-->
ಮಂಗಳೂರು: ಚಾಕೊಲೇಟ್ ಪ್ರಿಯರಿಗೊಂದು ಹಬ್ಬ; ಇಲ್ಲಿದೆ ತರಹೇವಾರಿ ರುಚಿರುಚಿಯಾದ ಚಾಕೊಲೇಟ್

ಮಂಗಳೂರು: ಚಾಕೊಲೇಟ್ ಪ್ರಿಯರಿಗೊಂದು ಹಬ್ಬ; ಇಲ್ಲಿದೆ ತರಹೇವಾರಿ ರುಚಿರುಚಿಯಾದ ಚಾಕೊಲೇಟ್

ಮಂಗಳೂರು: ಚಾಕಲೇಟ್ ಗಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಅದರಲ್ಲೂ ಯುವತಿಯರು, ಹುಡುಗಿಯರಿಗಂತೂ ಚಾಕಲೇಟ್ ಕ್ರೇಜ್ ಸ್ವಲ್ಪ ಅಧಿಕವೇ ಸರಿ. ಇಂತಹ ಚಾಕಲೇಟ್ ಪ್ರಿಯರಿಗೊಂದು ಮಂಗಳೂರಿನಲ್ಲೊಂದು ಚಾಕಲೇಟ್ ಹಬ್ಬವನ್ನೇ ಆಯೋಜಿಸಲಾಗಿತ್ತು. ಇಲ್ಲಿ ತರಹೇವಾರಿ ಚಾಕಲೇಟ್ ಗಳೇ ಕಂಡು ಬಂದಿತ್ತು. 

ಹೌದು... ಇಂತಹದ್ದೊಂದು ಚಾಕಲೇಟ್ ಹಬ್ಬ ಆಯೋಜನೆಗೊಂಡಿದ್ದು, ನಗರದ ಫೋರಂ ಫಿಜ್ಜಾ ಮಾಲ್ ನಲ್ಲಿ. ನಿಟ್ಟೆ ಕಾಲೇಜಿನ ವಿದ್ಯಾರ್ಥಿಗಳಿಂದ 'ನಿಕೊ ಚಾಕಲೇಟ್ ಸ್ಟ್ರೀಟ್' 2 ದಿನಗಳ ಚಾಕಲೇಟ್ ಹಬ್ಬ ಆಯೋಜನೆಗೊಂಡಿದೆ. ನಿನ್ನೆ ಮತ್ತು ಇಂದು ಈ ಚಾಕೊಲೇಟ್ ಹಬ್ಬ ನಡೆಯುತ್ತಿದ್ದು, ಇಂದು ಕೂಡಾ ಅಧಿಕ ಸಂಖ್ಯೆಯಲ್ಲಿ ಈ ಚಾಕೊಲೇಟ್ ಪ್ರಿಯರು ಭೇಟಿ ನೀಡುವ ನಿರೀಕ್ಷೆಯಿದೆ.


ಇಲ್ಲಿಗೆ ಕಾಲಿಟ್ಟರೆ ಸಾಕು ಬಾಯಲ್ಲಿ ನೀರೂರಿಸುವ ತರಹೆವಾರಿ ಚಾಕಲೇಟ್, ಕೇಕ್ ಗಳು ನಮ್ಮ‌ನ್ನು ಕೈಬೀಸಿ ಕರೆಯುತ್ತದೆ. ಒಂದಕ್ಕಿಂತ ಮತ್ತೊಂದು ಭಿನ್ನವಾದ ಒಂದರ ರುಚಿಗಿಂತ ಮತ್ತೊಂದು ರುಚಿಕರ ಸ್ವಾದಿಷ್ಟ ಚಾಕಲೇಟ್ ಗಳು ಇಲ್ಲಿ ಲಭ್ಯವಿದೆ. ಅದರಲ್ಲೂ ದೇಸಿ ಚಾಕಲೇಟ್ ನಿಂದ ತೊಡಗಿ ವಿದೇಶಿ ಚಾಕಲೇಟ್ ಗಳೂ ಇಲ್ಲಿ ಲಭ್ಯವಿದೆ. ಅದರಲ್ಲೂ ಕಣ್ಮನ ಸೆಳೆಯುವ ಬಾಯಲ್ಲಿ ನೀರೂರಿಸುವ ಚಾಕಲೇಟ್ ಗಳು ಇಲ್ಲಿ ಲಭ್ಯವಿದೆ.


ಇಲ್ಲಿ ಪುತ್ತೂರಿನ ಸ್ವದೇಶಿ ಚಾಕಲೇಟ್ ನಿಂದ ಹಿಡಿದು ಫ್ರಾನ್ಸ್, ಯುಕೆಯ ವಿದೇಶಿ ಚಾಕಲೇಟ್ ಗಳೂ ದೊರೆಯುತ್ತದೆ‌. ಅದರಲ್ಲೂ ಕೈಗೆಟುಕುವ ದರದಲ್ಲಿ ಲಭ್ಯವಿದೆ. ನಿಟ್ಟೆ ಕಾಲೇಜಿನ ವಿದ್ಯಾರ್ಥಿಗಳೇ ಆಯೋಜಿಸಿರುವ ಈ ಚಾಕಲೇಟ್ ಮೇಳದಲ್ಲಿ ಮನೆಯಲ್ಲಿಯೇ ಮಹಿಳೆಯರು, ವಿದ್ಯಾರ್ಥಿಗಳು ತಯಾರಿಸಿರುವ ತರೆಹವಾರಿ ಚಾಕಲೇಟ್ ಗಳು, ಬಿಸ್ಕತ್ತು, ಕೇಕ್ ಗಳು ದೊರೆಯುತ್ತದೆ. ಅಲ್ಲದೆ ಚಾಕಲೇಟ್, ಕೇಕ್ ತಯಾರಿಕೆಯನ್ನು ಪ್ರವೃತ್ತಿಯಾಗಿ ತೆಗೆದುಕೊಂಡಿರುವ ಸಾಫ್ಟವೇರ್ ಉದ್ಯೋಗಿಗಳು ಈ ಮೇಳದ ಮಳಿಗೆಯಲ್ಲಿದ್ದರು. ಕಾಲೇಜು ಕನ್ಯೆಯರೇ ಚಾಕಲೇಟ್ ಗಾಗಿ ಮುಗಿಬಿದ್ದು ಖರೀದಿಸುತ್ತಾ, ಸವಿಯುತ್ತಿರುವ ದೃಶ್ಯ ಕಂಡು ಬಂದಿತು.
Ads on article

Advertise in articles 1

advertising articles 2

Advertise under the article