-->
1000938341
ಸಂಬಂಧಿ ಯುವತಿಯನ್ನು ಕೊಲೆಗೈದು ದೇಹದ ತುಂಡನ್ನು ಒಂದೊಂದೆಡೆ ಎಸೆದ: ಶೃದ್ಧಾ ವಾಕರ್ ಕೊಲೆ ನೆನಪಿಸುವ ಮತ್ತೊಂದು ಕೊಲೆ

ಸಂಬಂಧಿ ಯುವತಿಯನ್ನು ಕೊಲೆಗೈದು ದೇಹದ ತುಂಡನ್ನು ಒಂದೊಂದೆಡೆ ಎಸೆದ: ಶೃದ್ಧಾ ವಾಕರ್ ಕೊಲೆ ನೆನಪಿಸುವ ಮತ್ತೊಂದು ಕೊಲೆ


ರಾಜಸ್ಥಾನ: ದೇಶಕ್ಕೆ ದೇಶವೇ ಬೆಚ್ಚಿಬೀಳಿಸುವಂತಹ ಶ್ರದ್ಧಾ ವಾಕರ್ ಕೊಲೆಯನ್ನು ನೆನಪಿಸುವಂಥ ಮತ್ತೊಂದು ಭೀಕರ ಕೊಲೆ ಪ್ರಕರಣ ರಾಜಸ್ತಾನದಲ್ಲಿ ಬೆಳಕಿಗೆ ಬಂದಿದೆ. ಕೊಲೆ ಆರೋಪಿ ತನ್ನ ಸಂಬಂಧಿ ಯುವತಿಯನ್ನೇ ಸುತ್ತಿಗೆಯಿಂದ ಹೊಡೆದು ಕೊಂದು, ಮೃತದೇಹವನ್ನು ಪೀಸ್ ಪೀಸ್ ಮಾಡಿ ಒಂದೊಂದು ತುಂಡನ್ನೂ ನಿರ್ಜನ ಪ್ರದೇಶದಲ್ಲಿ ಎಸೆದಿದ್ದಾಬೆ.

ಅನುಜ್ ಶರ್ಮಾ ಅಲಿಯಾಸ್ ಅಚಿಂತ್ಯ ಗೋವಿಂದ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಯುತ್ತಿದೆ ಎಂದು ರಾಜಸ್ಥಾನದ ಉತ್ತರ ವಿಭಾಗದ ಡಿಸಿಪಿ ಪರಿಷ್ ದೇಶ್‌ಮುಖ್ ಶನಿವಾರ ತಿಳಿಸಿದ್ದಾರೆ.

ಡಿ.11ರಂದು ಅನುಜ್ ಹಾಗೂ ಸಂಬಂಧಿ ಯುವತಿ ಮನೆಯಲ್ಲಿ ಇದ್ದರು‌. ಈ ವೇಳೆ ಅನುಜ್ ದೆಹಲಿಗೆ ಹೋಗೋಣ ಎಂದಿದ್ದಾನೆ. ಆದರೆ ಆಕೆ ನಿರಾಕರಿಸಿದ್ದಾಳೆ. ಆಗ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಆಕೆಯನ್ನು ಕೊಲೆ ಮಾಡಿದ್ದಾನೆ. ಬಳಿಕ ಆಕೆ ಕಾಣಿಸುತ್ತಿಲ್ಲವೆಂದು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದಾಬೆ.

ಪೊಲೀಸರು ಅನುಮಾನದ ಮೇಲೆ ಹೆಚ್ಚಿನ ವಿಚಾರಣೆ ನಡೆಸಿದಾಗ ಆತನೇ ಆಕೆಯನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದು ಬೆಳಕಿಗೆ ಬಂದಿದೆ. ನಂತರ ಮೃತದೇಹವನ್ನು ಮಾರ್ಬಲ್ ಕಟರ್ ಮತ್ತು ಚಾಕುವಿನಿಂದ ಸುಮಾರು ಹತ್ತು ಪೀಸ್ ಮಾಡಿದ್ದ. ಬಳಿಕ ದೇಹದ ಒಂದೊಂದೇ ತುಂಡನ್ನು ದೆಹಲಿಯ ಒಂದೊಂದು ನಿರ್ಜನ ಪ್ರದೇಶದಲ್ಲಿ ಎಸೆದಿದ್ದಾಗಿ ಒಪ್ಪಿಕೊಂಡಿದ್ದಾನೆ. ಬಹುತೇಕ ತುಂಡುಗಳನ್ನು ವಶಕ್ಕೆ ಪಡೆದಿದ್ದಾಗಿ ಹೇಳಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Ads on article

Advertise in articles 1

advertising articles 2

Advertise under the article