ಪಿಲಿಕುಳ ಮೃಗಾಲಯಕ್ಕೆ ಹೊಸ ಅತಿಥಿಗಳು- ಜೊತೆಗೆ ಸಿಕ್ಕಿತು 1 ಕೋಟಿ ರೂ !

 


ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಕೇಂದ್ರ ಮೃಗಾಲಯ ಪ್ರಾಧಿಕಾರದ ಅನುಮತಿ ಮೆರೆಗೆ ಗುಜರಾತಿನ ಗ್ರೀನ್ ಜೂ ಯಿಂದ ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಹೊಸ ಪ್ರಾಣಿ ಪಕ್ಷಿಗಳ ಆಗಮನವಾಗಿದೆ.



 

 ಮದ್ಯ ಮತ್ತು ದಕ್ಷಿಣ ಅಮೆರಿಕ, ಬ್ರೆಜಿಲ್, ಅರ್ಜೆಂಟೀನ, ಆಫ್ರಿಕಾ ಖಂಡ ಮತ್ತು ಆಸ್ಟ್ರೇಲಿಯ ಗಳಲ್ಲಿ ಕಾಣಸಿಗುವ ಸಣ್ಣ ಜಾತಿಯ ಅಳಿಲು ಕಪಿ, ಮರ್ ಮೊಸೆಟ್, ಕೆಂಪು ಕೈಯ ಟೆಮಾರಿನ, ಮಾರ ಮಾರ, ಬೃಹತ್ ಗಾತ್ರದ ನೀಲಿ ಬಂಗಾರದ ಮಕಾವು, ಮಿಲಿಟರಿ ಮಕಾವು, ಗಾಲಾ ಕೋಕಟು, ಹಸಿರು ಟೊರೆಕೊ ಮತ್ತು ವಿವಿಧ ಜಾತಿಯ ಪರದೇಶದ ಪಕ್ಷಿಗಳನ್ನು ತರಿಸಲಾಗಿದೆ. ಪಿಲಿಕುಳದಲ್ಲಿ ಹೆಚ್ಚುವರಿಯಾಗಿರುವ ಹುಲಿಗಳು, ಚಿರತೆಗಳು, ಕಾಡುನಾಯಿಗಳು ಮತ್ತು ವಿವಿಧ ಜಾತಿಯ ಉರಗಗಳನ್ನು ಪ್ರತಿಯಾಗಿ ಕೊಡಲಾಗಿದೆ.

                ಇನ್ನು ಹಲವು ವಿದೇಶಿ ಪ್ರಾಣಿಗಳನ್ನು ಉಚಿತವಾಗಿ ಕೊಡಲಾಗುವುದೆಂದು ಗ್ರೀನ್ ಮೃಗಾಲಯದ ಅಧಿಕಾರಿಗಳು ಆಶ್ವಾಸನೆ ನೀಡಿರುತ್ತಾರೆ. ಹೊಸದಾಗಿ ಬಂದ ಪಾಣಿಗಳ ಆರೋಗ್ಯವನ್ನು ಪರಿಶೀಲಿಸಲು ಮತ್ತು ಇಲ್ಲಿಯ ವಾತಾವರಣಕ್ಕೆ ಒಗ್ಗುವ ತನಕ ಕ್ವಾರೆಂಟಿನಲ್ಲಿ ಇಡಲಾಗಿದೆ. ಪಕ್ಷಿಗಳು ವೀಕ್ಷಣೆಗೆ ಮುಕ್ತವಾಗಿದೆ ಮತ್ತು ಇತರ ಪ್ರಾಣಿಗಳು ಕ್ವಾರೆಂಟೀನ್ ಅವಧಿ ಮುಗಿದ ಕೂಡಲೆ ಸಾರ್ವಜನಿಕರ ವೀಕ್ಷಣೆಗೆ ಇಡಲಾಗುವುದು. ಮೃಗಾಲಯದ ವೈದ್ಯಾಧಿಕಾರಗಳು, ಬಯೋಲೋಜಿಸ್ಟ್ ಗಳು ಮತ್ತು ಪ್ರಾಣಿಪರಿಪಾಲಕರು ಪ್ರಾಣಿಗಳ ಆರೋಗ್ಯದ ಮೇಲೆ ನಿಗವಹಿಸುತ್ತಿದ್ದಾರೆ.

 

ಪಿಲಿಕುಳ ಮೃಗಾಲಯಕ್ಕೆ ರಿಲಯನ್ಸ್ ಫೌಂಡೇಷನ್ ನಿಂದ ರೂ ಒಂದು ಕೋಟಿ ದೇಣಿಗೆ

                ಗ್ರೀನ್ ಮೃಗಾಲಯ ಮತ್ತು ರೆಸ್ಕ್ಯೂ ಸೆಂಟರ್ ಮಾತೃ ಸಂಸ್ಥೆಯಾದ ರಿಲಯನ್ಸ್ ಫೌಂಡೇಷನ್ ಪಿಲಿಕುಳ ಮೃಗಾಲಯಕ್ಕೆ ಹೊಸ ಪ್ರಾಣಿಗಳ ಆವರಣ ರಚನೆ ಮತ್ತು ಅಭಿವೃದ್ಧಿಗೆ ಒಂದು ಕೋಟಿಯನ್ನು ದೇಣಿಗೆಯಾಗಿ ನೀಡಿರುತ್ತಾರೆ ಎಂದು ಪಿಲಿಕುಳ ಜೈವಿಕ ಉದ್ಯಾನವನ ನಿರ್ದೇಶಕ ಹೆಚ್. ಜೆ. ಭಂಡಾರಿ ತಿಳಿಸಿದ್ದಾರೆ.