-->
ತನ್ನ 'ವಾಯು ಮಾರಿ'ಯನ್ನು ಮಾರಾಟ ಮಾಡಿ ಕೋಟ್ಯಂತರ ರೂ ಗಳಿಸುತ್ತಿದ್ದಾಕೆಗೆ ಹೃದಯಾಘಾತ: 'ಹೂಸಿ'ಗಾಗಿ ತಿನ್ನುತ್ತಿದ್ದ ಪದಾರ್ಥವೇ ಆರೋಗ್ಯಕ್ಕೆ ಮುಳುವಾಯ್ತು

ತನ್ನ 'ವಾಯು ಮಾರಿ'ಯನ್ನು ಮಾರಾಟ ಮಾಡಿ ಕೋಟ್ಯಂತರ ರೂ ಗಳಿಸುತ್ತಿದ್ದಾಕೆಗೆ ಹೃದಯಾಘಾತ: 'ಹೂಸಿ'ಗಾಗಿ ತಿನ್ನುತ್ತಿದ್ದ ಪದಾರ್ಥವೇ ಆರೋಗ್ಯಕ್ಕೆ ಮುಳುವಾಯ್ತು

ಹೈದರಾಬಾದ್​​: ತಾನು ಬಿಡುವ ವಾಯು ಮಾರಿಯಿಂದಲೇ (ಹೂಸು) ವಾರಕ್ಕೆ ಲಕ್ಷಾಂತರ ರೂ. ಆದಾಯ ಗಳಿಸುತ್ತಿದ್ದ ನಟಿ ಸ್ಟೇಫನಿ ಮಾಟಿಯೋಗೆ ಹೃದಯಾಘಾತವಾಗಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೂಸು ಎಂದರೆ ಮೂಗು ಮುಚ್ಚಿಕೊಳ್ಳುವ ಎಲ್ಲರ ನಡುವೆ, ಈಕೆ ಅದೇ ಹೂಸನ್ನು ಮಾರಿ ತಿಂಗಳಿಗೆ ಕೋಟಿಗಟ್ಟಲೆ ರೂ. ಸಂಪಾದನೆ ಮಾಡುತ್ತಾಳೆ. ಹೂಸು ಮಾರಿಯೇ ಭಾರಿ ಜನಪ್ರಿಯಳಾಗಿದ್ದ ಈಕೆಯ ಹೂಸನ್ನು ಖರೀದಿಸಲು ಅಭಿಮಾನಿಗಳು ಮುಗಿಬೀಳುತ್ತಿದ್ದರಂತೆ. ಈ ವಿಷಯವನ್ನು ಖುದ್ದು ಈ ನಟಿಯೇ ಹೇಳಿಕೊಂಡಿದ್ದಾಳೆ.

ಈಕೆ ತನ್ನ ಹೂಸನ್ನು ಜಾರ್​ನಲ್ಲಿ ಹೂವಿನ ದಳಗಳಿಂದ ಪ್ಯಾಕ್ ಮಾಡಿ ತನ್ನ ಅಭಿಮಾನಿಗಳಿಗೆ ನೀಡುತ್ತಿದ್ದಳು. ಹೀಗೆ ಮಾಡುವುದರಿಂದ ಹೂವಿನ ದಳಗಳು ಮತ್ತಷ್ಟು ಪರಿಮಳಯುಕ್ತವಾಗುತ್ತಿತ್ತಂತೆ. ಈಕೆಯ ಅಭಿಮಾನಿಗಳಿಂದ ಹೂಸಿಗೆ‌ ಬೇಡಿಕೆ ಬರುತ್ತಲೇ ಇದೆ. ಅಷ್ಟೇ ಅಲ್ಲದೇ ಇವಳು ಧರಿಸುವ ಬ್ರಾಗಳು, ಪ್ಯಾಂಟಿಗಳು, ಬಟ್ಟೆ ಹಾಗೂ ಸಾಬೂನುಗಳಿಗೂ ಬೇಡಿಕೆಯಿದ್ದು ಇದನ್ನೂ ಮಾರಾಟ ಮಾಡುತ್ತಿದ್ದಾಳೆ. ರಿಯಾಲಿಟಿ ಟಿ.ವಿ ಶೋ '90 ಡೇ ಫಿಯಾನ್ಸಿ’ಯಲ್ಲಿ ಕಾಣಿಸಿಕೊಂಡ ಬಳಿಕ ಈಕೆ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮನ್ನಣೆಯನ್ನು ಗಳಿಸಿದ್ದಳು. ಅಂದಿನಿಂದ ತನ್ನದೇ ಆದ ಯೂಟ್ಯೂಬ್ ಚಾನೆಲ್ ಅನ್ನು ಈಕೆ ಪ್ರಾರಂಭಿಸಿದ್ದಳು.

ಸದ್ಯ ಹೃದಯಾಘಾಗೊಂಡು ಆಸ್ಪತ್ರೆ ಸೇರಿರುವ ಈಕೆಯ ಗಳಿಕೆಗೆ ಭಾರಿ ಹೊಡೆತ ಬಿದ್ದಿದೆ. ಇದ್ದಕ್ಕಿದ್ದಂತೆಯೇ‌ ಈಕೆಗೆ ಎದೆ ನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದು ಹೃದಯಾಘಾತದ ಸೂಚನೆ ಎಂದಿರುವ ವೈದ್ಯರು ತೀವ್ರ ನಿಗಾ ಘಟಕದಲ್ಲಿಟ್ಟುಕೊಂಡು ಚಿಕಿತ್ಸೆ ನೀಡುತ್ತಿದ್ದಾರೆ. 

ಈಕೆ ಹೆಚ್ಚಿನ ಹೂಸು ಬಿಡುವುದಕ್ಕಾಗಿ ಬೀನ್ಸ್, ಮೊಸರು, ಗಟ್ಟಿಯಾಗಿ ಬೇಯಿಸಿದ ಮೊಟ್ಟೆಗಳನ್ನು ತಿನ್ನುವ ಮೂಲಕ ಗ್ಯಾಸ್​​ನ್ನು ಹೆಚ್ಚು ಮಾಡಿಕೊಳ್ಳುತ್ತೇನೆ ಎಂದು ಸಂದರ್ಶನದಲ್ಲಿ ಹೇಳಿದ್ದಳು. ಇದೀಗ ಅದೇ ಅವಳ ಆರೋಗ್ಯಕ್ಕೆ ಮುಳುವಾಗಿದೆ. ಆಸ್ಪತ್ರೆಗೆ ದಾಖಲಾಗಿ ರಕ್ತ ಪರೀಕ್ಷೆ ಹಾಗೂ ಇಸಿಜಿ ಮಾಡಿಕೊಂಡಾಗ ಈಕೆ ಬೀನ್ಸ್​, ಮೊಟ್ಟೆ ಹಾಗೂ ಬಾಳೆಹಣ್ಣಿನ ಪದಾರ್ಥ ಹೆಚ್ಚಾಗಿ ಸೇವನೆ ಮಾಡಿರುವುದರಿಂದ ಈ ತೊಂದರೆ ಕಾಣಿಸಿಕೊಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article