-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಕೇರಳದಲ್ಲಿ ಮೊದಲ ಬಾರಿಗೆ ಆನ್ ಲೈನ್ ಮೂಲಕವೇ ನಡೆಯಿತು ರಿಜಿಸ್ಟ್ರಾರ್ ಮದುವೆ !‌

ಕೇರಳದಲ್ಲಿ ಮೊದಲ ಬಾರಿಗೆ ಆನ್ ಲೈನ್ ಮೂಲಕವೇ ನಡೆಯಿತು ರಿಜಿಸ್ಟ್ರಾರ್ ಮದುವೆ !‌

ಪುನಲೂರ್​: ಕೇರಳದ ಪುನಲೂರ್​ನಲ್ಲಿ ಸಬ್​ ರಿಜಿಸ್ಟ್ರಾರ್​ ಕಚೇರಿಯಲ್ಲಿ ವಧು ಧನ್ಯಾ ಮಾರ್ಟಿನ್​ ಹಾಗೂ ಉಕ್ರೇನ್​ನಲ್ಲಿರುವ ವರ ಜೀವನ್​ ಕುಮಾರ್​ ಕಾನೂನುಬದ್ಧವಾಗಿ ಆನ್​ಲೈನ್​ ಮೂಲಕವೇ ಮದುವೆಯಾಗಿ ಸುದ್ದಿಯಾಗಿದ್ದಾರೆ. ಇಡೀ ಕೇರಳ ರಾಜ್ಯದಲ್ಲಿ ಡಿಜಿಟಲ್​ ಸೌಲಭ್ಯದೊಂದಿಗೆ ನೆರವೇರಿದ ಮೊದಲ ವಿವಾಹ ಇದಾಗಿದೆ. 

ಸಬ್​ ರಿಜಿಸ್ಟ್ರಾರ್​ ಟಿ.ಎಂ. ಫಿರೋಜ್​ ನೇತೃತ್ವದಲ್ಲಿ ಈ ವಿವಾಹವು ಕಾನೂನುಬದ್ಧವಾಗಿ ನೆರವೇರಿದೆ. ಕಾನೂನು ವ್ಯವಹಾರ ಮುಗಿದ ತಕ್ಷಣ ಮದುವೆ ಪ್ರಮಾಣ ಪತ್ರವನ್ನು ವಧುವಿಗೆ ಹಸ್ತಾಂತರಿಸಲಾಯಿತು. 

ವರ ಜೀವನ್​ ಕುಮಾರ್​ ಪುನಲೂರ್​ ನಿವಾಸಿ. ವಧು ಧನ್ಯಾ ಮಾರ್ಟಿನ್ ತಿರುವಂತಪುರಂನ ಕಝಕ್ಕೂಟಂ ಮೂಲದ ನಿವಾಸಿ. ಸದ್ಯ ವೃತ್ತಿ ನಿಮಿತ್ತ ಉಕ್ರೇನ್ ನಲ್ಲಿ ವಾಸಿಸಿರುವ ಜೀವನ್ ಕುಮಾರ್ ಗೆ ಕೋವಿಡ್​ ಸೋಂಕಿನ ನಿರ್ಬಂಧದ ಹಿನ್ನೆಲೆಯಲ್ಲಿ  ಕೇರಳಕ್ಕೆ ಬರಲು ಸಾಧ್ಯವಾಗಿರಲಿಲ್ಲ.  ಆದರೆ ವಿಶೇಷ ಮದುವೆಯ ಕಾಯ್ದೆಯನ್ವಯ ತಮ್ಮ ವಿವಾಹ ನೋಂದಣಿ ಮಾಡಲು ಕಳೆದ ಮಾರ್ಚ್​ನಲ್ಲೇ ಧನ್ಯಾ ಮತ್ತು ಜೀವನ್​ ಕುಮಾರ್​ ಅರ್ಜಿ ಸಲ್ಲಿಸಿದ್ದರು. ಆದರೆ, ನಿಗದಿತ ಸಮಯಕ್ಕೆ ಜೀವನ್​ ಕುಮಾರ್​ ಕೇರಳಕ್ಕೆ ಬರಲು ಸಾಧ್ಯವಾಗಲಿಲ್ಲ. 

ಹೀಗಾಗಿ ಅವರು ಕೇರಳ ಹೈಕೋರ್ಟ್​ ಮೆಟ್ಟಿಲೇರಿದ್ದರು. ಅರ್ಜಿಯ ಸಿಂಧುತ್ವವನ್ನು ವಿಸ್ತರಿಸಬೇಕು ಮತ್ತು ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ಎರಡೂ ಕುಟುಂಬಗಳ ಉಪಸ್ಥಿತಿಯ ನಿಯಮವನ್ನು ತಪ್ಪಿಸುವ ಮೂಲಕ ವಿಡಿಯೋ ಕಾನ್ಫರೆನ್ಸ್ ಮೂಲಕ ಮದುವೆ ನೆರವೇರಿಸಬೇಕೆಂದು ಅರ್ಜಿಯಲ್ಲಿ ಕೇರಳ ಹೈಕೋರ್ಟ್‌ಗೆ ಮನವಿ ಮಾಡಿದ್ದರು. ವಿದೇಶಾಂಗ ಸಚಿವಾಲಯ, ಮಾಹಿತಿ ತಂತ್ರಜ್ಞಾನ ಇಲಾಖೆಯ ಅಭಿಪ್ರಾಯಗಳನ್ನು ಪರಿಗಣಿಸಿ, ಹೈಕೋರ್ಟ್​ ವಧು-ವರರ ಪರ ತೀರ್ಪು ನೀಡಿತ್ತು. 

ಈ ಹಿನ್ನೆಲೆಯಲ್ಲಿ ಆನ್​ಲೈನ್​ ಸೌಲಭ್ಯ ಮೂಲಕ ಇಬ್ಬರು ವಿವಾಹ ನೇರವೇರಿದೆ. ಈ ಮೂಲಕ ರಾಜ್ಯದಲ್ಲೇ ಮೊದಲ ಆನ್​ಲೈನ್​ ಮದುವೆಗೆ ಧನ್ಯಾ ಮತ್ತು ಜೀವನ್​ ಕುಮಾರ್​ ಸಾಕ್ಷಿಯಾಗಿದ್ದಾರೆ. ವರನ ತಂದೆ ದೇವರಾಜನ್​ ತಂದೆಯ ಪರವಾಗಿ ಸಹಿ ಹಾಕಿದರು. ಜಿಲ್ಲಾ ರಿಜಿಸ್ಟ್ರಾರ್​ ಸಿ.ಕೆ.ಜಾನ್ಸನ್​ ಈ ವಿಶೇಷ ಸಮಾರಂಭಕ್ಕೆ ಸಾಕ್ಷಿಯಾದರು. ಗೂಗಲ್​ ಮೀಟ್​ ಎಂಬ ಆನ್​ಲೈನ್​ ವೇದಿಕೆ ಮೂಲಕ ಈ ವಿನೂತನ ಮದುವೆ ಸಮಾರಂಭ ನೆರವೇರಿತು. 

Ads on article

Advertise in articles 1

advertising articles 2

Advertise under the article

ಸುರ