
ಪರೀಕ್ಷೆ ಭೀತಿ: ಪಿಎಚ್ಡಿ ವಿದ್ಯಾರ್ಥಿನಿ ನೇಣಿಗೆ ಶರಣು
11/06/2021 09:26:00 PM
ಮೈಸೂರು: ಪಿಎಚ್ಡಿ ವಿದ್ಯಾರ್ಥಿನಿಯೋರ್ವಳು ನೇಣಿಗೆ ಕತ್ತು ಒಡ್ಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸರಸ್ವತಿಪುರಂನಲ್ಲಿ ನಡೆದಿದೆ.
ಚಾಮರಾಜನಗರ ಮೂಲದ ರಶ್ಮಿ (29) ಮೃತ ಪಿಎಚ್ ಡಿ ವಿದ್ಯಾರ್ಥಿನಿ.
ಎಂಎಸ್ಸಿ ಕೆಮಿಸ್ಟ್ರಿ ಮುಗಿಸಿರುವ ರಶ್ಮಿ ಮೈಸೂರು ವಿವಿಯಲ್ಲಿ ಪಿಎಚ್ಡಿ ಮಾಡುತ್ತಿದ್ದರು. ಅವರು ಸರಸ್ವತಿಪುರಂ 9ನೇ ಮೈನ್ನಲ್ಲಿರುವ ಪಿಜಿಯಲ್ಲಿ ಉಳಿದುಕೊಂಡಿದ್ದರು. ಅಲ್ಲದೆ ಜೆಎಸ್ಎಸ್ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು
ರಸಾಯನ ಶಾಸ್ತ್ರದಲ್ಲಿ ಪಿಎಚ್ಡಿ ಮಾಡುತ್ತಿದ್ದ ಇವರು ಸಂಶೋಧನೆಗೆ ಬೇಕಾದ ದಾಖಲಾತಿಗಳನ್ನು ಸಂಗ್ರಹ ಮಾಡಿ ಪ್ರಬಂಧ ಮಂಡಿಸುವ ವಿಚಾರದಲ್ಲಿ ಸಿದ್ಧತೆ ಮಾಡಿಕೊಂಡಿರಲಿಲ್ಲ ಎನ್ನಲಾಗಿದೆ. ಪರಿಣಾಮ ಒತ್ತಡಕ್ಕೊಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ.
ಈ ಬಗ್ಗೆ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.