
ಮಂಡ್ಯದಲ್ಲೂ ನಡೆಯಿತು ನೈತಿಕ ಪೊಲೀಸ್ ಗಿರಿ: ಬೈಕ್ ನಲ್ಲಿ ಹಿಂಬಾಲಿಸಿ ಅಡ್ಡಗಟ್ಟಿದ ತಂಡ
10/10/2021 08:12:00 PM
ಮಂಡ್ಯ: ದ.ಕ.ಜಿಲ್ಲೆಯಲ್ಲಿ ಅನ್ಯಕೋಮಿನ ಹುಡುಗ - ಹುಡುಗಿ ಜೊತೆಯಾಗಿ ಸಿಕ್ಕರೆ ನೈತಿಕ ಪೊಲೀಸ್ ಗಿರಿ ಹೆಚ್ಚಾಗಿ ನಡೆಯುತ್ತಿರುತ್ತದೆ. ಇದೀಗ ಸಕ್ಕರೆನಾಡು ನೈತಿಕ ಪೊಲೀಸ್ ಗಿರಿ ಮಂಡ್ಯದಲ್ಲೂ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
4 ದಿನಗಳ ಹಿಂದೆ ಅನ್ಯಕೋಮಿನ ಹುಡುಗ-ಹುಡುಗಿ ಬೈಕ್ ನಲ್ಲಿ ಹೋಗುತ್ತಿರುವುದನ್ನು ತಂಡವೊಂದು ಬೆನ್ನಟ್ಟಿ ತಡೆದು ನಿಲ್ಲಿಸಿದೆ. ಇಬ್ಬರನ್ನು ಬೈಕ್ ನಿಂದ ಕೆಳಗಿಳಿಸಿ ಅನ್ಯಕೋಮಿನ ಯುವಕನ ಮೇಲೆ ಹಲ್ಲೆಗೂ ಯತ್ನ ನಡೆದಿದೆ. ಸಂಘಟನೆಯೊಂದರ ಕಾರ್ಯಕರ್ತರಿಂದ ಈ ಕೃತ್ಯ ಎಸಗಿದೆ ಎನ್ನಲಾಗಿದೆ.
ಮಂಡ್ಯ ತಾಲೂಕಿನ ಸುಂಡಹಳ್ಳಿ ಬಳಿ 4 ದಿನದ ಹಿಂದೆ ಈ ಪ್ರಕರಣ ನಡೆದಿದೆ. ಮೈಸೂರು- ಬೆಂಗಳೂರು ಹೆದ್ದಾರಿಯಲ್ಲಿ ಅನ್ಯಕೋಮಿನ ಯುವಕನ ಹಾಗೂ ಯುವತಿ ಬೈಕ್ ನಲ್ಲಿ ಹೋಗುತ್ತಿದ್ದರು. ಇದನ್ನು ನೋಡಿದ ಸಂಘಟನೆಯೊಂದರ ಕಾರ್ಯಕರ್ತರ ತಂಡ ಶ್ರೀರಂಗಪಟ್ಟಣದಿಂದ ಬೈಕ್ ಅನ್ನು ಹಿಂಬಾಲಿಸಿಕೊಂಡು ಬಂದು ಮಂಡ್ಯದ ಸುಂಡಹಳ್ಳಿ ಬಳಿ ಬೈಕ್ ಅಡ್ಡಗಟ್ಟಿದ್ದಾರೆ.
ಕೆಲ ಕಾಲ ಇವರ ನಡುವೆ ಮಾತಿನ ಚಕಮಕಿ ನಡೆದಿದೆ. ಕೊನೆಗೆ ಯುವತಿಯ ಪೋಷಕರಿಗೆ ಕರೆ ಮಾಡಿದ ಕಾರ್ಯಕರ್ತರು ಆಕೆಯನ್ನು ಅವರ ವಶಕ್ಕೆ ಒಪ್ಪಿಸಿದ್ದಾರೆ. ಈ ಸಂದರ್ಭ ಯುವಕನಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.