ಮಂಗಳೂರು: ಎಟಿಎಂನಲ್ಲಿ ಹರಿದ, ಕಲೆಗಳಿರುವ ನೋಟುಗಳು; ಗ್ರಾಹಕರೇ ಎಚ್ಚರ!

ಮಂಗಳೂರು: ನಗರದ ಎಟಿಎಂ ಒಂದರಲ್ಲಿ ಹಣ ಡ್ರಾ ಮಾಡುವ ಸಂದರ್ಭದಲ್ಲಿ ಹರಿದಿರುವ, ಕಲೆಗಳಾಗಿರುವ ನೋಟುಗಳು ಬರುತ್ತಿವೆ. ಗ್ರಾಹಕರು ಎಚ್ಚರದಿಂದಿರಬೇಕು.
 
ಗ್ರಾಹಕರೊಬ್ಬರು ಎಟಿಎಂನಲ್ಲಿ ಡ್ರಾ ಮಾಡುವ ಸಂದರ್ಭದಲ್ಲಿ ಹಿರಿದಿರುವ, ಕಲೆಗಳಿರುವ ನೋಟುಗಳು ಬಂದಿದೆ‌‌. ಇದನ್ನು ನೋಡಿ ಗಾಬರಿಗೊಂಡಿದ್ದಾರೆ. ಗ್ರಾಹಕ 10 ಸಾವಿರ ರೂ‌. ಡ್ರಾ ಮಾಡಿದ್ದು, ಅದರಲ್ಲಿ 9,500 ರೂ‌. ನೋಟುಗಳು ಸರಿಯಿರಲಿಲ್ಲ.

ಆದರೆ ಆ ಗ್ರಾಹಕರ ಅದೃಷ್ಟಕ್ಕೆ ಎಟಿಎಂ ಪಕ್ಕದಲ್ಲಿಯೇ ಬ್ಯಾಂಕ್ ನ ಖಾತೆಯಿತ್ತು. ಅಲ್ಲದೆ ಎಟಿಎಂನಲ್ಲಿಯೇ ಸೆಕ್ಯುರಿಟಿ ಇದ್ದ ಪರಿಣಾಮ ಆತನೂ ಇದನ್ನು ಗಮನಿಸಿದ್ದಾನೆ. ಪರಿಣಾಮ ಬ್ಯಾಂಕ್ ಗೆ ಹೋಗಿ ತೋರಿಸಿದಾಗ ನೋಟುಗಳನ್ನು ಬದಲಾಯಿಸಿ ನೀಡಲುಅಧಿಕಾರಿಗಳು ಒಪ್ಪಿದ್ದಾರೆ. ಒಂದು ವೇಳೆ ಬ್ಯಾಂಕ್ ಶಾಖೆಯಿಲ್ಲದ, ಸೆಕ್ಯುರಿಟಿ ಗಾರ್ಡ್ ಗಳು ಇಲ್ಲದ ಎಟಿಎಂಗಳಾಗುತ್ತಿದ್ದರೆ ಬ್ಯಾಂಕ್ ಅಧಿಕಾರಿಗಳು ನೋಟುಗಳನ್ನು ಬದಲಿಸಿ ನೀಡುತ್ತಿರಲಿಲ್ಲ‌. ಆದ್ದರಿಂದ ಎಟಿಎಂಗೆ ಹಣ ತುಂಬಿಸುವ ಸಂದರ್ಭ ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸುವುದು ಸರಿಯಲ್ಲ.