-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಕೆಲಸ ನೀಡಿದ ಮಾಲಕನೊಂದಿಗೆ ಮಂಚ ಹಂಚಿಕೊಂಡ ಯುವತಿ: ಬಳಿಕ ವರಸೆ ಬದಲಿಸಿದ ಆಕೆಯ ಕಾಟಕ್ಕೆ ಹೈರಾಣಾದ ಬಟ್ಟೆ ವ್ಯಾಪಾರಿ

ಕೆಲಸ ನೀಡಿದ ಮಾಲಕನೊಂದಿಗೆ ಮಂಚ ಹಂಚಿಕೊಂಡ ಯುವತಿ: ಬಳಿಕ ವರಸೆ ಬದಲಿಸಿದ ಆಕೆಯ ಕಾಟಕ್ಕೆ ಹೈರಾಣಾದ ಬಟ್ಟೆ ವ್ಯಾಪಾರಿ


ಬೆಂಗಳೂರು: ಕೆಲಸ ನೀಡಿದ ಬಟ್ಟೆ ಅಂಗಡಿ ಮಾಲಕನನ್ನೇ ಬುಟ್ಟಿಗೆ ಹಾಕಿಕೊಂಡ ಯುವತಿಯೊಬ್ಬಳು ಆತನೊಂದಿಗೆ ಮಂಚ ಹಂಚಿಕೊಂಡಿದ್ದಳು. ಆ ಬಳಿಕ ವರಸೆ ಬದಲಾಯಿಸಿಕೊಂಡ ಆಕೆಯ ಕಾಟಕ್ಕೆ ಹೈರಾಣಾದ ಬಟ್ಟೆ ವ್ಯಾಪಾರಿ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾನೆ‌.

ಬೆಂಗಳೂರು ನಗರದ ಬಟ್ಟೆ ವ್ಯಾಪಾರಿ ಎರಡು ವರ್ಷಗಳ ಹಿಂದೆ ಮೈತ್ರಿ ಎಂಬಾಕೆಯನ್ನು ತನ್ನ ಅಂಗಡಿಗೆ ಕೆಲಸಕ್ಕೆ ಇಟ್ಟಿದ್ದರು. ಆಕೆ ಕೆಲಸಕ್ಕೆ ಸೇರಿದ ಕೆಲ ತಿಂಗಳ ಬಳಿಕ ಯುವತಿ ಮೈತ್ರಿ ತನ್ನ ಸಹೋದರ ಕಿರಣ್‌ಗೆ ಅಪಘಾತವಾಗಿದ್ದು, ಚಿಕಿತ್ಸೆಗೆ ಹಣದ ಅಗತ್ಯವಿದೆ ಎಂದು ಮಾಲಕನ ಬಳಿ 2 ಲಕ್ಷ ರೂ. ಸಾಲ ಪಡೆದಿದ್ದಳು. ಬಳಿಕ ಆ ಹಣವನ್ನು ನೀಡದೆ ಸಮಜಾಯಿಷಿ ಹೇಳುತ್ತಿದ್ದಳು. ಈ ನಡು ಮಾಲಕನೊಂದಿಗೆ ಸಲುಗೆ ಬೆಳೆಸಿಕೊಂಡ ಯುವತಿ, ಆತನೊಂದಿಗೆ ಲವ್ವಿಡವ್ವಿ ಶುರು ಮಾಡಿದ್ದಳು. ಜೊತೆಗೆ ಇಬ್ಬರ ನಡುವೆ ಒಪ್ಪಿತ ದೈಹಿಕ ಸಂಪರ್ಕವೂ ಬೆಳೆಯಿತು. ಕೆಲಸದಾಕೆ ಸಿಕ್ಕಿದ ಖುಷಿಯಲ್ಲಿ ಎಲ್ಲವೂ ಚೆನ್ನಾಗಿದೆ ಅಂದುಕೊಂಡಿದ್ದ ಮಾಲಕನಿಗೆ ಆ ಬಳಿಕ ಆಕೆಯ ಕಾಟದಿಂದ ಭಾರೀ ಸಂಕಷ್ಟ ಎದುರಾಗಿದೆ.

ಅಂಗಡಿ ಮಾಲೀಕನೊಂದೊಗೆ ಸೆಕ್ಸ್ ನಡೆಸಲು ಸಮ್ಮತಿಸಿ ಎಲ್ಲವೂ ಮುಗಿದ ಬಳಿಕ ಯುವತಿ ತನ್ನ ವರಸೆ ಬದಲಿಸಿದ್ದಾಳೆ. ನಿನ್ನ ಬಳಿ ನನ್ನ ಅಣ್ಣ ಮಾತನಾಡಬೇಕು ಬಾ ಎಂದು ಕರೆದೊಯ್ದ ಯುವತಿ, 8 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾಳೆ. ಯುವತಿಯ ದೈಹಿಕ ಸುಖದ ಗುಂಗಿನಲ್ಲಿದ್ದ ಮಾಲಕನಿಗೆ ಶಾಕ್ ಆಗಿದೆ. ತುಂಬಾ ನೊಂದುಕೊಂಡು 8 ಲಕ್ಷ ರೂ. ಹಣವನ್ನೂ ನೀಡಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ಯುವತಿ, ಆಕೆಯ ಅಣ್ಣ ಹಾಗೂ ಆತನ ಸ್ನೇಹಿತ ಮೂವರೂ ಪದೇಪದೆ ಹಣಕ್ಕಾಗಿ ಬ್ಲ್ಯಾಕ್‌ ಮೇಲ್ ಮಾಡಿದ್ದಾರೆ.

ತನ್ನೊಂದಿಗಿನ ಪ್ರೇಮದಾಟ, ಸೆಕ್ಸ್ ಬಗ್ಗೆ ನಿನ್ನ ಕುಟುಂಬಸ್ಥರಿಗೆ ಹೇಳುವೆ ಎಂದು ಯುವತಿ ಧಮ್ಕಿ ಹಾಕಿದ್ದಾಳೆ. ಹಣ ನೀಡಿಲ್ಲ ಅಂದರೆ ಎಲ್ಲಾ ವಿಚಾರವನ್ನೂ ನಿನ್ನ ಮನೆವರಿಗೆ ಹೇಳುತ್ತೇವೆ ಎಂದು ಗ್ಯಾಂಗ್ ಪದೇ ಪದೇ ಬೆದರಿಕೆ ಹಾಕಿದೆ. ಭಯಬಿದ್ದ ಮಾಲೀಕ ಮತ್ತಷ್ಟು ಹಣ ಕೊಟ್ಟಿದ್ದಾರೆ. ಆದರೂ ಇವರ ಕಾಟ ನಿಂತಿರಲಿಲ್ಲ. ಬೇರೆ ದಾರಿ ಕಾಣದೆ ಬಟ್ಟೆ ವ್ಯಾಪಾರಿ ಮೂವರ ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಹಿನ್ನಲೆಯಲ್ಲಿ ಯುವತಿ ಮೈತ್ರಿ(26), ಆಕೆಯ ಸಹೋದರ ಕಿರಣ್(31) ಹಾಗೂ ಆತನ ಸ್ನೇಹಿತ ಸಿದ್ದು(30) ವಿರುದ್ಧ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article