-->
30ರ ವಿಧವೆಯ ಕೈ ಹಿಡಿದ 50ರ ವರ... ಜಾತಿ ಅಡ್ಡ ಬಂದರೂ ಎಲ್ಲರನ್ನೂ ಒಪ್ಪಿ ವಿವಾಹವಾದ ಜೋಡಿ!

30ರ ವಿಧವೆಯ ಕೈ ಹಿಡಿದ 50ರ ವರ... ಜಾತಿ ಅಡ್ಡ ಬಂದರೂ ಎಲ್ಲರನ್ನೂ ಒಪ್ಪಿ ವಿವಾಹವಾದ ಜೋಡಿ!

ಔರಂಗಾಬಾದ್(ಬಿಹಾರ)​: ಬಿಹಾರದ ಔರಂಗಾಬಾದ್​ನಲ್ಲಿ ನಡೆದಿರುವ ವಿಭಿನ್ನ ಪ್ರೇಮ ವಿವಾಹವೊಂದು ಭಾರೀ ಸುದ್ದಿಯಲ್ಲಿದೆ. ಯಾಕೆ ಈ ವಿಚಾರ ಸುದ್ದಿಯಲ್ಲಿದೆ ಎಂದರೆ 50ರ ವ್ಯಕ್ತಿಯೋರ್ವರು 30 ವರ್ಷದ ವಿಧವೆಯ ಕೈಹಿಡಿದಿದ್ದಾರೆ. ಈ ಮೂಲಕ ಇವರಿಬ್ಬರ ಪ್ರೇಮ ವಿವಾಹ ಇದೀಗ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.

ಔರಂಗಾಬಾದ್​ ಜಿಲ್ಲೆಯ ಗೋಹ್​ ಬ್ಲಾಕ್​ನ ರುಕುಂಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ‌. ಇಲ್ಲಿ ವರ ಹಾಗೂ ವಧು ಇಬ್ಬರೂ ಬೇರೆ ಬೇರೆ ಜಾತಿಗೆ ಸೇರಿದವರಾಗಿದ್ದರೂ, ಊರಿನ ಜನರನ್ನು ಒಪ್ಪಿಸಿ, ಕುಟುಂಬಸ್ಥರನ್ನು, ಮದುವೆ ಮಾಡಿಕೊಂಡಿದ್ದಾರೆ. ಈ ನವಜೋಡಿಯನ್ನು ಕಣ್ತುಂಬಿಕೊಳ್ಳಲು ಇದೀಗ ಜನಸಾಗರವೇ ಹರಿದು ಬಂದಿದೆ.

ರುಕುಂಡಿ ಗ್ರಾಮದ ಶಿವಬರತ್​ ಪಾಸ್ವಾನ್​ ಪತ್ನಿ ಮೃತಪಟ್ಟಿದ್ದಾರೆ. ಗಯಾ ಜಿಲ್ಲೆಯ ಶೇರ್ಘಾಟಿ ನಿವಾಸಿ ರಮ್ಮಣಿ ದೇವಿ ಪತಿಯೂ  ಸಾವನ್ನಪ್ಪಿದ್ದಾನೆ. ಇಬ್ಬರೂ ಹಸ್ಪುರ್​ ಬ್ಲಾಕ್​ನ ಟೆಟ್ರಾಹಿ ಗ್ರಾಮದಲ್ಲಿ ಕೂಲಿ ಕೆಲಸ ಮಾಡ್ತಿದ್ದರು. ಈ ಸಂದರ್ಭ ಇಬ್ಬರೂ ಪರಸ್ಪರ ಪ್ರೀತಿಸಲು ಆರಂಭಿಸಿದ್ದಾರೆ. ಕೊನೆಗೆ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ

ಹಾಗಾಗಿ ತಾವು ಕೆಲಸ ನಿರ್ವಹಿಸುತ್ತಿದ್ದ ಮಾಲಕ ಉಪೇಂದ್ರ ಸಿಂಗ್​​ ಅವರಿಗೆ ಈ ಮಾಹಿತಿ ನೀಡಿದ್ದಾರೆ. ಆದರೆ ಆರಂಭದಲ್ಲಿ ಇವರಿಬ್ಬರ ಮದುವೆಗೆ ಜಾತಿ ಅಡ್ಡ ಬಂದಿದೆ. ಆದರೆ ಆ ಬಳಿಕ ಅವರು ಗ್ರಾಮಸ್ಥರನ್ನು ಒಪ್ಪಿಸುವಲ್ಲಿ ಸಫಲರಾಗಿದ್ದಾರೆ. ಇದೀಗ ಎರಡೂ ಗ್ರಾಮಸ್ಥರು ಮುಂದೆ ನಿಂತು ಸೂರ್ಯನ ದೇವಾಲಯದಲ್ಲಿ ಈ  ಮದುವೆ ಮಾಡಿಸಿದ್ದಾರೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

Advertise under the article

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100