-->
Sulya :- ಐವರ್ನಾಡಿನ ಪರ್ಲಿಕಜೆಯಲ್ಲಿ ಸಂಭವಿಸಿದ ದುರಂತ.. ಮನೆಯೊಳಗೆ ಬೆಂಕಿಯ ಕೆನ್ನಾಳಿಗೆಯಲ್ಲಿ ವ್ಯಕ್ತಿಯ ದುರ್ಮರಣ..!

Sulya :- ಐವರ್ನಾಡಿನ ಪರ್ಲಿಕಜೆಯಲ್ಲಿ ಸಂಭವಿಸಿದ ದುರಂತ.. ಮನೆಯೊಳಗೆ ಬೆಂಕಿಯ ಕೆನ್ನಾಳಿಗೆಯಲ್ಲಿ ವ್ಯಕ್ತಿಯ ದುರ್ಮರಣ..!

ಸುಳ್ಯ 

ಮನೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಮನೆಯೊಳಗೆ ಮಲಗಿದ್ದ ಯಜಮಾನ ಜೀವಂತ ದಹನವಾಗಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆಯೊಂದು ಇಂದು ಬೆಳಿಗ್ಗೆ ಐವರ್ನಾಡಿನಲ್ಲಿ ಸಂಭವಿಸಿದೆ.

ಐವರ್ನಾಡಿನ ಪರ್ಲಿಕಜೆ ಸುಧಾಕರ (47) ದುರ್ಘಟನೆಯಲ್ಲಿ ಸಾವಿಗೀಡಾದ ವ್ಯಕ್ತಿ. ಇಂದು ಬೆಳಿಗ್ಗೆ ಸುಧಾಕರರು ಮನೆಯಲ್ಲಿ ಮಲಗಿದ್ದು, ಪತ್ನಿ ಟ್ಯಾಪಿಂಗ್‌ಗೆಂದು ಹೋಗಿದ್ದರು. ಮಗಳು ಶಾಲೆಗೆ ತೆರಳಿದ್ದಳು. ಈ ಹೊತ್ತಿನಲ್ಲಿ ಬೆಂಕಿ ಮನೆಯ ಒಂದು ಪಾರ್ಶ್ವವನ್ನು ಸುಟ್ಟು ಹಾಕಿತ್ತು.

ಸುಧಾಕರರು ಸ್ವಲ್ಪ ಅಸೌಖ್ಯಕ್ಕೀಡಾಗಿರುವ ಹಿನ್ನಲೆಯಲ್ಲಿ ಅವರಿಗೆ ಹೊರಗೆ ಓಡಲು ಸಾಧ್ಯವಾಗಲಿಲ್ಲ. ಸ್ಥಳದಲ್ಲಿಯೇ ಬೆಂಕಿಯಲ್ಲಿ ದಹಿಸಲ್ಪಟ್ಟು ಸಾವನ್ನಪ್ಪಿದರೆಂದು ತಿಳಿದು ಬಂದಿದೆ.

ಮನೆಯೊಳಗೆ ಉರಿಸಿದ್ದ ದೀಪದಿಂದ ಬೆಂಕಿ ಹತ್ತಿಕೊಂಡಿರಬಹುದೆಂದು ಶಂಕಿಸಲಾಗಿದೆ. ಪೊಲೀಸರು, ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿದ್ದಾರೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article