-->
ಬಿಜೆಪಿ ಮುಖಂಡನ‌ ಲಾಡ್ಜ್ ನಲ್ಲಿ ಜೂಜಾಟ: ಖ್ಯಾತ ಸಿನಿಮಾ ನಟನ‌ ಆಪ್ತ ಸಹಾಯಕ ಸೇರಿದಂತೆ 19 ಮಂದಿ ಅಂದರ್

ಬಿಜೆಪಿ ಮುಖಂಡನ‌ ಲಾಡ್ಜ್ ನಲ್ಲಿ ಜೂಜಾಟ: ಖ್ಯಾತ ಸಿನಿಮಾ ನಟನ‌ ಆಪ್ತ ಸಹಾಯಕ ಸೇರಿದಂತೆ 19 ಮಂದಿ ಅಂದರ್

ಚಿಕ್ಕಬಳ್ಳಾಪುರ: ಬಿಜೆಪಿ ಮುಖಂಡರೋರ್ವರಿಗೆ ಸೇರಿದ ಲಾಡ್ಜ್​​ವೊಂದರಲ್ಲಿ ನಡೆಯುತ್ತಿದ್ದ ಜೂಜು ಅಡ್ಡೆಗೆ ದಾಳಿ ನಡೆಸಿರುವ ಪೊಲೀಸರು ಖ್ಯಾತ ಸಿನಿಮಾ ನಟನ ಆಪ್ತ ಸಹಾಯಕ ಸೇರಿದಂತೆ 19 ಜನರನ್ನು ಬಂಧಿಸಿದ್ದಾರೆ.‌ ಚಿಕ್ಕಬಳ್ಳಾಪುರ ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.

ಈ ಪ್ರಕರಣದಲ್ಲಿ ಆಂಧ್ರಪ್ರದೇಶದ ಹಿಂದೂಪುರ ಕ್ಷೇತ್ರದ ಶಾಸಕ, ನಟ ನಂದಮೂರಿ ಬಾಲಕೃಷ್ಣ ಆಪ್ತ ಸಹಾಯಕ ಬಾಲಾಜಿ ಸೇರಿ 19 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.‌ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ನಗರಗೆರೆ ಗ್ರಾಮದ ಲಾಡ್ಜ್​ವೊಂದರಲ್ಲಿ ಈ ಜೂಜಾಟ ನಡೆಯುತ್ತಿತ್ತು. 

ಬಿಜೆಪಿ ಮುಖಂಡ ರಂಗನಾಥ್ ಎಂಬವರ ಬಿಎನ್​ಆರ್​ ಲಾಡ್ಜ್​ನಲ್ಲಿ ಈ ಜೂಜು ನಡೆಯುತ್ತಿತ್ತು. ಬಂಧಿತ ಆರೋಪಿಗಳಿಂದ 1,56,750 ರೂ. ನಗದು ಹಾಗೂ 4 ಕಾರು ಮತ್ತು 2 ಬೈಕ್​ಗಳನ್ನು ವಶಪಡಿಸಿಕೊಳ್ಳಲಾಗಿದೆ. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. 

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article