
ಹಾಡುತ್ತಲೇ ಅಸಭ್ಯವಾಗಿ ವರ್ತಿಸಿದ ಅಮೇರಿಕಾದ ಪಾಪ್ ಗಾಯಕಿ: ಆಕ್ರೋಶದ ಬಳಿಕ ಕ್ಷಮೆ ಯಾಚನೆ
Thursday, November 25, 2021
ಫ್ಲೋರಿಡಾ: ನಟರು, ಹಾಡುಗಾರರ ಬಗ್ಗೆ ಕೆಲವರು ಅತಿರೇಕದ ಅಭಿಮಾನವನ್ನು ಕೆಲವರು ಹೊಂದಿರುತ್ತಾರೆ. ಇಂತಹದ್ದೇ ಒಂದು ಘಟನೆ ಅಮೇರಿಕಾದಲ್ಲಿ ನಡೆದಿದೆ. ಅಮೆರಿಕಾದ ಪಾಪ್ ಗಾಯಕಿಯೋರ್ವಳು ಹಾಡುತ್ತಲೇ ವೇದಿಕೆ ಮೇಲೆಯೇ ತಾನು ಧರಿಸಿದ್ದ ಪ್ಯಾಂಟ್ ಬಿಚ್ಚಿ ಅಭಿಮಾನಿಯೊಬ್ಬನ ಬಾಯಿಗೆ ಮೂತ್ರ ವಿಸರ್ಜನೆ ಮಾಡಿರುವ ಅಸಹ್ಯ ಘಟನೆ ನಡೆದಿದೆ. ಆದರೆ ಆ ಅಭಿಮಾನಿ ಕೆಳಗೆ ಮಲಗಿಕೊಂಡು ಈಕೆಯ ಮೂತ್ರವನ್ನು ಖುಷಿಯಿಂದ ಹೀರುತ್ತಾ ಕುಣಿದು.
ಈ ರೀತಿ ಅಸಹ್ಯ ವರ್ತನೆ ಮಾಡಿರೋದು ‘ಬ್ರಾಸ್ ಅಗೇನೆಸ್ಟ್‘ ಎಂಬ ರಾಕ್ ಸಂಗೀತ ಮ್ಯೂಸಿಕಲ್ ಗ್ರೂಪ್‌ನ ಗಾಯಕಿ ಸೋಫಿಯಾ ಉರಿಸ್ಟಾ. ಈ ವೀಡಿಯೋ ವೈರಲ್ ಆಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಇದರ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಗಾಯಕಿ ಇದೀಗ ಕ್ಷಮೆ ಕೋರಿದ್ದಾಳೆ.
ಈ ಅಸಹ್ಯಕರ ಘಟನೆ ಕಳೆದ ವಾರ ಫ್ಲೋರಿಡಾದ ಡೇಟೋನಾ ಬೀಚ್ನಲ್ಲಿ ನಡೆದ ರಾಕ್ವಿಲ್ಲೆ ಮೆಟಲ್ ಉತ್ಸವದಲ್ಲಿ ನಡೆದಿತ್ತು. ಅಲ್ಲಿ ಆಯೋಜಿಸಲಾಗಿದ್ದ ರಾಕ್ ಉತ್ಸವದಲ್ಲಿ ಗಾಯಕಿ ಸೋಫಿಯಾ ಉರಿಸ್ಟಾ ಗಾಯನವೂ ಇತ್ತು. ಈಕೆಯ ಹಾಡು ಕೇಳಿ, ಕುಣಿದು ಕುಪ್ಪಳಿಸಿ ಹುಚ್ಚೆದ್ದ ಅಭಿಮಾನಿಯೊಬ್ಬ ವೇದಿಕೆ ಮೇಲೆ ಹೋಗಿ ಮಲಗಿದ್ದಾನೆ. ತಕ್ಷಣ ಈಕೆ ತನ್ನ ಪ್ಯಾಂಟ್ ಬಿಚ್ಚಿ ಆತನ ಬಾಯಿಗೆ ಮೂತ್ರ ವಿಸರ್ಜನೆ ಮಾಡಿದ್ದಾಳೆ.
ಆ ಅಭಿಮಾನಿ ಮೂತ್ರ ಕುಡಿದು ಒಂದೆಡೆ ಕುಣಿದು ಕುಪ್ಪಳಿಸಿದರೆ ಇನ್ನೊಂದೆಡೆ, ಉಳಿದ ಪ್ರೇಕ್ಷಕರೂ ಚಪ್ಪಾಳೆ ತಟ್ಟಿದ್ದಾರೆ. ಬಳಿಕ ಈ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗುತ್ತಲೇ, ಉರಿಸ್ಟಾ ಟ್ವೀಟ್ ಮಾಡಿ ಕ್ಷಮೆ ಕೋರಿದ್ದಾಳೆ. ಇಲ್ಲಿಯವರೆಗೆ ನನ್ನೆಲ್ಲಾ ಕಾರ್ಯಕ್ರಮಗಳಲ್ಲಿ ನಾನು ಮಿತಿಯಲ್ಲಿಯೇ ಇದ್ದೆ. ನನ್ನ ಅಭಿಮಾನಿಗಳನ್ನು ನಾನು ತುಂಬಾ ಪ್ರೀತಿಸುತ್ತಿದ್ದೇನೆ. ಆದರೆ ಈ ಕಾರ್ಯಕ್ರಮದಲ್ಲಿ ಅದೇನಾಯಿತೋ ಗೊತ್ತಿಲ್ಲ. ನಾನು ಅತಿರೇಕಕ್ಕೆ ಹೋಗಿ ಹೀಗೆ ಮಾಡಿದೆ, ಆದ್ದರಿಂದ ಕ್ಷಮೆ ಕೋರುತ್ತೇನೆ ಎಂದಿದ್ದಾಳೆ. ಇದರ ಬೆನ್ನಲ್ಲೇ ತಂಡ ಕೂಡ ಕ್ಷಮೆ ಕೋರಿದೆ.