ಬೆಂಗಳೂರು: ಈಜುಕೊಳವೆಂದು ಕೊಳಚೆ ನೀರು ಸಂಸ್ಕರಣಾ ಘಟಕ ( ಎಸ್‌ಟಿಪಿ )ಕ್ಕೆ ಇಳಿದ ವಿದ್ಯಾರ್ಥಿ ದುರ್ಮರಣ
Monday, July 25, 2022
ಆನೇಕಲ್ : ಈಜುಕೊಳವೆಂದು ಕೊಳಚೆ ನೀರು ಸಂಸ್ಕರಣಾ ಘಟಕ ( ಎಸ್‌ಟಿಪಿ )ಕ್ಕೆ ಇಳಿದದ ವಿದ್ಯಾರ್ಥಿಗಳಿಬ್ಬರಲ್ಲಿ ಓರ್ವ ದುರ್ಮರಣಕ್ಕೀಡಾದ ಘಟನೆ ಬೆಂಗಳೂರು ದಕ್ಷಿಣದ ಸೂರ್ಯಸಿಟಿಯಲ್ಲಿ ಸಂಭವಿಸಿದೆ.
ಆನೇಕಲ್‌ನ ಅಕ್ಷರ ಫೌಂಡೇಷನ್‌ನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವರುಣ್ ಕುಮಾರ್ (18) ಮೃತಪಟ್ಟ ವಿದ್ಯಾರ್ಥಿ.
ಬೆಂಗಳೂರು ದಕ್ಷಿಣದ ಸೂರ್ಯಸಿಟಿ 2ನೇ ಹಂತಕ್ಕೆ ಹೊಂದಿಕೊಂಡಿರುವ ದ್ವಾರಕನಾಥ್ ಬಡಾವಣೆಯಲ್ಲಿ ಕೊಳಚೆ ನೀರು ಸಂಸ್ಕರಣಾ ಘಟಕವು ತೆರೆದ ಸ್ಥಿತಿಯಲ್ಲಿತ್ತು. ಇದನ್ನು ಈಜುಕೊಳವೆಂದು ಭಾವಿಸಿದ ವಿದ್ಯಾರ್ಥಿಗಳಿಬ್ಬರು ಅಲ್ಲಿಗೆ ಈಜಲು ಹೋಗಿದ್ದಾರೆ. ಸಾವಿಗೀಡಾಗಿದ್ದಾರೆ. ಈ ವೇಳೆ ವರುಣ್ ಕುಮಾರ್ ಕೊಳಚೆ ನೀರು ಸಂಸ್ಕರಣಾ ಘಟಕದಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಮತ್ತೋರ್ವ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಈ ಅವಘಡಕ್ಕೆ ಸಂಬಂಧಿಸಿದಂತೆ ಸೂರ್ಯ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ .