ಎಲ್ಲಿದೆ ಮಾನವೀಯತೆ...? : ಆತ್ಮಹತ್ಯೆ ಮಾಡುತ್ತಿರುವುದನ್ನು ತಡೆಯದೆ ವೀಡಿಯೋ ಚಿತ್ರೀಕರಿಸಿ ವೈರಲ್

ವಿಜಯನಗರ: ಯಾರದರೊಬ್ಬ ಸಾವಿಗೆ ಶರಣಾಗುತ್ತಿದ್ದಾನೆ ಎಂದು ತಿಳಿದ ತಕ್ಷಣ ಮಾನವೀಯತೆಯಿಂದ ಅವರ ಪ್ರಾಣ ಉಳಿಸಲು ಯತ್ನಿಸಬೇಕಾಗುತ್ತದೆ‌. ಬುದ್ಧಿ ಮಾತು ತಿಳಿಸಿ, ಧೈರ್ಯದ ಮಾತು ಹೇಳಿ ಅವರನ್ನು ಮತ್ತೆ ಜೀವನದ ಕಡೆಗೆ ಬರುವಂತೆ ಮಾಡುವುದು ಕರ್ತವ್ಯ. ಆದರೆ , ಇಲ್ಲೊಂದು ಕಡೆ ನಡೆದಿರುವ ಘಟನೆಯಿಂದ ಇಡೀ ಮನುಕುಲವೇ ತಲೆತಗ್ಗಿಸುವಂತಾಗಿದೆ. 

ಯುವಕನೋರ್ವನು ನೇಣು ಹಾಕಿಕೊಳ್ಳುತ್ತಿದ್ದ ವೇಳೆ ತಡೆಯೋದು ಬಿಟ್ಟು, ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಅಮಾನವೀಯ ಘಟನೆ ಹೊಸಪೇಟೆ ತಾಲೂಕಿನ ಹನುಮನಹಳ್ಳಿಯಲ್ಲಿ ನಡೆದಿದೆ. ಇಲ್ಲಿನ ರಾಷ್ಟ್ರೀಯ ಹೆದ್ದಾರಿ 50ರಲ್ಲಿನ ಫೈಓವರ್ ಮೇಲಿರುವ ವಿದ್ಯುತ್ ಕಂಬಕ್ಕೆ ನೇಣು ಬಿಗಿದುಕೊಂಡು ಯುವಕನೊರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಯುವಕನನ್ನು ಯುವಕನನ್ನು ಮಂಜುನಾಥ್ ( 25 ) ಎಂದು ಗುರುತಿಸಲಾಗಿದೆ. 

ಈತ ಸಾವಿಗೆ ಶರಣಾಗುತ್ತಿದ್ದ ವೇಳೆ ಅಲ್ಲಿದ್ದ ಕೆಲವರು ಅದನ್ನು ತಡೆಯೋದು ಬಿಟ್ಟು ವಿಡಿಯೋ ಮಾಡಿದ್ದಾರೆ. ಆತ ಮದ್ಯದ ಮತ್ತಿನಲ್ಲಿ‌ ಹೀಗೆ ಮಾಡಿಕೊಳ್ಳುತ್ತಿದ್ದಾನೆ ಎಂದು ಮಾತನಾಡಿಕೊಳ್ಳುತ್ತಿರುವು ವೀಡಿಯೋದಲ್ಲಿ ದಾಖಲಾಗಿದೆ. ಅಲ್ಲಿದ್ದ ಓರ್ವನಾದರೂ ಪ್ರಯತ್ನಿಸುತ್ತಿದ್ದರೆ, ಮಂಜುನಾಥ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಪ್ಪಿಸಬಹುದಾಗಿತ್ತು. ಜೀವನದಲ್ಲಿ ಜಿಗುಪ್ಪೆಗೊಂಡು ಮಂಜುನಾಥ್ ನೇಣಿಗೆ ಶರಣಾಗಿದ್ದಾರೆ. ಅವರು ತಾನೇ ಉಟ್ಟಿದ್ದ ಲುಂಗಿಯಿಂದ ವಿದ್ಯುತ್ ಕಂಬಕ್ಕೆ ನೇಣು ಬಿಗಿದುಕೊಂಡು ಮಂಜುನಾಥ್ ಸಾವಿಗೆ ಶರಣಾಗಿದ್ದಾರೆ. ಈ ವೀಡಿಯೋ ಮರೆಯಾದ ಮಾನವೀಯತೆಗೆ ಕನ್ನಡಿ ಹಿಡಿದಂತಿದೆ.

BREAKING NEWS
Loading latest news...
Join our WhatsApp Channel Powered By : Online Pudu