-->
ಯಕ್ಷಗಾನದಲ್ಲೂ ಅನುರಣಿಸಿತು 'ಪುಷ್ಪಾ' ಸಿನಿಮಾ 'ಶ್ರೀವಲ್ಲಿ' ಹಾಡು, ಸ್ಟೆಪ್!: ವೀಡಿಯೋ ವೈರಲ್

ಯಕ್ಷಗಾನದಲ್ಲೂ ಅನುರಣಿಸಿತು 'ಪುಷ್ಪಾ' ಸಿನಿಮಾ 'ಶ್ರೀವಲ್ಲಿ' ಹಾಡು, ಸ್ಟೆಪ್!: ವೀಡಿಯೋ ವೈರಲ್

ಮಂಗಳೂರು: ಸ್ಟಾರ್ ನಟ ಅಲ್ಲು ಅರ್ಜುನ್ ಅಭಿನಯದ 'ಪುಷ್ಪಾ' ಸಿನಿಮಾ ಎಷ್ಟು ಸದ್ದು ಮಾಡಿತೋ  ಆ ಸಿನಿಮಾದ ಶ್ರೀವಲ್ಲಿ ಹಾಡು ಹಾಗೂ ಅದರ ಸ್ಟೆಪ್ ಕೂಡಾ ಅಷ್ಟೇ ಸದ್ದು ಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ. ಈ ಶ್ರೀವಲ್ಲಿ ಹಾಡು ಹಾಗೂ ಅದರ ಸ್ಟೆಪ್ ಟ್ರೋಲ್ ಆಗಿಯೂ ಸಖತ್ ಫೇಮಸ್ ಆಗಿತ್ತು. ಇದೀಗ‌ ಈ ಹಾಡು, ಸ್ಟೆಪ್ ಯಕ್ಷಗಾನ ರಂಗಸ್ಥಳಕ್ಕೂ ಕಾಲಿಟ್ಟಿದೆ.

ಬಪ್ಪನಾಡು ಯಕ್ಷಗಾನ ಮೇಳದಲ್ಲಿ ಈ ಶ್ರೀವಲ್ಲಿ ಹಾಡು ಕೇಳಿ ಬಂದಿದೆ. ಅಷ್ಟೇ ಅಲ್ಲದೆ ಯಕ್ಷಗಾನದ ಹಾಸ್ಯ ಪಾತ್ರಧಾರಿ ಸಿನಿಮಾದಲ್ಲಿ ಈ ಹಾಡಿಗೆ ಅಳವಡಿಸಲಾದ ಡಿಫರೆಂಟ್ ಸ್ಟೆಪ್ ಅನ್ನು ಹಾಕಿದ್ದಾರೆ. ಏಕಾಏಕಿ ಪುಷ್ಪಾ ಸಿನಿಮಾ ಶ್ರೀವಲ್ಲಿ ಹಾಡು, ಸ್ಟೆಪ್ ನೋಡಿರುವ ಪ್ರೇಕ್ಷಕರು ಬಿದ್ದು ಬಿದ್ದು ನಗಲಾರಂಭಿಸಿದ್ದಾರೆ. ರಂಗದಲ್ಲಿದ್ದ ಕಲಾವಿದರೂ ಈ ಹಾಡು ಹಾಗೂ ಸ್ಟೆಪ್ ಗೆ ನಗುವ ದೃಶ್ಯ ಕಂಡು ಬಂದಿದೆ.ಇದೀಗ ಇದರ ವೀಡಿಯೋ ಭಾರೀ ವೈರಲ್ ಆಗುತ್ತಿದೆ. ಯಕ್ಷಗಾನದ ವಾಟ್ಸ್ಆ್ಯಪ್ ಗ್ರೂಪ್ ಗಳು, ಫೇಸ್ ಬುಕ್ ಗಳಲ್ಲಿ ವೈರಲ್ ಆಗುತ್ತಿದ್ದಂತೆ ಯಕ್ಷಗಾನ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಯಕ್ಷಗಾನಕ್ಕೆ ಅದರದ್ದೇ ಆದ ಸಾಂಪ್ರದಾಯಿಕ ಚೌಕಟ್ಟು ಇದೆ. ಭಾಗವತಿಕೆಯಾಗಲಿ, ನೃತ್ಯವಾಗಲಿ ಅದು ತನ್ನದೇ ಆದ ಒಂದು ಚೌಕಟ್ಟನ್ನು ಒಳಗೊಂಡಿದೆ. ಆದರೆ ಇದೀಗ ಮನೋರಂಜನೆ ಎಂದು ಯಕ್ಷಗಾನಕ್ಕೆ ಹೊರತಾಗಿರುವ ಹಾಡು, ನೃತ್ಯಗಳು ರಂಗಸ್ಥಳದಲ್ಲಿ ಕಂಡು ಬಂದಿರೋದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.  

Ads on article

Advertise in articles 1

advertising articles 2

Advertise under the article