ಮಂಗಳೂರಿನಲ್ಲಿ ಮತ್ತೆ ಕೇಳಿ ಬಂತು ಗುಂಡಿನ ಸದ್ದು: ಉಳ್ಳಾಲದಲ್ಲಿ ದುಷ್ಕರ್ಮಿ ಮೇಲೆ ಫೈರಿಂಗ್
Sunday, July 17, 2022
ಆರೋಪಿ ಮುಕ್ತಾರ್
ಮಂಗಳೂರು: ಹಲವು ಪ್ರಕರಣಗಳ ಆರೋಪಿ ವಿಚಾರಣೆಗೆ ಕರೆದೊಯ್ಯುವ ವೇಳೆ ಪೊಲೀಸ್ ಮೇಲೆ ಹಲ್ಲೆಗೆ ಯತ್ನಿಸಿದ್ದು, ಈ ವೇಳೆ ಪೊಲೀಸರು ಆತನಿಗೆ ಗುಂಡಿನ ದಾಳಿ ನಡೆಸಿರುವ ಘಟನೆ ಇಂದು ಬೆಳ್ಳಂಬೆಳಗ್ಗೆ ನಗರದ ಹೊರವಲಯದ ಅಸೈಗೋಳಿಯಲ್ಲಿ ನಡೆದಿದೆ.
ಹಲವು ಪ್ರಕರಣಗಳ ಆರೋಪಿ ಮುಕ್ತಾರ್ ಗುಂಡಿನ ದಾಳಿಗೊಳಗಾದ ಆರೋಪಿ.
ಆರೋಪಿ ಮುಕ್ತರ್ ಮೇಲೆ ಸುಮಾರು ವಿವಿಧ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿದೆ. ಆದರೆ ಆರು ಪ್ರಕರಣಗಳಿಗೆ ಸಂಬಂಧಿಸಿದಂತೆ 2016ರಿಂದ ಈವರೆಗೆ ಆತನ ಬಂಧನವಾಗಿರಲಿಲ್ಲ.
ಆತ ಇರುವುದರ ಬಗ್ಗೆ ಖಚಿತ ಮಾಹಿತಿ ಇಂದು ಬೆಳ್ಳಂಬೆಳಗ್ಗೆ ಕೊಣಾಜೆ ಠಾಣಾ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಈ ವೇಳೆ ಆತ ಕ್ರಿಮಿನಲ್ ಕೃತ್ಯ ಎಸಗಲು ಬಳಸಿರುವ ವಾಹನ ತೋರಿಸಲು ಕರೆದೊಯ್ಯುತ್ತಿದ್ದ ವೇಳೆ ಆತ ಪೊಲೀಸರಿಗೆ ಹಲ್ಲೆಗೈದು ಪರಾರಿಯಾಗಲು ಯತ್ನಿಸಿದ್ದ. ಆಗ ಪೊಲೀಸರು ಒಂದು ಸುತ್ತಿನ ಗುಂಡಿನ ದಾಳಿ ನಡೆಸಿದ್ದಾರೆ. ಆಗಲು ಓಟಕಿತ್ತ ಮುಕ್ತಾರ್ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿ ವಶಕ್ಕೆ ತೆಗೆದುಕೊಂಡಿದ್ದಾರೆ.
ಇದೀಗ ಆರೋಪಿಯನ್ನು ದೇರಳಕಟ್ಟೆಯ ಕೆ.ಎಸ್.ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.