Alvas Engineering College- 'ಆಕ್ಟ್ ಟು ರಿಸ್ಟೋರ್' ಅಭಿಯಾನಕ್ಕೆ ಆಳ್ವಾಸ್ ಎಂಜಿನಿಯರಿಂಗ್ ಕಾಲೇಜ್‌ನ ಹರೀಶ್ ಭಟ್ 'ಪಕ್ಷಿವನ' ಆಯ್ಕೆ



ಯುನೈಟೆಡ್ ನೇಶನ್ಸ್ ಎನ್ವಿರಾನ್ಮೆಂಟ್ ಪ್ರೊಗ್ರಾಮ್ ಹಾಗೂ ಸೆಂಟರ್ ಫಾರ್ ಎನ್ವಿರಾನ್ಮೆಂಟ್ ಎಜ್ಯುಕೇಶನ್ ಜೊತೆಯಾಗಿ ಭಾರತದಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸುತ್ತಿದೆ. ಇದರ ಭಾಗವಾಗಿ ಆಕ್ಟ್ ಟು ರಿಸ್ಟೋರ್' ಎಂಬ 6 ತಿಂಗಳ ಪರಿಸರ ಅಭಿಯಾನ ನಡೆಯುತ್ತಿದೆ. ಇದು ಪರಿಸರ ಕುರಿತ ಮಾಹಿತಿ- ಶಿಕ್ಷಣ- ಸಂವಹನ ಅಭಿಯಾನ. ಅಭಿಯಾನದ ಭಾಗವಾಗಿ ಪ್ರತಿ ತಿಂಗಳೂ ಪರಿಸರ ವ್ಯವಸ್ಥೆಗಳ ಬಗ್ಗೆ ವೈಜ್ಞಾನಿಕ ಪೋಸ್ಟರ್‌ ಬಿಡುಗಡೆ ಮಾಡಲಾಗುತ್ತದೆ.


ಆಳ್ವಾಸ್ ಇಂಜಿನಿಯರಿಂಗ್ ಕಾಲೇಜ್‌ನ ಹರೀಶ್ ಭಟ್ 'ಪಕ್ಷಿವನ' ಈ ಅಭಿಯಾನದ ಜುಲೈ ತಿಂಗಳ ಪೋಸ್ಟರ್‍ನಲ್ಲಿ ಸ್ಥಾನ ಸಿಕ್ಕಿದೆ.


ಆಕ್ಟ್ ಟು ರಿಸ್ಟೋರ್' ಎಂಬ ಅಭಿಯಾನದಲ್ಲಿ ವಿದ್ಯಾರ್ಥಿಗಳು, ಉಪನ್ಯಾಸಕರು, ಯುವ ಸಂಘಟನೆಗಳು, NGOಗಳು, ಪತ್ರಕರ್ತರು, ಕಾರ್ಪೊರೇಟ್ ಕಂಪನಿಗಳು ಸೇರಿದಂತೆ ಪರಿಸರ ವ್ಯವಸ್ಥೆಗಳ ಮುಖ್ಯ ಬಳಕೆದಾರರನ್ನು ಒಳಗೊಂಡು ಜಾಗೃತಿ ಕಾರ್ಯಗಳನ್ನು ಮಾಡುವುದು ಇದರ ಮುಖ್ಯ ಉದ್ದೇಶ.

ಪ್ರತಿ ತಿಂಗಳು ವಿವಿಧ ಪರಿಸರ ವ್ಯವಸ್ಥೆಗಳ ಕುರಿತ ಕಾರ್ಯಕ್ರಮ ಮೂಲಕ ಜನರಿಗೆ ಹೆಚ್ಚಿನ ಮಾಹಿತಿ ನೀಡಿ, ಜಾಗೃತಿ ಮೂಡಿಸಲಾಗುತ್ತದೆ.


ಪರಿಸರ ನಾಶ ತಡೆದು, ಸುಸ್ಥಿರ ಉಳಿವಿಗಾಗಿ ಮಾಡಿದ ವಿನೂತನ ಪ್ರಯೋಗಗಳು ಹಾಗೂ ಅದಕ್ಕೆ ಸಂಬಂಧಿಸಿದ ಯಶಸ್ವೀ ಪರಿಸರ ಮಾದರಿಗಳನ್ನು ದೇಶಾದ್ಯಂತ ಈ ಪೋಸ್ಟರ್‍ಗಳ ಮೂಲಕ ಪ್ರಚಾರ ಮಾಡಲಾಗುತ್ತದೆ.


ಜುಲೈ ತಿಂಗಳ ಪೋಸ್ಟರ್ ಗೆ 'ಅರಣ್ಯ- ಪರಿಸರ ವ್ಯವಸ್ಥೆ' ಮುಖ್ಯ ವಿಷಯವಾಗಿತ್ತು. ಈ ಪರಿಕಲ್ಪನೆಯಲ್ಲಿ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜ್‌ ನ ಹರೀಶ್ ಭಟ್ 'ಪಕ್ಷಿವನ'ದ ಮಾದರಿ ಸೆಲೆಕ್ಟ್ ಆಗಿದೆ.


ದೇಶಾದ್ಯಂತ ರಚಿಸಲಾದ ಹಲವು ವಿನೂತನ ಪ್ರಯೋಗಗಳು ಆಯ್ಕೆ ಸಮಿತಿ ಮುಂದೆ ಬಂದಿದ್ದವು. ಸುದೀರ್ಘ ಪರಿಶೀಲನೆಯ ಬಳಿಕ ಆಳ್ವಾಸ್‍ನ ಈ ನೂತನ ಪ್ರಯೋಗ ಆಯ್ಕೆಯಾಗಿ ರಾಷ್ಟ್ರಮಟ್ಟದ ಜಾಗೃತಿ ಪೋಸ್ಟರ್‌ನಲ್ಲಿ ಸ್ಥಾನ ಪಡೆದಿದೆ ಎಂದು ಸೆಂಟರ್ ಫಾರ್ ಎನ್ವಿರಾನ್ಮೆಂಟ್ ಎಜ್ಯುಕೇಶನ್‍ನ ದಕ್ಷಿಣ ವಲಯದ ಸ್ಟೇಟ್ ಪ್ರಾಜೆಕ್ಟ್ ಕೊಆರ್ಡಿನೇಟರ್ ವ್ರಿಜುಲಾಲ್ ತಿಳಿಸಿದ್ದಾರೆ.