ಆಫ್ಘಾನಿಸ್ತಾನ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದ ಸೈಯದ್ ಅಹ್ಮದ್ ಸಾದತ್ ಈಗ ಜರ್ಮನಿಯಲ್ಲಿ ಪಿಜ್ಜಾ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾರೆ. ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ಬಳಿಕ ಅಫ್ಘಾನಿಸ್ತಾನ ತೊರೆದ ಅವರು, ಈಗ ಅನ್ಯ ದಾರಿ ಕಾಣದೆ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾರೆ.
ಸೈಯದ್ ಅವರು ಅಶ್ರಫ್ ಘನಿ ನೇತೃತ್ವದ ಸರ್ಕಾರದಲ್ಲಿ ಸಂವಹನ ಮತ್ತು ತಂತ್ರಜ್ಞಾನ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದರು. ಸುಮಾರು 20 ವರ್ಷಗಳ ಬಳಿಕ ತಾಲಿಬಾನ್ ಪಡೆಗಳು ಕಾಬೂಲ್ ಮೇಲೆ ಹಿಡಿತ ಸಾಧಿಸಿದ ನಂತರ ಸೈಯದ್ ಅವರು ಆಫ್ಘಾನಿಸ್ತಾನ ತೊರೆದಿದ್ದಾರೆ.
ಸದ್ಯ ಜರ್ಮನಿಯಲ್ಲಿರುವ ನೆಲೆ ಕಂಡಿರುವ ಅವರು ಅಲ್ಲಿ ತಮ್ಮ ಜೀವನೋಪಾಯಕ್ಕಾಗಿ ಪಿಜ್ಜಾ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ಮಾಧ್ಯಮ ಸಂಸ್ಥೆ ಅಲ್ ಜಜೀರಾ ವರದಿ ಮಾಡಿದ್ದು, ಹಲವು ಫೋಟೋಗಳನ್ನು ಶೇರ್ ಮಾಡಿದೆ.
