-->

ACB Raid- ಇಎಸ್‌ಐ ಹಣ ಬಿಡುಗಡೆಗೆ ಲಂಚ: ಪಣಂಬೂರು ಆಸ್ಪತ್ರೆ ಸಿಬ್ಬಂದಿ ಬಂಧನ

ACB Raid- ಇಎಸ್‌ಐ ಹಣ ಬಿಡುಗಡೆಗೆ ಲಂಚ: ಪಣಂಬೂರು ಆಸ್ಪತ್ರೆ ಸಿಬ್ಬಂದಿ ಬಂಧನ

ಇಎಸ್‌ಐ ಹಣ ಬಿಡುಗಡೆಗೆ ಲಂಚ: ಪಣಂಬೂರು ಆಸ್ಪತ್ರೆ ಸಿಬ್ಬಂದಿ ಬಂಧನ


ಇಎಸ್‌ಐ ಇಲಾಖೆಯಿಂದ ಮೆಡಿಕಲ್ ಬಿಲ್ ಮಂಜುಊರು ಮಾಡಲು ಲಂಚಕ್ಕೆ ಕೈಯೊಡ್ಡಿದ ಪಣಂಬೂರಿನ ESI ಆಸ್ಪತ್ರೆಯ ಸಿಬ್ಬಂದಿಯಾದ ವಿಷ್ಣುಮೂರ್ತಿ ಎಂಬಾತನನ್ನು ರೆಡ್ ಹ್ಯಾಂಡ್ ಅಗಿ ಬಂಧಿಸಲಾಗಿದೆ.



ಭ್ರಷ್ಟಾಚಾರ ನಿಗ್ರಹ ದಳ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.





KMC ವೈದ್ಯರ ಸಲಹಯಂತೆ ದೂರುದಾರ ಪ್ರಶಾಂತ್ ಎಂಬವರು ESI ಡಿಸ್ಪೆನ್ಸರಿಯಿಂದ ಮಾತ್ರೆ, ಇಂಜೆಕ್ಷನ್ ಇತ್ಯಾದಿಗಳನ್ನು ಪಡೆದುಕೊಂಡು ಹೋಗಿ ಮಂಗಳೂರು KMC ಆಸ್ಪತ್ರೆ ಯಲ್ಲಿ ಡಯಲಿಸಿಸ್ ಚಿಕಿತ್ಸೆಯನ್ನು ಪಡೆಯುತ್ತಿದ್ದರು. 


ESI ಡಿಸ್ಪೆನ್ಸರಿಯಿಂದ ಮಾತ್ರೆ ಮತ್ತು ಇಂಜೆಕ್ಷನ್ ಇಲ್ಲದೆ ಇದ್ದಲ್ಲಿ ಖಾಸಗಿ ಮೆಡಿಕಲ್ ನಿಂದ ಖರೀದಿಸಿ ಆ ಬಿಲ್ ನ್ನು ಇ. ಎಸ್. ಐ ಡಿಸ್ಪೆನ್ಸರಿಗೆ ನೀಡಿದ್ದಲ್ಲಿ ಸದ್ರಿ ಬಿಲ್ಲು ಮಂಜೂರಾತಿ ಆಗಿ ದೂರುದಾರರ ಪತ್ನಿಯ ಖಾತೆಗೆ ಜಮೆಯಾಗುತ್ತದೆ.

ಈ ಮೆಡಿಕಲ್ ಬಿಲ್ ಗಳನ್ನು ಮಂಜೂರು ಮಾಡಲು ಪಣಂಬೂರಿನ ESI ಆಸ್ಪತ್ರೆ  ಸಿಬ್ಬಂದಿಯಾದ ವಿಷ್ಣುಮೂರ್ತಿ, ಹಿರಿಯ ಫಾರ್ಮಸಿಸ್ಟ್ ರವರು ಇವರು 2000 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದರು.



ಈ ಬಗ್ಗೆ ಎಸಿಬಿ ಕಚೇರಿಗೆ ತೆರಳಿ ಪ್ರಶಾಂತ್ ದೂರು ನೀಡಿದ್ದರು. ಅದರಂತೆ, ನಡೆದ ದಾಳಿಯಲ್ಲಿ ಲಂಚ ಹಣವನ್ನು ಸ್ವೀಕರಿಸುವ ವೇಳೆಯಲ್ಲಿ ಎ ಸಿ ಬಿ ದಾಳಿ ಮಾಡಿ ಆರೋಪಿಯನ್ನು ವಶಕ್ಕೆ ಪಡೆಯಲಾಯಿತು.



ಭ್ರಷ್ಟಾಚಾರ ನಿಗ್ರಹ ದಳದ ಪಶ್ಚಿಮ ವಲಯದ ಎಸ್‌ಪಿ ಸಿ. ಎ ಸೈಮನ್ ಮಾರ್ಗದರ್ಶನ ದಲ್ಲಿ ACB ಪೊಲೀಸ್ ಠಾಣೆ, ದಕ್ಷಿಣ ಕನ್ನಡ ಜಿಲ್ಲೆಯ ಅಧಿಕಾರಿಗಳಾದ ಕೆ ಸಿ ಪ್ರಕಾಶ್, ಶ್ಯಾಮ್ ಸುಂದರ್ ಮತ್ತು ಗುರುರಾಜ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಹರಿಪ್ರಸಾದ್. ರಾಧಾಕೃಷ್ಣ ಡಿ ಎ. ರಾಧಾಕೃಷ್ಣ ಕೆ. ಉಮೇಶ್. ವೈಶಾಲಿ. ಗಂಗಣ್ಣ. ಆದರ್ಶ. ರಾಕೇಶ್. ಭರತ್. ಮೋಹನ್ ಸಾಲಿಯಾನ್ ಕಾರ್ಯಾಚರಣೆ ನಡೆಸಿದ್ದರು. 

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article