ಮಂಗಳೂರು: ಬೆಂಗ್ರೆಯಲ್ಲಿ ಲಂಗರು ಹಾಕಿದ್ದ ಮೂರು ಬೋಟ್ ಗಳು ಬೆಂಕಿಗಾಹುತಿ

ಮಂಗಳೂರು: ಆಕಸ್ಮಿಕವಾಗಿ ಸಂಭವಿಸಿರುವ ಅಗ್ನಿ ಅವಘಡದಲ್ಲಿ ನಗರದ ಬೆಂಗ್ರೆಯ ಕಡಲ ಕಿನಾರೆಯಲ್ಲಿ ಲಂಗರು ಹಾಕಿರುವ ಮೂರು ಬೋಟ್ ಗಳು ಬೆಂಕಿಗಾಹುತಿಯಾಗಿ ಸಂಪೂರ್ಣ ಸುಟ್ಟು ಕರಕಲಾಗಿದೆ.

ಬೆಂಗ್ರೆಯ ಕಡಲ ಕಿನಾರೆಯಲ್ಲಿ ಲಂಗರು ಹಾಕಿರುವ ಹಲವಾರು ಬೋಟ್ ಗಳ ಪೈಕಿ ಒಂದು ಬೋಟ್ ಗೆ ಆಕಸ್ಮಕವಾಗಿ ಬೆಂಕಿ ತಗುಲಿತ್ತು. ಕ್ಷಣ ಮಾತ್ರದಲ್ಲೇ ಬೆಂಕಿಯ ಕೆನ್ನಾಲಿಗೆಯು ವ್ಯಾಪಿಸಿ ಪಕ್ಕದಲ್ಲಿದ್ದ ಮತ್ತೆರೆಡ ಬೋಟ್ ಗಳಿಗೂ ತಗುಲಿದೆ‌. ಪರಿಣಾಮವಾಗಿ ಮೂರು ಬೋಟ್ ಗಳು ಸಂಪೂರ್ಣ ಬೆಂಕಿಗಾಹುತಿಯಾಗಿದೆ.

ಸ್ಥಳೀಯರು ಬೆಂಕಿ ನಂದಿಸಲು ಹರಸಾಹಸಪಟ್ಟರೂ ಬೆಂಕಿಯ ಕೆನ್ನಾಲಿಗೆ ಆವರಿಸಿ ಮೂರು ಬೋಟ್ ಗಳು ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಈ ಬೋಟ್ ಗಳು ಲಕ್ಷದ್ವೀಪದ ಮಾಲಕರಿಗೆ ಸೇರಿದ್ದಾಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.