
ಕಟ್ಟಿಕೊಂಡ ಪತಿಯನ್ನೇ ಈಕೆ ಬಾಡಿಗೆ ಕೊಡುತ್ತಾಳಂತೆ: ಅಷ್ಟಕ್ಕೂ ಯಾಕಾಗಿ ಈಕೆ ಈ ಕೆಲಸ ಮಾಡುತ್ತಿದ್ದಾಳೆ ಗೊತ್ತೇ?
7/02/2022 04:44:00 AM
ಬ್ರಿಟನ್: ಧನದಾಸೆಗೆ ಬಲಿಬಿದ್ದು ಕಟ್ಟಿಕೊಂಡ ಪತ್ನಿಯನ್ನೇ ಮಾರಾಟ ಮಾಡಿರುವ ಅನೇಕ ಪ್ರಕರಣಗಳು ನಡೆದಿವೆ. ಆದರೆ, ಇಲ್ಲೊಬ್ಬ ಬ್ರಿಟನ್ ಮಹಿಳೆ ಇದಕ್ಕೆ ತದ್ವಿರುದ್ಧವಾಗಿ ಕಟ್ಟಿಕೊಂಡಿರುವ ಪತಿಯನ್ನೇ ಬಾಡಿಗೆಗೆ ಕೊಡುತ್ತಿರುವ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಆದರೆ ಆಕೆ ಪತಿಗೆ ಬಾಡಿಗೆಯೆಂದು ಕೇವಲ 3,365 ರೂ. ಪಡೆಯುತ್ತಾರಂತೆ. ಅಷ್ಟಕ್ಕೂ ಆಕೆ ಬಾಡಿಗೆ ಕೊಡುವುದರ ಹಿಂದಿನ ಕಾರಣ ಮಾತ್ರ ವಿಚಿತ್ರ.
ಯುನೈಟೆಡ್ ಕಿಂಗ್ಡಮ್ನ ಲಾರಾ ಯಂಗ್ ಎಂಬ ಮಹಿಳೆಯೇ ತಮ್ಮ ಪತಿ ಜೇಮ್ಸ್ ಎಂಬವರನ್ನು ಬಾಡಿಗೆಗೆ ನೀಡುತ್ತಿರುವ ಮಹಿಳೆ. ಈಕೆ ಅಧಿಕ ಹಣ ಗಳಿಸುವ ಉದ್ದೇಶದಿಂದ ಈ ಉಪಾಯ ಕಂಡುಕೊಂಡಿದ್ದಾರೆ. ತನ್ನ ಪತಿಯಲ್ಲಿರುವ ವಿವಿಧ ಕೌಶಲ್ಯ ಬಳಸಿಕೊಳ್ಳಲು ಲಾರಾ ಯಂಗ್ 'Rent my handy husband'' ಎಂಬ ವೆಬ್ಸೈಟ್ ಪ್ರಾರಂಭಿಸಿದ್ದಾರೆ. ಇದರ ಮೂಲಕ ಇತರೆ ಮಹಿಳೆಯರಿಗೆ ತನ್ನ ಪತಿಯನ್ನು ಬಾಡಿಗೆ ನೀಡುತ್ತಾರೆ.
ಲಾರಾ ಯಂಗ್ ಪತಿ ಜೇಮ್ಸ್ ವಿವಿಧ ಉದ್ಯೋಗಗಳಲ್ಲಿ ಪರಿಣತರಾಗಿದ್ದಾರೆ. ಮುಖ್ಯವಾಗಿ ಮನೆಯ ಪೀಠೋಪಕರಣ, ಡೈನಿಂಗ್ ಟೇಬಲ್, ಚಿತ್ರಕಲೆ ಮಾಡುವುದು ಸೇರಿದಂತೆ ಮನೆಯ ಅಲಂಕಾರದ ವಿಚಾರದಲ್ಲಿ ಪರಿಣತರಾಗಿದ್ದಾರೆ. ಹೀಗಾಗಿ, ಅವರನ್ನು ಬಾಡಿಗೆ ನೀಡುವ ಮೂಲಕ ಬೇರೆಯವರ ಮನೆ ಕೆಲಸ ಮಾಡಿಸಿ ಹಣ ಗಳಿಸುತ್ತಿದ್ದಾರೆ. ಇದಕ್ಕೋಸ್ಕರ ಅನೇಕರು ಜೇಮ್ಸ್ರನ್ನು ಆನ್ಲೈನ್ ಮೂಲಕ ಬುಕ್ ಮಾಡ್ತಿದ್ದಾರಂತೆ.
ಜೇಮ್ಸ್ ಹಾಗೂ ಲಾರಾಗೆ ಮೂವರು ಮಕ್ಕಳಿದ್ದು, ಈ ಹಿಂದೆ ಜೇಮ್ಸ್ ಗೋದಾಮಿನಲ್ಲಿ ಕೆಲಸ ಮಾಡ್ತಿದ್ದರು. ಆದರೆ, ಮಕ್ಕಳ ಆರೈಕೆಗೋಸ್ಕರ ಎರಡು ವರ್ಷಗಳ ಹಿಂದೆ ಕೆಲಸವನ್ನು ಆತ ತೊರೆದಿದ್ದಾರೆ. ಇದೀಗ, ಅವರಿಗೆ ಇನ್ನಿಲ್ಲದ ಬೇಡಿಕೆ ಬಂದಿದ್ದು, ಹೊಸ ಕೆಲಸದಿಂದ ಕೈತುಂಬಾ ಹಣ ಗಳಿಸುತ್ತಿದ್ದಾರೆ.