-->

ಗುರುಪುರ: ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಸಾವರ್ಕರ್ ಫೋಟೋ ಎಸ್ ಡಿಪಿಐ ಆಕ್ಷೇಪ

ಗುರುಪುರ: ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಸಾವರ್ಕರ್ ಫೋಟೋ ಎಸ್ ಡಿಪಿಐ ಆಕ್ಷೇಪ

ಮಂಗಳೂರು: ಶಿವಮೊಗ್ಗದಲ್ಲಿ ಸಾವರ್ಕರ್ ಫೋಟೋ ಅಳವಡಿಕೆಯಿಂದ ನಡೆದಿರುವ ಜಟಾಪಟಿಯ ಬೆನ್ನಲ್ಲೇ ನಗರದ ಹೊರವಲಯದ ಗುರುಪುರದಲ್ಲಿ  ನಡೆದೊರುವ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲೂ ಸಾವರ್ಕರ್ ಕಂಡುಬಂದು ಗೊಂದಲ ಸೃಷ್ಟಿಸಿದೆ.

ಗುರುಪುರ ಗ್ರಾಪಂನಿಂದ ಇಂದು ನಡೆದ ಸ್ವಾತಂತ್ರ್ಯದ ಅಮೃತಮಹೋತ್ಸವ ಕಾರ್ಯಕ್ರಮದಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದಿತ್ತು. ಈ ವೇಳೆ ಗುರುಪುರದ ಬೆಥಣಿ ಶಾಲೆಯ ಮಕ್ಕಳು ನೀಡಿರುವ ಸಾಂಸ್ಕೃತಿಕ ಕಾರ್ಯಕ್ರಮದಯ ಭಾರತಾಂಬೆಯ ಭಾವಚಿತ್ರದೊಳಗೆ ವಿವಿಧ ಸ್ವಾತಂತ್ರ್ಯ ಹೋರಾಟಗಾರರ ಚಿತ್ರ ಬಳಸಲಾಗಿತ್ತು. ಅದರಲ್ಲಿ ಸಾವರ್ಕರ್ ಪೊಟೋ ಕೂಡ ಇತ್ತು. ಆದ್ದರಿಂದ ಕಾರ್ಯಕ್ರಮದಲ್ಲಿ ಹಾಜರಿದ್ದ ಎಸ್ ಡಿಪಿಐ ಸದಸ್ಯರು ಈ ಫೋಟೊಗೆ ಆಕ್ಷೇಪ ವ್ಯಕ್ತಪಡಿಸಿ ಶಿಕ್ಷಣ ಸಂಸ್ಥೆ ಯಿಂದ ಕ್ಷಮಾಪಣೆ ಕೇಳಿಸಿದ್ದಾರೆ.


ಈ ವಿಚಾರ ಕಾರ್ಯಕ್ರಮ ಮುಗಿದ ಬಳಿಕ ಹಿಂದೂ ಸಂಘಟನೆಗಳ ಕಾರ್ಯಕರ್ತರ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಕೆಲ ಹಿಂದೂ ಕಾರ್ಯಕರ್ತರು ಸ್ಥಳಕ್ಕೆ ಬಂದು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article