ಮದನಪಲ್ಲಿ: ಪ್ರೀತಿಸುತ್ತಿದ್ದ ಜೋಡಿಯೊಂದು ಮನೆಯವರಿಗೆ ಹೇಳದೆ ಕೇಳದೆ ಓಡಿಹೋಗಿ ಮದುವೆಯಾಗಿತ್ತು. ಇದೀಗ ಬೆದರಿಕೆಯನ್ನೊಡ್ಡುತ್ತಿರುವ ಮನೆಯವರಿಗೆ ಹೆದರಿ ಪ್ರೇಮಿಗಳಿಬ್ಬರು ರಕ್ಷಣೆಯನ್ನು ಕೋರಿ ಪೊಲೀಸ್ ಠಾಣೆಯ ಮೆಟ್ಟಿಲೇರಿರುವ ಘಟನೆ ಆಂಧ್ರ ಪ್ರದೇಶದ ಮದನಪಲ್ಲಿಯಲ್ಲಿ ನಡೆದಿದೆ.
ಮದನಪಲ್ಲಿ ಪಟ್ಟಣದ ಕಿರಣ್ (23) ಹಾಗೂ ಮದನಪಲ್ಲಿ ಗ್ರಾಮೀಣ ಭಾಗದ ಕುಸುಮಾ (22) ವಿವಾಹವಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ ಪ್ರೇಮಿಗಳು.
ಕಿರಣ್ ಹಾಗೂ ಕುಸುಮಾ ಕಳೆದ 5 ವರ್ಷಗಳಿಂದ ಪರಸ್ಪರ ಪ್ರೀತಿಯ ಬಲೆಗೆ ಬಿದ್ದಿದ್ದರು. ಇಬ್ಬರೂ ಪ್ರೀತಿಸುತ್ತಿದ್ದ ಬಗ್ಗೆ ಎರಡೂ ಕುಟುಂಬಗಳಿಗೆ ತಿಳಿದಿತ್ತು. ಆದರೆ, ವಿವಾಹಕ್ಕೆ ಎರಡೂ ಕುಟುಂಬದಿಂದಲೂ ಒಪ್ಪಿಗೆ ಇರಲಿಲ್ಲ.
ಈ ಹಿನ್ನೆಲೆಯಲ್ಲಿ ಸೋಮವಾರ ಮನೆ ಬಿಟ್ಟು ಓಡಿ ಹೋದ ಪ್ರೇಮಿಗಳಿಬ್ಬರು ಮದುವೆ ಆಗಿದ್ದಾರೆ. ಇದೀಗ ಪಾಲಕರ ವಿರೋಧದ ನಡುವೆ ನಾವಿಬ್ಬರೂ ಮದುವೆ ಆಗಿದ್ದೇವೆ.
ಇದೀಗ ತಮಗೆ ಮನೆಯವರಿಂದ ಬೆದರಿಕೆ ಇದೆ ಎಂದು ನವದಂಪತಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಮೊರೆ ಹೋಗಿದ್ದಾರೆ. ಆದರೆ, ಎಸ್ಪಿ ಕಚೇರಿಯ ಸಿಬ್ಬಂದಿ ಡಿಎಸ್ಪಿ ಕಚೇರಿಗೆ ಹೋಗುವಂತೆ ಪ್ರೇಮಿಗಳಿಗೆ ಸಲಹೆ ನೀಡಿದ್ದಾರೆಂದು ತಿಳಿದು ಬಂದಿದೆ.