-->
ಇನ್ನೇನು ಶೂಟಿಂಗ್ ಮುಕ್ತಾಯವಾಗುತ್ತಿತ್ತು, ಅಷ್ಟರಲ್ಲೇ ನಟಿ ಮೀರಾ ಮಿಥುನ್ ಪರಾರಿ: “ಪೈ ಕೊನೋಮ್​” ಸಿನಿಮಾ ನಿರ್ದೇಶಕ ಹೇಳಿದ್ದೇನು?

ಇನ್ನೇನು ಶೂಟಿಂಗ್ ಮುಕ್ತಾಯವಾಗುತ್ತಿತ್ತು, ಅಷ್ಟರಲ್ಲೇ ನಟಿ ಮೀರಾ ಮಿಥುನ್ ಪರಾರಿ: “ಪೈ ಕೊನೋಮ್​” ಸಿನಿಮಾ ನಿರ್ದೇಶಕ ಹೇಳಿದ್ದೇನು?

ಚೆನ್ನೈ: ಕೆಲ‌ ನಟ - ನಟಿಯರು ನಟನೆಗಿಂತ ಹೆಚ್ಚಾಗಿ ವಿವಾದದಿಂದಲೇ ಸುದ್ದಿಯಾಗಿರುತ್ತಾರೆ‌‌‌. ಇಂತವರಲ್ಲೊಬ್ಬರು ಕಾಲಿವುಡ್​ ನಟಿ ಮೀರಾ ಮಿಥುನ್. ಸದಾ ವಿವಾದಗಳಿಂದಲೇ ಸುದ್ದಿಯಾಗುತ್ತಿರುವ ಮೀರಾ ಮಿಥುನ್ ಇದೀಗ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. 

ತಮಿಳು ಚಿತ್ರ “ಪೈ ಕೊನೋಮ್​” ಚಿತ್ರದಲ್ಲಿ ಮೀರಾ ಮಿಥುನ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಈ ಸಿನಿಮಾವನ್ನು ಥೇನಿ ಭರತ್​ ಆರ್​ ಸುರುಲಿವೇಲ್​ ಎಂಬವರು  ಗ್ಲೇಬಲ್​ ಎಂಟರ್​ಟೈನ್​ಮೆಂಟ್​ ಬ್ಯಾನರ್​ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಸೆಲ್ವ ಅಂಬರಾಸನ್​ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇತ್ತೀಚೆಗಷ್ಟೇ ಈ ಸಿನಿಮಾದ ಫಸ್ಟ್​ ಲುಕ್​ ಬಿಡುಗಡೆ ಕಾರ್ಯಕ್ರಮ ಚೆನ್ನೈನಲ್ಲಿ ನಡೆದಿತ್ತು. 

ಈ ವೇಳೆ ನಿರ್ದೇಶಕ ಸೆಲ್ವ ಅಂಬರಾಸನ್​ ಅವರು ನಟಿ ಮೀರಾ ಮಿಥುನ್​ ಮಾಡಿದ ಎಡವಟ್ಟಿನ ಬಗ್ಗೆ ಹೇಳಿಕೊಂಡಿದ್ದಾರೆ. 'ಸಿನಿಮಾ ಚಿತ್ರೀಕರಣ ಶೇ.80 ರಷ್ಟು ಪೂರ್ಣಗೊಂಡಿರುವಾಗಲೇ ಮೀರಾ ಮಿಥುನ್​ ವಿವಿಧ ಕಾರಣಗಳಿಂದಾಗಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದರು. ಜೈಲಿನಿಂದ ಬಿಡುಗಡೆಯಾದ ಬಳಿಕ ಸಿನಿಮಾದ ಇನ್ನುಳಿದ ಶೇ.20 ರಷ್ಟು ಶೂಟಿಂಗ್​ ಕೊಡೈಕೆನಾಲ್​ನಲ್ಲಿ ಮಾಡಲು ನಿಗದಿಯಾಗಿತ್ತು. ಶೂಟಿಂಗ್​ ಸ್ಪಾಟ್ ಗೆ 6 ಮಂದಿಯೊಂದಿಗೆ ಬಂದಿದ್ದ ಮೀರಾ, ಶೂಟಿಂಗ್​ ಮಧ್ಯೆಯೇ ಹೇಳದೇ ಕೇಳದೇ ಪರಾರಿ ಆಗಿದ್ದಾರೆಂದು ಹೇಳಿಕೊಂಡಿದ್ದಾರೆ. 

ಆಕೆ ಇರುತ್ತಿದ್ದರೆ ಇನ್ನೆರೆಡು ದಿನಗಳಲ್ಲಿ ಶೂಟಿಂಗ್​ ಕೆಲಸ ಸಂಪೂರ್ಣಗೊಳ್ಳುತ್ತಿತ್ತು. ಕೊನೆಗೆ ಚಿತ್ರದ ಕಥೆಯನ್ನೇ ಬದಲಾಯಿಸಿ ಶೂಟಿಂಗ್​ ಪೂರ್ಣಗೊಳಿಸಿದ್ದಾಗಿ ನಿರ್ದೇಶಕರು ಹೇಳಿಕೊಂಡಿದ್ದಾರೆ. ಇದೀಗ ಈ ವಿಚಾರವು ಕಾಲಿವುಡ್​ ಅಂಗಳದಲ್ಲಿ ಭಾರೀ ಚರ್ಚೆಗೆ ಒಳಗಾಗಿದೆ. ಆದರೆ, ಈ ಘಟನೆಯ ಬಗ್ಗೆ ಮೀರಾ ಮಿಥುನ್​ ಮಾತ್ರ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Ads on article

Advertise in articles 1

advertising articles 2

Advertise under the article