-->
ಅಪ್ರಾಪ್ತ ಪುತ್ರಿಗೆ ಮಗು ಕರುಣಿಸಿದ ಕಾಮುಕ ತಂದೆ ಅರೆಸ್ಟ್‌

ಅಪ್ರಾಪ್ತ ಪುತ್ರಿಗೆ ಮಗು ಕರುಣಿಸಿದ ಕಾಮುಕ ತಂದೆ ಅರೆಸ್ಟ್‌


ಚೆನ್ನೈ: 13 ವರ್ಷದ ಅಪ್ರಾಪ್ತ ಪುತ್ರಿಯ ಮೇಲೆಯೇ ಲೈಂಗಿಕ ದೌರ್ಜನ್ಯ ಎಸಗಿ ಆಕೆಯ ಮಗುವಿನ ಜನನಕ್ಕೆ ಕಾರಣನಾದ ಕಾಮುಕ ತಂದೆಯನ್ನು ತಮಿಳುನಾಡು ವೆಲ್ಲೂರ್ ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.

ಸರ್ಕಾರಿ ಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಬಾಲಕಿ ಹೊಟ್ಟೆನೋವು ಎಂದು ಮನೆಯಲ್ಲಿ ಹೇಳಿದ್ದಾಳೆ. ಆದ್ದರಿಂದ ಆಕೆಯ ಸಂಬಂಧಿಕರು ವೆಲ್ಲೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಈ ವೇಳೆ ಬಾಲಕಿಯನ್ನು ತಪಾಸಣೆ ನಡೆಸಿದ ವೈದ್ಯರು ಆಕೆ ಗರ್ಭಿಣಿಯಾಗಿದ್ದಾಳೆಂದು ತಿಳಿಸಿದಾಗ ವಿಚಾರ ಬಹಿರಂಗಗೊಂಡಿದೆ.


ಆಗಸ್ಟ್ 2ರಂದು ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಈ ಘಟನೆ ಬಗ್ಗೆ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಮಕ್ಕಳ ಕಲ್ಯಾಣಾಭಿವೃದ್ಧಿ ಸಮಿತಿಗೆ ಮಾಹಿತಿ ನೀಡಿದ್ದು, ನಂತರ ವೆಲ್ಲೂರ್ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಘಟನೆಯ ಬಗ್ಗೆ ಅಪ್ರಾಪ್ತ ಬಾಲಕಿಯಲ್ಲಿ ವಿಚಾರಣೆ ನಡೆಸಿದ ವೇಳೆ ಹತ್ತು ತಿಂಗಳಿನಿಂದ ಆಕೆಯ ತಂದೆ ಲೈಂಗಿಕ ದೌರ್ಜನ್ಯ ಎಸಗುತ್ತಿರುವ ಬಗ್ಗೆ ಬಾಲಕಿ ಹೇಳಿದ್ದಾಳೆ‌. ಬಾಲಕಿಯ ತಂದೆ ಮತ್ತು ತಾಯಿ ಪ್ರತ್ಯೇಕಗೊಂಡಿದ್ದಾರೆ. ಸದ್ಯ ಈ ಬಾಲಕಿ ಹಾಗೂ ಆಕೆಯ ಅಣ್ಣ ಅಜ್ಜಿ ಮನೆಯಲ್ಲಿ ವಾಸವಾಗಿದ್ದರು.

ಬಾಲಕಿ ಪ್ರತಿದಿನ ಅಜ್ಜಿ ಮಾಡಿ ಕೊಡುತ್ತಿದ್ದ ಊಟವನ್ನು ತಂದೆಗೆ ಕೊಡಲೆಂದು ಬರುತ್ತಿದ್ದಳು. ಈ ವೇಳೆ ತಂದೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ. ಅಲ್ಲದೆ ಈ ವಿಚಾರವನ್ನು ಯಾರ್ಲಾದರೂ ಬಾಯ್ಬಿಟ್ಟರು ಕೊಲ್ಲುವುದಾಗಿ ಬೆದರಿಕೆ ಒಡ್ಡಿರುವುದಾಗಿ ಬಾಲಕಿ ಮಾಹಿತಿ ನೀಡಿದ್ದಾಳೆ.

ಬಾಲಕಿಯ ಹೇಳಿಕೆ ಆಧಾರದ ಮೇಲೆ ಪೊಲೀಸರು ಕಾಮುಕ ತಂದೆಯನ್ನು ಬಂಧಿಸಿ ಕೋರ್ಟ್ ಗೆ ಹಾಜರುಪಡಿಸಿದ್ದರು. ನ್ಯಾಯಾಂಗ ಆತನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿರುವುದಾಗಿ ವರದಿ ತಿಳಿಸಿದೆ.

Ads on article

Advertise in articles 1

advertising articles 2

Advertise under the article