-->
ಮಂಗಳೂರು: ಮಹಿಳೆಯರ ನಗ್ನ ಚಿತ್ರ ಸೆರೆ ಹಿಡಿದು ಹಣಕ್ಕಾಗಿ ಬೆದರಿಕೆಯೊಡ್ಡುತ್ತಿದ್ದ ಕಾಮುಕ ಅಂದರ್

ಮಂಗಳೂರು: ಮಹಿಳೆಯರ ನಗ್ನ ಚಿತ್ರ ಸೆರೆ ಹಿಡಿದು ಹಣಕ್ಕಾಗಿ ಬೆದರಿಕೆಯೊಡ್ಡುತ್ತಿದ್ದ ಕಾಮುಕ ಅಂದರ್

ಮಂಗಳೂರು: ತನ್ನ ಸಂಬಂಧಿಕ‌ ಮಹಿಳೆಯರೊಂದಿಗೆ ಕಾಮದಾಟದಲ್ಲಿ ತೊಡಗಿ, ಅವರ ಬೆತ್ತಲೆ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುವೆನೆಂದು ಬೆದರಿಕೆಯೊಡ್ಡಿ ಹಣಕ್ಕೆ ಬೇಡಿಕೆಯಿಡುತ್ತಿದ್ದ ಕಾಮುಕ ಬಂಟ್ವಾಳ ನಗರ ಠಾಣಾ ಪೊಲೀಸ್ ಬಲೆಗೆ ಬಿದ್ದಿದ್ದಾನೆ. 

ಬಂಟ್ವಾಳ ತಾಲೂಕಿನ ಮಂಡಾಡಿ ನಿವಾಸಿ ರಾಧಾಕೃಷ್ಣ ಬಂಧಿತ ಆರೋಪಿ. ಈತ ಬಂಟ್ವಾಳ ಬಿ.ಕಸ್ಬಾ ಗ್ರಾಮದ ನಿತ್ಯಾನಂದ ನಗರದ ನಿವಾಸಿ ತನ್ನ ಸಂಬಂಧಿಕ ಮಹಿಳೆಯೋರ್ವರ ಬೆತ್ತಲೆ ಪೋಟೋಗಳನ್ನು ವಾಟ್ಸ್ಆ್ಯಪ್ ಗ್ರೂಪ್ ಗಳಲ್ಲಿ ಶೇರ್ ಮಾಡಿದ್ದಾನೆಂದು ಆರೋಪಿಸಿ ಆಕೆಯ ಪತಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. 

ಆರೋಪಿ‌ ರಾಧಾಕೃಷ್ಣ ತನ್ನ ಸಂಬಂಧಿಕ ಮಹಿಳೆಯ ಬೆತ್ತಲೆ ಪೋಟೋ ತೆಗೆದು ಆರೋಪಿ ರಾಧಾಕೃಷ್ಣ ಕಳೆದ ಕೆಲ ದಿನಗಳಿಂದ 4.48 ಲಕ್ಷ ರೂ. ನೀಡುವಂತೆ ಪೀಡಿಸುತ್ತಿದ್ದ. ಹಣ ನೀಡದಿದ್ದರೆ ಅಶ್ಲೀಲ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದಾಗಿ ಬೆದರಿಸುತ್ತಿದ್ದ. ಅಲ್ಲದೆ 17 ಮಂದಿ ಸಂಬಂಧಿಕರ ವಾಟ್ಸ್ಆ್ಯಪ್ ಗ್ರೂಪ್ ಮಾಡಿ ಅದರಲ್ಲಿ ಸಂತ್ರಸ್ತ ಮಹಿಳೆಯ ಪತಿಯನ್ನು ಸೇರಿಸಿ ಆಕೆಯ ಅಶ್ಲೀಲ ಚಿತ್ರಗಳನ್ನು ಶೇರ್ ಮಾಡಿದ್ದ. ಈ ಬಗ್ಗೆ ಸಂತ್ರಸ್ತೆಯ ಪತಿ ಪೊಲೀಸ್ ದೂರು ನೀಡಿದ್ದರು.  

ಆ ಬಳಿಕ ಪೊಲೀಸರು ತನಿಖೆ ನಡೆಸಿದಾಗ ಆತನ ಇನ್ನಷ್ಟು ಕಾಮ ಪುರಾಣ ಬಯಲಾಗಿದೆ. ಈತ ಸುಮಾರು 10 ಅಧಿಕ ಸಂಬಂಧಿಕ ಹಾಗೂ ಇತರ ಮಹಿಳೆಯರೊಂದಿಗೆ ರಾಸಲೀಲೆಯಲ್ಲಿ ತೊಡಗಿ ಬಳಿಕ ಅವರಲ್ಲಿ ಹಣಕ್ಕಾಗಿ ಪೀಡಿಸುತ್ತಿದ್ದ ಎಂದು ತಿಳಿದು ಬಂದಿದೆ. ಸಂಬಂಧಿಕ ಮಹಿಳೆಯರನ್ನೇ ಈತ ಟಾರ್ಗೆಟ್ ಮಾಡಿ ಅವರನ್ನು ಲಾಡ್ಜ್ ಗಳಿಗೆ ಕರೆದೊಯ್ದು ಅವರೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿ ನಗ್ನ ಚಿತ್ರ ಸೆರೆ ಹಿಡಿದು ಹಣಕ್ಕಾಗಿ ಪೀಡಿಸುತ್ತಿದ್ದ. ಇದೀಗ ಪೊಲೀಸ್ ಬಲೆಗೆ ಬಿದ್ದಿರುವ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಈ ಬಗ್ಗೆ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

Advertise under the article

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100