೆ ಮತ್ತೆ ಗಲಾಟೆಯಾಗಿ ತಾರಕಕ್ಕೇರಿದೆ. ಕೋಪದಿಂದ ಮನೆಯಲ್ಲಿದ್ದ ಚಾಕು ಹಿಡಿದು ಆಕೆ ಕುತ್ತಿಗೆ ಸೀಳಿ ಕೊಲೆ ಮಾಡಿದ್ದ ಎಸ್ಕೆಪ್ ಆಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article