ಮಂಗಳೂರು ಸ್ಮಾರ್ಟ್ ಸಿಟಿ ಎಂಬ ಹೆಸರಿನಲ್ಲಿ ನಡೆಯುತ್ತಿರುವ ಕಾಮಗಾರಿಗಳು, ಮಂಗಳೂರು ಮಹಾನಗರ ಪಾಲಿಕೆ ಕಾಮಗಾರಿಗಳು ಅಧಿಕಾರಿಗಳು, ರಾಜಕಾರಣಿಗಳು ಭಾರೀ ದೊಡ್ಡ ಪ್ರಮಾಣದಲ್ಲಿ ಸಾರ್ವಜನಿಕ ಹಣವನ್ನು ಲೂಟಿ ಮಾಡುತ್ತಿದ್ದಾರೆ.
ಇದಕ್ಕೆ ಸಾಕ್ಷಿ ಎಂಬಂತೆ ಒಂದೇ ಮಳೆಗೆ ಮಂಗಳೂರಿನ ರಸ್ತೆಗಳು ಕರೆಯಾಗಿ ಮಾರ್ಪಟಾಗಿದೆ. ಕೋಟಿಗಟ್ಟಲೆ ಸುರಿದು ಮಾಡಿದ ಚರಂಡಿಗಳಲ್ಲಿ ನೀರು ಹರಿದುಹೋಗಲು ಯಾವುದೇ ವ್ಯವಸ್ಥೆ ಇಲ್ಲ. ಇದರಿಂದ ಮಳೆ ನೀರು ಸುಂದರ ಕಾಂಕ್ರೀಟ್ ರಸ್ತೆಯಲ್ಲೇ ಹರಿದುಹೋಗುತ್ತಿದೆ.
ಎಲ್ಲೆಲ್ಲೋ ಬಸ್ ನಿಲ್ದಾಣಗಳು, ಎಲ್ಲೆಲ್ಲೋ ಕಾಂಕ್ರೀಟ್ ರಸ್ತೆಗಳು ಹಾಕಿ ಜನರ ಹಕ್ಕು ಆಗಿರುವ ರಾಜ್ಯದ ಬೊಕ್ಕಸವನ್ನು ಈಗಾಗಲೇ ಲೂಟಿ ಮಾಡಲಾಗಿದೆ.
ಕಾಂಕ್ರೀಟ್ ಹಾಕಿದ ಒಂದೇ ವಾರದಲ್ಲಿ ಏನೇನೋ ನೆಪದಲ್ಲಿ ಕಾಂಕ್ರೀಟ್ ಕಟ್ ಮಾಡಲಾಗುತ್ತಿದೆ. ಹೇಳೋರಿಲ್ಲ, ಕೇಳೋರಿಲ್ಲ ಎಂಬಂತಾಗಿದೆ ಮಂಗಳೂರು ಜನರ ಪಾಡು.
ಪಾಲಿಕೆ ಮುಂಭಾಗದಲ್ಲೇ ಕಾಂಕ್ರೀಟ್ ರಸ್ತೆಗಳು ಧಾರಾಕಾರ ಮಳೆಗೆ ನೀರು ನಿಂತು ಪಾಲಿಕೆಯ ಬೇಜವಾಬ್ದಾರಿ ಕಾಮಗಾರಿಯ ದರ್ಶನ ಮಾಡಿದೆ. ಅಯೋಗ್ಯ ಪಾಲಿಕೆಯ ಅಧಿಕಾರಿಗಳು ಇದಕ್ಕೆ ಉತ್ತರ ಕೊಡಬೇಕಾಗಿದೆ.