-->
1.20 ಲಕ್ಷ ರೂ‌. ಆ್ಯಪಲ್ ಮ್ಯಾಕ್​ಬುಕ್ ಪ್ರೋ ಆರ್ಡರ್ ಮಾಡಿದವನಿಗೆ ಡೆಲಿವರಿ ಆದದ್ದು ನಾಯಿಯ ಪೆಡಿಗ್ರಿ

1.20 ಲಕ್ಷ ರೂ‌. ಆ್ಯಪಲ್ ಮ್ಯಾಕ್​ಬುಕ್ ಪ್ರೋ ಆರ್ಡರ್ ಮಾಡಿದವನಿಗೆ ಡೆಲಿವರಿ ಆದದ್ದು ನಾಯಿಯ ಪೆಡಿಗ್ರಿವಾಷಿಂಗ್ಟನ್: ಕೆಲವೊಂದು ಬಾರಿ ಆನ್ಲೈನ್‌ ನಲ್ಲಿ ನಾವು ಏನ ಬುಕ್‌ ಮಾಡುತ್ತೇವೆಯೇ ಅದೇ ವಸ್ತು ಡೆಲಿವರಿ ಆಗುತ್ತದೆ ಎಂದು ಹೇಳಲು ಅಸಾಧ್ಯ. ಅದೇ ರೀತಿ ಇಲ್ಲೊಬ್ಬ 1,20,000 ರೂ. ಪಾವತಿಸಿ ಆ್ಯಪಲ್ ಮ್ಯಾಕ್​ಬುಕ್ ಪ್ರೊಗಾಗಿ ಕಾದು ಕುಳಿತಿದ್ದರು. ಆದರೆ ಆತನಿಗೆ ಡೆಲಿವರಿಯಾಗಿದ್ದು ಮಾತ್ರ ಏನು ಗೊತ್ತೇ..?

ಇತ್ತೀಚೆಗೆ ಯುಕೆ ಡರ್ಬಿಶೈರ್ ಮೂಲದ ಅಲನ್ ವುಡ್ ತನ್ನ ಕನಸಿನ ಆ್ಯಪಲ್ ಮ್ಯಾಕ್​ಬುಕ್ ಅನ್ನು ಬರೋಬ್ಬರಿ 1,20,000 ರೂ. ವ್ಯಯ ಮಾಡಿ ಅಮೆಜಾನ್‌ ಗೆ ಆರ್ಡರ್‌ ಮಾಡಿದ್ದಾನೆ. ಅಮೆಜಾನ್‌ ನಿಂದ ಎರಡು ಬಾಕ್ಸ್‌ ಗಳು ಬಂದಿವೆ. ಆದರೆ ಬಾಕ್ಸ್‌ ಓಪನ್ ಮಾಡಿದಾಗ ಒಳಗೆ ಇದ್ದದ್ದನ್ನು ನೋಡಿ ಶಾಕ್‌ ಆಗಿದ್ದಾನೆ.

ಅಮೆಜಾನ್‌ನ ಪ್ಯಾಕೇಜ್‌ನಲ್ಲಿ ಮ್ಯಾಕ್​ಬುಕ್ ಪ್ರೊ ಬದಲಿಗೆ ಎರಡು ಬಾಕ್ಸ್‌ಗಳ ನಾಯಿಗೆ ಹಾಕುವ ಪೆಡಿಗ್ರಿ ಆಹಾರವಿತ್ತು. ಇದರಲ್ಲಿ 24 ಪ್ಯಾಕೆಟ್‌ಗಳ “ಮಿಕ್ಸ್ಡ್ ಸೆಲೆಕ್ಷನ್ ಇನ್ ಜೆಲ್ಲಿ” ಫ್ಲೇವರ್‌ಗಳಿರುತ್ತವೆ. ಇದು ಅಲನ್‌ ಅವರಿಗೆ ಅಚ್ಚರಿ ತರುತ್ತದೆ.

“ಮೊದಲಿಗೆ ನಾನು ಗೊಂದಲವನ್ನು ಪರಿಹರಿಸಲು ಅಮೆಜಾನ್ ಗ್ರಾಹಕ ಸೇವೆಯೊಂದಿಗೆ ಮಾತನಾಡಿದೆ. ಆದರೆ ಅವರು ತನಗೆ ಸಹಾಯ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ನಾಯಿಯ ಆಹಾರವನ್ನು ಅವರ ಗೋದಾಮಿಗೆ ಹಿಂತಿರುಗಿಸಿದೆ, ಆದರೆ ಅದರಿಂದ ಯಾವುದೇ ವ್ಯತ್ಯಾಸವಾಗಲಿಲ್ಲ”ಅಲನ್‌ ವುಡ್ ಹೇಳಿದರು.

15 ಗಂಟೆಗಿಗೂ ಅಧಿಕ ಕಾಲ ಸಿಬ್ಬಂದಿಯೊಂದಿಗೆ ಅಲನ್‌ ಮಾತನಾಡಿದ್ದಾರೆ. ಆದರೆ‌ ಸರಿಯಾದ ಉತ್ತರ ಸಿಕ್ಕಿಲ್ಲ. ಕಂಪೆನಿ ಶೀಘ್ರದಲ್ಲಿ ಅಲನ್‌ ಸಮಸ್ಯೆಯನ್ನು ಬಗೆಹರಿಸುವುದಾಗಿ ಹೇಳಿದೆ. ಆದರೆ ಇದುವರೆಗೆ ಅದು ಆಗಿಲ್ಲ ಎಂದು ವರದಿ ತಿಳಿಸಿದೆ.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article