ವಧುವಿನ ಶೃಂಗಾರದಲ್ಲಿಯೇ ಕಾಲೇಜು ಪರೀಕ್ಷೆ ಬರೆದು ಮದುವೆ ಮಂಟಪಕ್ಕೆ ಧಾವಿಸಿ ತಾಳಿ ಕಟ್ಟಿಸಿಕೊಂಡಳು ಇಲ್ಲೋರ್ವಳು ಯುವತಿ: Photos Vairal

ಸೌರಾಷ್ಟ್ರ ​(ಗುಜರಾತ್​): ಪರೀಕ್ಷೆ ಬರೆದು ವಿವಾಹ ಮಂಟಪಕ್ಕೆ ತೆರಳಿ ವಧುವೋರ್ವಳು ತಾಳಿ ಕಟ್ಟಿಸಿರುವ ಘಟನೆ ಗುಜರಾತಿನ ಸೌರಾಷ್ಟ್ರದಲ್ಲಿ ನಡೆದಿದೆ.

ಕಾಲೇಜು ವಿದ್ಯಾರ್ಥಿನಿಯಾಗಿರುವ ಶಿವಾಂಗಿ ಭಕ್ತರಿಯಾ ಎಂಬಾಕೆಗೆ ಆಕೆಯ ಮದುವೆ ನಿಗದಿಯಾಗಿರುವ ದಿನವೇ ಕಾಲೇಜು ಪರೀಕ್ಷೆ ಇತ್ತು. ಹಾಗಾಗಿ ಆಕೆ ವಧುವಿನ ಅಲಂಕಾರದಲ್ಲಿಯೇ ಕಾಲೇಜಿಗೆ ಬಂದು ಪರೀಕ್ಷೆ ಬರೆದು, ಬಳಿಕ ತಕ್ಷಣ ಮದುವೆ ಮಂಟಪಕ್ಕೆ ತೆರಳಿ ಮದುವೆಯಾಗಿದ್ದಾಳೆ.  

ಲೆಹಂಗಾ ಧರಿಸಿಕೊಂಡು, ಮೈಮೇಲೆ ಆಭರಣ ತೊಟ್ಟುಕೊಂಡು ವಧುವಿನ ಶೃಂಗಾರದಲ್ಲಿಯೇ ಭಾವಿ ಪತಿಯೊಂದಿಗೆ ಕಾಲೇಜಿಗೆ ಬಂದ ವಧು ಶಿವಾಂಗಿ ಭಕ್ತರಿಯಾ, ಪರೀಕ್ಷೆ ಬರೆದಿದ್ದಾರೆ. ಇದೀಗ ಈಕೆ ವಧುವಿನ ಶೃಂಗಾರದಲ್ಲಿಯೇ ಪರೀಕ್ಷೆ ಬರೆದಿರುವ ಫೋಟೋ ಭಾರಿ ವೈರಲ್‌ ಆಗಿದೆ. 

ಗುಜರಾತ್ ನ ಸೌರಾಷ್ಟ್ರ ವಿಶ್ವವಿದ್ಯಾಲಯದ ವಿವಿಧ ಕಾಲೇಜು​​ಗಳ ಪರೀಕ್ಷೆಗಳು ನ.23ರ ಆರಂಭವಾಗಿತ್ತು. ಶಿವಾಂಗಿ ಭಕ್ತಾರಿಯಾ ಇದೇ ವಿವಿಯಲ್ಲಿ ಬಿಎಸ್​ಡಬ್ಲೂ  5ನೇ ಸೆಮಿಸ್ಟರ್​​​ ಓದುತ್ತಿದ್ದಳು. ಮದುವೆ ಹಾಗೂ ಪರೀಕ್ಷೆ ಒಂದೇ ದಿನ ಇದ್ದುದರಿಂದ ಮೊದಲು ಪರೀಕ್ಷೆ ಬರೆದು ಬಳಿಕ ಮದುವೆ ಮಂಟಪಕ್ಕೆ ಧಾವಿಸಿ ಶಿವಾಂಗಿ ಮದುವೆಯಾಗಿದ್ದಾರೆ.