ಪಕ್ಷಾಂತರದ ಜೊತೆಗೆ ಸಿಪಿಐ ಕಚೇರಿಯ ಎಸಿಯನ್ನೂ ಕೊಂಡೊಯ್ದ ಕನ್ಹಯ್ಯಾ!
ನವದೆಹಲಿ: ಪ್ರತಿಷ್ಟಿತ ಜವಾಹರ ಲಾಲ್ ನೆಹರೂ (ಜೆಎನ್‌ಯು) ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಹೊಮ್ಮಿದ್ದ ಕನ್ಹಯ್ಯಾ ಕುಮಾರ್ ಇದೀಗ ಸಿಪಿಐನಿಂದ ಕಾಂಗ್ರೆಸ್ ಗೆ ಪಕ್ಷಾಂತರಗೊಂಡಿದ್ದಾರೆ.
ತಾವು ಇನ್ನೊಂದು ಪಕ್ಷಕ್ಕೆ ಹೊರಹೋಗುವಾಗ ಪಾಟ್ನಾ ಸಿಪಿಐ ಕಚೇರಿಗೆ ತಾವು ಅಳವಡಿಸಲಾಗಿದ್ದ ಎಸಿಯನ್ನು ಕಿತ್ತುಕೊಂಡು ಹೋಗಿದ್ದಾರೆ.
ಸಿಪಿಐ ಕಚೇರಿಯಲ್ಲಿ ಕನ್ಹಯ್ಯಾ ಅವರೇ ಎಸಿ ಅಳವಡಿಸಿದ್ದರು. ಇದೀಗ ಅವರು ಪಕ್ಷ ಬದಲಾವಣೆ ಮಾಡಿದ ಸಂದರ್ಭದಲ್ಲಿ ಸಿಪಿಐ ಕಚೇರಿಗೆ ಹಾಕಿದ್ದ ಎಸಿಯನ್ನು ತೆಗೆಸಿದ್ದಾರೆ.
ಈ ವಿಚಾರವನ್ನು ದೃಢಪಡಿಸಿರುವ ಸಿಪಿಐ ಬಿಹಾರ ರಾಜ್ಯ ಕಾರ್ಯದರ್ಶಿ ರಾಮ್ ನರೇಶ್ ಪಾಂಡೆ, ಎಸಿಯನ್ನು ಅವರೇ ಹಾಕಿಸಿದ್ದರಿಂದಾಗಿ ಅದನ್ನು ತೆಗೆಯಲು ಅನುಮತಿ ನೀಡಲಾಗಿದೆ ಎಂದು ಹೇಳಿದ್ದಾರೆ.
ಕನ್ಹಯ್ಯ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಪ್ರತಿಕ್ರಿಯಿಸಿರುವ ಪಾಂಡೆ, ಕನ್ಹಯ್ಯಾ ಮನಃಸ್ಥಿತಿ ಕಮ್ಯುನಿಸ್ಟ್ ಆಗಿರುವುದರಿಂದ ಹಾಗೂ ಇಂತಹ ಜನರು ತಮ್ಮ ಸಿದ್ಧಾಂತಕ್ಕೆ ಬಲವಾಗಿ ಅಂಟಿಕೊಳ್ಳುವುದರಿಂದ ಕನ್ಹಯ್ಯಾ ಕಾಂಗ್ರೆಸ್ ಸೇರುವುದನ್ನು ನಂಬಲಾಗುತ್ತಿಲ್ಲ ಎಂದು ಹೇಳಿದ್ದಾರೆ.
