
ಉಡುಪಿ: ನಿಶ್ಚಿತಾರ್ಥಕ್ಕೆ ಬಂದಿದ್ದ ತಾಯಿ - ಮಗಳು ನಾಪತ್ತೆ!
Wednesday, May 18, 2022
ಉಡುಪಿ: ನಿಶ್ಚಿತಾರ್ಥಕ್ಕೆಂದು ಬಂದಿರುವ ತಾಯಿ - ಮಗಳು ನಾಪತ್ತೆಯಾಗಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಂಗಳೂರಿನ ಉಳ್ಳಾಲದ ಬಂಡಿಕೊಟ್ಯ ನಿವಾಸಿ ಪೃಥ್ವಿನಿ (32) ಹಾಗೂ ಅವರ ನಾಲ್ಕೂವರೆ ವರ್ಷದ ಪುತ್ರಿ ಪುನರ್ವಿ ನಾಪತ್ತೆಯಾದವರು.
ಪೃಥ್ವಿನಿಯವರು ತಮ್ಮ ಪುತ್ರಿ ಪುನರ್ವಿಯೊಂದಿಗೆ ಹೇರೂರು ಗ್ರಾಮದಲ್ಲಿರುವ ತಮ್ಮ ಚಿಕ್ಕಪ್ಪನ ಮನೆಗೆ ನಿಶ್ಚಿತಾರ್ಥಕ್ಕೆಂದು ಬಂದಿದ್ದರು. ಆದರೆ ಅವರು ಮೇ 13ರಿಂದ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ದೂರು ದಾಖಲಾಗಿದೆ.
ನಾಪತ್ತೆಯಾದ ಪೃಥ್ವಿನಿಯವರು 5 ಅಡಿ 5 ಇಂಚು ಎತ್ತರವಿದ್ದು, ಗೋಧಿ ಮೈಬಣ್ಣ, ದುಂಡು ಮುಖ, ದಪ್ಪ ಶರೀರ ಹೊಂದಿದ್ದಾರೆ. ಇವರು ಕನ್ನಡ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ನಾಪತ್ತೆಯಾದವರ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆ (0820-2561044), ಪೊಲೀಸ್ ವೃತ್ತ ನಿರೀಕ್ಷಕರು (0820-2561966) ಅನ್ನು ಸಂಪರ್ಕಿಸಲು ಬ್ರಹ್ಮಾವರ ಪೊಲೀಸ್ ಠಾಣಾಧಿಕಾರಿಗಳ ಪ್ರಕಟನೆ ತಿಳಿಸಿದೆ.