-->
Nalin Tharavadu Dharma Nema | ನಳಿನ್ ಧರ್ಮನೇಮದಲ್ಲಿ ಮಿಥುನ್ ರೈ, ಡಿ.ಕೆ. ಸುರೇಶ್: ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೋಲ್

Nalin Tharavadu Dharma Nema | ನಳಿನ್ ಧರ್ಮನೇಮದಲ್ಲಿ ಮಿಥುನ್ ರೈ, ಡಿ.ಕೆ. ಸುರೇಶ್: ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೋಲ್
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಅವರ ಕುಟುಂಬದ ತರವಾಡು ಮನೆಯಲ್ಲಿ ಧರ್ಮನೇಮ ಸಹಿತ ಧಾರ್ಮಿಕ ಕಾರ್ಯಕ್ರಮಗಳು ಸಕಲ ಪೂಜಾ ವಿಧಿಗಳೊಂದಿಗೆ ಅದ್ದೂರಿಯಾಗಿ ನಡೆಯುತ್ತಿದೆ.


ಈ ಕಾರ್ಯಕ್ರಮದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳ ನಾಯಕರು ಭಾಗವಹಿಸಿದ್ದಾರೆ. ಧಾರ್ಮಿಕ ನಾಯಕರೂ, ಮಠಾಧಿಪತಿಗಳು ಧರ್ಮನೇಮೋತ್ಸವದಲ್ಲಿ ಪಾಲ್ಗೊಂಡಿದ್ದಾರೆ.


ಈ ಮಧ್ಯೆ, ರಾಜ್ಯದ ಏಕೈಕ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಹಾಗೂ ಕಳೆದ ಬಾರಿ ನಳಿನ್ ಅವರ ವಿರುದ್ಧ ಕೈ ಪಾಳಯದಿಂದ ಸ್ಪರ್ಧೆ ನಡೆಸಿದ್ದ ಮಿಥುನ್ ರೈ ಭಾಗವಹಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.


ಮಂಜೇಶ್ವರ, ಕಾಸರಗೋಡು ಕಡೆಯಿಂದ ಹಿಡಿದು ಉಡುಪಿ- ಬ್ರಹ್ಮಾವರದ ಕಡೆಯವರೆಗೆ ಸಂಘ ಪರಿವಾರದ ಯುವ ಸಮೂಹ ಈ ಫೋಟೋ ವಿರುದ್ಧ ಟ್ರೋಲ್ ಮಾಡಿದೆ.

ರಾಜಕೀಯವಾಗಿ ಮೇಲ್‌ಸ್ಥರದ ನಾಯಕರು ಒಂದಾಗಿದ್ದಾರೆ. ತಳಮಟ್ಟದಲ್ಲಿ ನಾವೆಲ್ಲ ಹೊಡೆದಾಟ ನಡೆಸಬೇಕು ಎಂಬರ್ಥದಲ್ಲಿ ಭಾರೀ ಚರ್ಚೆಗಳು ನಡೆಯುತ್ತಿವೆ. ಆದರೆ, ಇದೊಂದು ಧಾರ್ಮಿಕ ಕಾರ್ಯಕ್ರಮ. ಎಲ್ಲ ಪಕ್ಷ ಭೇದ ಮರೆತು ಒಂದಾಗಿ ಕಲೆತು ಸೇರಿರುವುದನ್ನೂ ಕೆಲವರು ಮೆಚ್ಚಿಕೊಂಡಿದ್ದಾರೆ.


ಇನ್ನೊಂದೆಡೆ, ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರ, ಮಾಸ್ಕ್‌ ಕಾಣೆಯಾಗಿರುವ ಬಗ್ಗೆಯೂ ಟ್ರೋಲ್ ಮಾಡಿದ್ದಾರೆ.


ಒಟ್ಟಿನಲ್ಲಿ, ಧರ್ಮ ನೇಮ ವಿವಿಧ ಕಾರಣಗಳಿಗೆ ಭಾರೀ ಸುದ್ದಿ ಮಾಡುತ್ತಿದೆ.

Ads on article

Advertise in articles 1

advertising articles 2

Advertise under the article