ಬ್ರೇಕಿಂಗ್ ನ್ಯೂಸ್

[getTicker results="10" label="recent" type="ticker"]

ಸುಳ್ಯ: ಬಿಜೆಪಿ ಯುವ ಮುಖಂಡನ ಹತ್ಯೆ ಪ್ರಕರಣ; ಮೂವರ ವಿಚಾರಣೆ

ಸುಳ್ಯ: ಇಲ್ಲಿನ ಬೆಳ್ಳಾರೆಯಲ್ಲಿ ನಡೆದಿರುವ ಬಿಜೆಪಿ ಯುವ ಮೋರ್ಚದ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ವಿಚಾರಣೆ ನಡೆಸಲಾಗಿದೆ. ಆದರೆ ಯಾರನ್ನೂ ವಶಕ್ಕೆ ತೆಗೆದುಕೊಂಡಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿದೆ.

ಕೊಲೆ ಆರೋಪಿಗಳ ಪತ್ತೆಗೆ ಐದು ವಿಶೇಷ ತಂಡಗಳನ್ನು ರಚಿಸಿ ತನಿಖೆ ನಡೆಸಲಾಗುತ್ತಿದೆ. ಆರೋಪಿಗಳ ಜಾಡು ಹಿಡಿದು ಈಗಾಗಲೇ ಮೂರು ತಂಡಗಳು ಕೇರಳ, ಹಾಸನ ಹಾಗೂ ಮಡಿಕೇರಿ ಕಡೆಗೆ ತೆರಳಿದೆ. ಕೇರಳ ಗಡಿಭಾಗ ಹಾಗೂ ಪುತ್ತೂರು ಸುತ್ತಮುತ್ತ ನಾಕಾಬಂದಿ ಮಾಡಿ ವಾಹನಗಳನ್ನು ಶೋಧ ನಡೆಸಲಾಗುತ್ತಿದೆ ಎಂದು ದ.ಕ.ಜಿಲ್ಲಾ ಎಸ್ಪಿ ಋಷಿಕೇಶ್ ಸೋನಾವಾಣೆ ಹೇಳಿದ್ದಾರೆ.