-->
ನಾಳೆ (ಅ.13) ಕುದ್ರೋಳಿಗೆ ಬರುವ ಪ್ಲ್ಯಾನ್ ಇದೆಯ?  ಬರುವುದಕ್ಕೆ ಮುಂಚೆ ಈ ಸುದ್ದಿ ನೋಡಿ

ನಾಳೆ (ಅ.13) ಕುದ್ರೋಳಿಗೆ ಬರುವ ಪ್ಲ್ಯಾನ್ ಇದೆಯ? ಬರುವುದಕ್ಕೆ ಮುಂಚೆ ಈ ಸುದ್ದಿ ನೋಡಿ


ಮಂಗಳೂರು: ಮಂಗಳೂರು ದಸರ ಪ್ರಯುಕ್ತ ಕುದ್ರೋಳಿ ಕ್ಷೇತ್ರಕ್ಕೆ ಭಕ್ತರು ನಿರಂತರವಾಗಿ ಬರುತ್ತಿದ್ದಾರೆ. ದಸರದ ಒಂದು ದಿನ ಕುದ್ರೋಳಿ ದೇವಸ್ಥಾನಕ್ಕೆ ಬರುವ ಲೆಕ್ಕಾಚಾರವನ್ನು ‌ಮೊದಲೆ ಮಾಡಿರುತ್ತಾರೆ. ಹೀಗೆ ನಾಳೆ‌( ಅ.13) ರಂದು ಕುದ್ರೋಳಿ ದೇವಸ್ಥಾನಕ್ಕೆ ಬರಬೇಕೆಂದು ನಿರ್ಧರಿಸಿರುವವರು ಈ ಸುದ್ದಿಯನ್ನೊಮ್ಮೆ‌ ಓದಬೇಕು.

ಉಡುಪಿ ಜಿಲ್ಲಾಪ್ರವಾಸಕ್ಕೆ ಬರುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪ್ರವಾಸದ ಕಾರ್ಯಕ್ರಮದಲ್ಲಿ ಪರಿಷ್ಕೃತ ವಾಗಿದ್ದು  ಬುಧವಾರ (ಅ.13) ಸಂಜೆ  ಅವರು ಕುದ್ರೋಳಿ ಕ್ಷೇತ್ರಕ್ಕೆ ಬರಲಿದ್ದಾರೆ.

ಈ ಕಾರಣದಿಂದ ನಾಳೆ ಸಂಜೆ 3 ರಿಂದ 7 ಗಂಟೆಯವರೆಗೆ ಕ್ಷೇತ್ರಕ್ಕೆ ಭಕ್ತಾದಿಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ರಾತ್ರಿ 7.00ರಿಂದ ಎಂದಿನಂತೆ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ಆಡಳಿತ ಮಂಡಳಿ ತಿಳಿಸಿದೆ.

ಭದ್ರತಾ ದೃಷ್ಟಿಯಿಂದ ಹಾಗೂ ಹಿರಿಯ ಅಧಿಕಾರಿಗಳ ಸೂಚನೆ ಹಿನ್ನಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು  ಭಕ್ತಾದಿಗಳು ಸಹಕರಿಸಬೇಕೆಂದು ದೇವಳದ ಅಧ್ಯಕ್ಷ ಎಚ್.ಎಸ್. ಸಾಯಿರಾಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article