ಹಿಂದೂ ದೇವರ ಬಗ್ಗೆ ಅವಹೇಳನ ಮಾಡಿದ ಆರೋಪದ ಮೇಲೆ ತೊಕ್ಕೊಟ್ಟಿನ ಉದ್ಯಮಿಯನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು ಸ್ವಾಲಿಜ್ ಇಕ್ಬಾಲ್ (45) ಎಂದು ಹೇಳಲಾಗಿದೆ.
ಈತ ತೊಕ್ಕೊಟ್ಟು ಸ್ಮಾರ್ಟ್ ಸಿಟಿ ವಸತಿ ಸಂಕೀರ್ಣದಲ್ಲಿ ಈತ ಫರ್ನಿಚರ್ ಅಂಗಡಿ ಸಹಿತ ವ್ಯಾಪಾರ ಮಾಡುತ್ತಿದ್ದ.
ಈತ ಹಿಂದೂ ದೇವರುಗಳ ಕುರಿತು ನಿಂದನೆಯ ಮಾತುಗಳನ್ನಾಡಿದ್ದ. ಅಲ್ಲದೆ, ಅದರ ಆಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದ. ಇದು ಸಖತ್ ವೈರಲ್ ಆಗಿತ್ತು.
ಈತ ಮಾಡಿದ್ದ ಈ ಕೃತ್ಯ ವ್ಯಾಪಕ ಜನಾಕ್ರೋಶಕ್ಕೂ ಕಾರಣವಾಗಿತ್ತು. ಆಡಿಯೋ ವೈರಲ್ ಆಗುತ್ತಿದ್ದಂತೆಯೇ, ಹಿಂದೂ ಸಂಘಟನೆಗಳ ಕಾರ್ಯಕರ್ತರು ನೀಡಿದ ದೂರಿನ ಅನ್ವಯ ಬಂಟ್ವಾಳ ಪೊಲಿಸರು ಆರೋಪಿಯ ವಿರುದ್ಧ ದೂರು ದಾಖಲಿಸಿಕೊಂಡಿದ್ಧಾರೆ.
ಇದೇ ವೇಳೆ, ಉಳ್ಳಾಲ ಪೊಲೀಸ್ ಠಾಣೆಯಲ್ಲೂ ಈತನ ವಿರುದ್ಧ ದೂರು ದಾಖಲಾಗಿದ್ದು, ಆರೋಪಿಯನ್ನು ಉಳ್ಳಾಲ ಪೊಲೀಸರು ಈತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.