-->
ಮಗಳ ಸಾವಿಗೆ ಅಳಿಯನ ಜನನಾಂಗವೇ ಕಾರಣ: ಖಾಸಗಿ ಅಂಗದ ಗಾತ್ರ ಪರೀಕ್ಷಿಸಿದ ಮಾವ

ಮಗಳ ಸಾವಿಗೆ ಅಳಿಯನ ಜನನಾಂಗವೇ ಕಾರಣ: ಖಾಸಗಿ ಅಂಗದ ಗಾತ್ರ ಪರೀಕ್ಷಿಸಿದ ಮಾವ

ಜಾವಾ: ರಾತ್ರಿಯವರೆಗೆ ಚೆನ್ನಾಗಿದ್ದ ಮಗಳು ಉಂಡು ಮಲಗಿದಾಕೆ ಬೆಳಗ್ಗೆ ಎಳಲೇ ಇಲ್ಲ ಎಂಬ ಕಾರಣಕ್ಕೆ ಮಾವನೊಬ್ಬ ಇದಕ್ಕೆ ತನ್ನ ಅಳಿಯನ ಜನನಾಂಗವೇ ಕಾರಣ ಎಂದು ಪೊಲೀಸ್ ದೂರು ನೀಡಿರುವ ವಿಚಿತ್ರ ಘಟನೆಯೊಂದು ನಡೆದಿದೆ.

ಕಳೆದ ವರ್ಷವೇ ಈ ಘಟನೆ ನಡೆದುದ್ದರೂ ಈಗ ವೈರಲ್‌ ಆಗುತ್ತಿದೆ. ಅಲ್ಲದೆ ಜಾಲತಾಣಗಳಲ್ಲಿ ಭಾರೀ ಸುದ್ದಿ ಮಾಡುತ್ತಿದೆ. ಇಂಥದ್ದೊಂದು ಘಟನೆ ನಡೆದಿರೋದು ಇಂಡೋನೇಷ್ಯಾದ ಪೂರ್ವ ಜಾವಾದ ಮರೋನ್‌ ಕಿಡೋಲ್‌ ಎಂಬ ಪ್ರದೇಶದಲ್ಲಿ. ಮಾವ ನೀಡಿರುವ ದೂರಿನ ಆಧಾರದ ಮೇಲೆ ಪೊಲೀಸರು ಅಳಿಯನ ಬಟ್ಟೆಯನ್ನು ಬಿಚ್ಚಿಸಿ ಆತನ ಖಾಸಗಿ ಅಂಗದ ಗಾತ್ರವನ್ನು ಪರೀಕ್ಷೆ ಮಾಡಿದ್ದಾರೆ. 

ಈ ರೀತಿಯ ವಿಚಿತ್ರ ಅಗ್ನಿಪರೀಕ್ಷೆಯನ್ನು ಎದುರಿಸಿರುವ ಅಳಿಯನ ಹೆಸರು ಬರ್ಸಾಹ್‌. ಈತನ ವಿರುದ್ಧ ದೂರು ದಾಖಲು ಮಾಡಿರುವ ಮಾವ ನೇಡಿ ಸಿಟೊ(55) ಎಂಬಾತ. ನೇಡಿ ಸಿಟೊನ ಮಗಳು ಜುಮಾಂಟ್ರಿಯಾಳನ್ನು ಬರ್ಸಾಹ್‌ನ ಜೊತೆ ವಿವಾಹ ಮಾಡಿಕೊಡಲಾಗಿತ್ತು. ಸತಿ-ಪತಿಯರಿಬ್ಬರು ಚೆನ್ನಾಗಿಯೇ ಸಂಸಾರ ಮಾಡಿಕೊಂಡು ಹೋಗುತ್ತಿದ್ದರು. ಆದರೆ ಅದೊಂದು ದಿನ ರಾತ್ರಿ ಮಲಗಿದ್ದ ಜುಮಾಂಟ್ರಿಯಾ ಬೆಳಗ್ಗೆ  ಮೃತಪಟ್ಟಿದ್ದಳು. 

ಅಳಿಯನ ಬಗ್ಗೆ ಯಾವುದೇ ಸಂದೇಹ ಇಲ್ಲದ ಕಾರಣ ಯಾವುದೇ ದೂರು ದಾಖಲಿಸದೆ ಇದೊಂದು ಸಹಜ ಸಾವು ಎಂದುಕೊಂಡು ಮಗಳ ಅಂತ್ಯಕ್ರಿಯೆಯನ್ನು ಮಾವ ನೆರವೇರಿಸಿದ್ದ. 'ಹೀಗೆ ಏಕಾಏಕಿ ಆಕೆ ಮೃತಪಡಲು ಆಕೆಯ ಗಂಡ ರಾತ್ರಿಪೂರ್ತಿ ಸೆಕ್ಸ್‌ ಮಾಡಿರಬಹುದು' ಎಂಬ ಊರಿನವರ ಮಾತು ಕೇಳಿ ಮಾವನಿಗೆ  ಊರಿನವರು ಸಂದೇಹ ಶುರುವಾಗಿದೆ. ಆತನ ಜನನಾಂಗ ಬಹಳ ದೊಡ್ಡದಿರಬಹುದು, ಆದ್ದರಿಂದ ಜುಮಾಂಟ್ರಿಯಾ ಮೃತಪಟ್ಟಿದ್ದಾಳೆ. ಇಲ್ಲದಿದ್ದರೆ ಆರೋಗ್ಯವಂತಳಾಗಿರುವ ಆಕೆ ಸಾಯಲು ಸಾಧ್ಯವೇ ಇಲ್ಲ ಎಂಬ ಸಂದೇಹ ಶುರುವಾಗಿ ತನ್ನ ಮಗಳ ಸಾವಿಗೆ ಅಳಿಯನ ಜನನಾಂಗ ಕಾರಣ ಎಂದು ದೂರು ದಾಖಲು ಮಾಡಿದ್ದಾನೆ.

ದೂರಿನ ಹಿನ್ನೆಲೆಯಲ್ಲಿ ಪೊಲೀಸರು  ತನಿಖೆ ನಡೆಸಲು ಅಳಿಯನನ್ನು ಕರೆದು ಜನನಾಂಗ ಪರೀಕ್ಷೆ ಮಾಡಿದ್ದಾರೆ. ಆದರೆ ಅದು ಅಸಾಮಾನ್ಯ ಗಾತ್ರವೇನೂ ಇರಲಿಲ್ಲ, ಅದು ಸಾಮಾನ್ಯವಾಗಿಯೇ ಇತ್ತು. ಇದರಿಂದ ಆತನ ಪತ್ನಿ ಮೃತಪಟ್ಟಿರಲು ಸಾಧ್ಯವೇ ಇಲ್ಲ ಎಂದಿದ್ದಾರೆ. ವೈದ್ಯಕೀಯ ಪರೀಕ್ಷೆಯೂ ನಡೆದು ಅವರೂ ಆತನ‌ ಜನನಾಂಗದ ಗಾತ್ರ ಸರಿಯಾಗಿದೆ ಇದೆ ಎಂದಿದ್ದರು. ಬಳಿಕ ಸಾವಿನ ತನಿಖೆ ಮಾಡಿದಾಗ ಜುಮಾಂಟ್ರಿಯಾಗೆ ಸಣ್ಣ ವಯಸ್ಸಿನಿಂದಲೇ ಅನಾರೋಗ್ಯ ಸಮಸ್ಯೆ ಇತ್ತು. ಎಪಿಲಪ್ಸಿ ಸಮಸ್ಯೆಯಿಂದ ಬಳಲುತ್ತಿದ್ದಳೆಂದು ತಿಳಿದುಬಂದಿದೆ.

Ads on article

Advertise in articles 1

advertising articles 2

Advertise under the article