-->
ಬಿಬಿಎಂಪಿ ತ್ಯಾಜ್ಯ ಲಾರಿ ಢಿಕ್ಕಿ ಹೊಡೆದು ಮಹಿಳೆ ಮೃತ್ಯು: ಚಾಲಕ ಅರೆಸ್ಟ್

ಬಿಬಿಎಂಪಿ ತ್ಯಾಜ್ಯ ಲಾರಿ ಢಿಕ್ಕಿ ಹೊಡೆದು ಮಹಿಳೆ ಮೃತ್ಯು: ಚಾಲಕ ಅರೆಸ್ಟ್

ಬೆಂಗಳೂರು: ನಗರದ ನಾಯಂಡಹಳ್ಳಿಯಲ್ಲಿ ಬಿಬಿಎಂಪಿ ತ್ಯಾಜ್ಯ ವಿಲೇವಾರಿ ಲಾರಿ ಢಿಕ್ಕಿ ಹೊಡೆದ ಪರಿಣಾಮ ಬ್ಯಾಂಕ್ ಡೆಪ್ಯೂಟಿ ಮ್ಯಾನೇಜರ್ ಪದ್ಮಿನಿ ಎಂಬವರು ಮೃತಪಟ್ಟಿದ್ದಾರೆ‌. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಲಾರಿ ಚಾಲಕ  ಶಿವರಾಜ್ ನನ್ನು ಬಂಧಿಸಿದ್ದಾರೆ.

ದುರಾದೃಷ್ಟವಶಾತ್ ಪದ್ಮಿನಿಯವರ ಪತಿ ಮೂರು ವರ್ಷಗಳ ಹಿಂದಯೇ ಮೃತಪಟ್ಟಿದ್ದಾರೆ. ಇವರಿಗೆ ಯುವನ್ ಎಂಬ ಗಂಡು‌ ಮಗುವಿದೆ. ಇದೀಗ ಈ ಮಗು ತಾಯಿ - ತಂದೆ ಇಬ್ಬರನ್ನೂ ಕಳೆದುಕೊಂಡು ಅಕ್ಷರಶಃ ತಬ್ನಲಿಯಾಗಿದೆ. 

ಮೂಲತಃ ಆಂಧ್ರಪ್ರದೇಶ ಮೂಲದವರಾದ ಪದ್ಮಿನಿಯವರು ಎಸ್ ಬಿಐ ಬ್ಯಾಂಕ್ ಉದ್ಯೋಗಿಯಾಗಿದ್ದಾರೆ. 2010 ರಲ್ಲಿ ಅವರಿಗೆ ಬೆಂಗಳೂರಿಗೆ ವರ್ಗಾವಣೆಯಾಗಿತ್ತು.‌ ಚಂದ್ರಾಲೇಔಟ್ ಎಸ್​ಬಿಐ ಬ್ಯಾಂಕ್​ನಲ್ಲಿ ಪದ್ಮಿನಿ ಕೆಲಸ ಮಾಡುತ್ತಿದ್ದರು‌. ಅವರು ತಮ್ಮ ತಂದೆ, ತಾಯಿ, ಹಾಗೂ ಮಗ ಯುವಾನ್ ನೊಂದಿಗೆ ಬೆಂಗಳೂರಿನ ಆರ್.ಆರ್.ನಗರದಲ್ಲಿ ವಾಸವಿದ್ದರು. ಎಂದಿನಂತೆ ಕೆಲಸ ಮುಗಿಸಿ ಮನೆಗೆ ಹೊರಟಿದ್ದಾಗ ನಾಯಂಡಹಳ್ಳಿ ಜಂಕ್ಷನ್ ಬಳಿ ಹಿಂಬದಿಯಿಂದ ಬಂದ ಬಿಬಿಎಂಪಿ ಕಸದ ಲಾರಿ ಪದ್ಮಿನಿಯವರಿದ್ದ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಪದ್ಮಿನಿಯವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. 

ಪದ್ಮಿನಿ ಸಾವಿನಿಂದ ಅವರ ಐದು ವರ್ಷದ ಮಗು ಅನಾಥವಾಗಿದೆ. ದುಃಖದ ವಿಚಾರವೇನೆಂದರೆ ಮೂರು ವರ್ಷಗಳ ಹಿಂದೆಯಷ್ಟೇ ಪದ್ಮಿನಿಯವರ ಪತಿಯೂ ಸಾವನ್ನಪ್ಪಿದ್ದರು. ಆರ್ಕಿಟೆಕ್ಟ್ ಆಗಿ ಕೆಲಸ ಮಾಡ್ತಿದ್ದ ಅವರು ಕೆಲಸದ ಸಮಯದಲ್ಲಿ ತಲೆಗೆ ಕಲ್ಲು ಬಿದ್ದು ಒಂದು ವರ್ಷಗಳ ಸಾವು ಬದುಕಿನ ಹೋರಾಟದ ನಡುವೆ ಮೃತಪಟ್ಟಿದ್ದರು. ಇದೀಗ ಪದ್ಮನಿಯೂ ಇಹಲೋಕ ತ್ಯಜಿಸಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಬ್ಯಾಟರಾಯನಪುರ ಸಂಚಾರಿ ಪೊಲೀಸರು ಬಿಬಿಎಂಪಿ ಕಸದ ಲಾರಿ ಚಾಲಕ ಶಿವರಾಜ್ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ತನ್ನದೇನು ತಪ್ಪಿಲ್ಲ. ಪದ್ಮಿನಿಯವರೇ ವಾಹನಕ್ಕೆ ಅಡ್ಡ ಬಂದಿದ್ದಾರೆ ಎಂದು ಹೇಳಿದ್ದಾನೆ. ಆದರೆ ಪ್ರತ್ಯಕ್ಷದರ್ಶಿ ಆಟೋ ಚಾಲಕರೊಬ್ಬರು ಬಿಬಿಎಂಪಿ ಲಾರಿ ಚಾಲಕನದ್ದೇ ತಪ್ಪು ಎಂದು ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article