Mangaluru: ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಜೈಲ್ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಚಾರಣಾಧೀನ ಕೈದಿ ಆತ್ಮಹತ್ಯೆಗೆ ಯತ್ನ!

ಮಂಗಳೂರು: ನಗರದ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಮಾನಸಿಕ ಅಸ್ವಸ್ಥರ ಜೈಲು ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಚಾರಣಾಧೀನ ಕೈದಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

 ಕುಂದಾಪುರದ ನವೀನ್ (31) ಆತ್ಮಹತ್ಯೆ ಮಾಡಲು ಯತ್ನಿಸಿರುವ‌ ವಿಚಾರಣಾಧೀನ ಕೈದಿ.

ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ನವೀನ್ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಜೈಲು ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಇಂದು ಸಂಜೆ ಆತ ಆಸ್ಪತ್ರೆಯ ಕಬ್ಬಿಣದ ಗ್ರಿಲ್ಸ್ ಗೆ ಬೆಡ್ ಶೀಟ್ ಕಟ್ಟಿ‌ ಆತ್ಮಹತ್ಯೆ ಮಾಡಲು ಯತ್ನಿಸಿದ್ದ‌. ತಕ್ಷಣ ಇದನ್ನು ಗಮನಿಸಿದ್ದ ಆಸ್ಪತ್ರೆಯ ಸಿಬ್ಬಂದಿ ಆತನನ್ನು ರಕ್ಷಿಸಿದ್ದಾರೆ‌‌. ಇದೀಗ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಆತ್ಮಹತ್ಯೆಗೆ ಯತ್ನಿಸಿರುವ ವಿಚಾರಣಾಧೀನ‌ ಕೈದಿ ನವೀನ್ ಶಿಕ್ಷಕಿ‌ಯೋರ್ವರು ತನಗೆ ಮಾಟ ಮಾಡಿದ್ದಾರೆಂದು ಗ್ರಹಿಸಿ ಸೆ.20ರಂದು ನಗರದ ಕೊಡಿಯಾಲ್ ಬೈಲ್​​​ನಲ್ಲಿರುವ ಡಯಟ್ ಶಿಕ್ಷಣ ಸಂಸ್ಥೆಗೆ ನುಗ್ಗಿ ಮೂವರು ಮಹಿಳೆಯರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹಲ್ಲೆ ಮಾಡಿದ್ದ. ತಕ್ಷಣ ನವೀನ್ ನನ್ನು ಬಂಧಿಸಿರುವ ಪೊಲೀಸರು ಈತನು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದರು.